ಗೋಣಿಕೊಪ್ಪಲು, ಆ. 12: ತಿತಿಮತಿ ಸಮೀಪದ ನೋಕ್ಯ ಗ್ರಾಮದ ಕೃಷಿಕ ಚಪ್ಪುಡೀರ ಕಾರ್ಯಪ್ಪ ಅವರ ಭತ್ತದ ಗದ್ದೆ ಹಾಗೂ ಕಾಫಿ ತೋಟಕ್ಕೆ ಕಾಡಾನೆ ಧಾಳಿ ನಡೆಸಿ ಬೆಳೆಯನ್ನೆಲ್ಲ ನಾಶ ಮಾಡಿದೆ.
ಭತ್ತದ ಪೈರು, ತೋಟದಲ್ಲಿದ್ದ ತೆಂಗು, ಅಡಿಕೆ, ಬಾಳೆ ಗಿಡಗಳನ್ನು ತಿಂದು ಹಾಕಿವೆ. ಫಲಬಿಟ್ಟ ಕಾಫಿಗಿಡದ ರೆಂಬೆಗಳನ್ನು ಮುರಿದು ಹಾಕಿವೆ.
ಅರಣ್ಯ ಇಲಾಖೆಯವರು ಆನೆಗಳನ್ನು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಒಂದು ಆನೆಗಳನ್ನೂ ಕಾಡಿನತ್ತ ಓಡಿಸುತ್ತಿಲ್ಲ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.