ಮಡಿಕೇರಿ, ಆ. 12: ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ ಕೈಕೇರಿ ವತಿಯಿಂದ ಸಂಘದ ಕಟ್ಟಡ ಕೈಕೇರಿಯ ವಿಪ್ರಸಭಾ ಭವನದಲ್ಲಿ ಆಷಾಡ ಶುಕ್ರವಾರ ರಾತ್ರಿ ಪುತ್ತೂರಿನ ಪುರೋಹಿತ ನರಸಿಂಹಯ್ಯ ನೇತೃತ್ವದಲ್ಲಿ ಶ್ರೀ ದುರ್ಗಾ ದೀಪ ನಮಸ್ಕಾರ ಪೂಜೆಯು ಶಾಸ್ತ್ರೋಕ್ತವಾಗಿ ನೆರವೇರಿತು. ಶ್ರೀ ಭಗವತಿ ವಿಪ್ರ ಮಹಿಳಾ ಸಂಘದ ಸದಸ್ಯರು ಶ್ರೀ ಲಲಿತಾ ಸಹಸ್ರನಾಮ, ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ ವಾಚಿಸಿದರು. ಭಜನಾ ಕಾರ್ಯಕ್ರಮದ ಬಳಿಕ ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಿತು.