ಕೂಡಿಗೆ, ಆ. 10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ವತಿಯಿಂದ ಗೋಣಿಮರೂರು ಒಕ್ಕೂಟದಲ್ಲಿ ಆರೋಗ್ಯ ಮತ್ತು ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ದಲ್ಲಿ ಆಲೂರು-ಸಿದ್ದಾಪುರ ಪ್ರಾಥಮಿಕ ಕೇಂದ್ರದ ಆರೋಗ್ಯ ಸಹಾಯಕರು ರೋಗಗಳ ಲಕ್ಷಣ ಹಾಗೂ ರೋಗ ಹರಡುವ ರೀತಿ ಹಾಗೂ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.