ಮಡಿಕೇರಿ, ಆ. 12: ನಗರದ ಶ್ರೀ ಮುತ್ತಪ್ಪ ಹಾಗೂ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ತಾ. 15 ರಂದು ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಗಳು ನೆರವೇರಲಿವೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಸ್. ಪ್ರಕಾಶ್ ತಿಳಿಸಿದ್ದಾರೆ. ದೇವ ಸನ್ನಿಧಿ ಹಾಗೂ ಕ್ಷೇತ್ರದ ನಾಗವನದಲ್ಲಿ ಭಕ್ತರಿಂದ ಹಾಲು ಮತ್ತು ಎಳನೀರು ಅಭಿಷೇಕ, ಪಂಚ ಕಜ್ಜಾಯ ಸೇವೆಯು ಬೆಳಿಗ್ಗೆ 7 ರಿಂದ ಮಧ್ಯಾಹ್ನ 12.30ರ ತನಕ ನಡೆಯಲಿದ್ದು, ಮಹಾಪೂಜೆಯೊಂದಿಗೆ ಪ್ರಸಾದ ವಿತರಣೆ ನೆರವೇರಲಿದೆ ಎಂದು ತಿಳಿಸಿದ್ದಾರೆ.