ಮಡಿಕೇರಿ, ಆ. 12: ಇಲ್ಲಿನ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಾಗಿರುವ ಡಾ. ಜಗದೀಶ್ ಕೆ. ಅವರನ್ನು ಕರ್ನಾಟಕ ಆರೋಗ್ಯ ಇಲಾಖೆಯು ಆನೆಕಲ್ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ವರ್ಗಾವಣೆಗೊಳಿಸಿ ತಾ. 10 ರಂದು ಆದೇಶ ಹೊರಡಿಸಿದೆ. ರಾಜ್ಯದ ಹಲವು ವೈದ್ಯರ ವರ್ಗಾವಣೆಗೊಳಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ತೆರವುಗೊಳ್ಳಲಿರುವ ಸ್ಥಾನಕ್ಕೆ ಇನ್ನು ಯಾರ ಹೆಸರು ಸೂಚಿಸಿಲ್ಲ.