ಮಡಿಕೇರಿ, ಆ. 12: ಕೊಡಗು ಜಿಲ್ಲೆಯ ವೀರಾಜಪೇಟೆ, ಕುಶಾಲ ನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆಯನ್ನು ನಡೆಸಲು ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿ ಗಳನ್ನು ನೇಮಕ ಮಾಡಲಾಗಿದೆ.

ಸೋಮವಾರಪೇಟೆ ಪ.ಪಂ. ವಾರ್ಡ್ ಸಂಖ್ಯೆ 1 ರಿಂದ 11 ರವರೆಗೆ ಚುನಾವಣಾಧಿಕಾರಿ ಪಿ.ಎಸ್. ಮಹೇಶ್ (9483100536), ಸಹಾಯಕ ಚುನಾವಣಾಧಿಕಾರಿ ಹೆಚ್.ಪಿ. ಗಣೇಶ್ (9980311306), ಕುಶಾಲನಗರ ಪ.ಪಂ. ವಾರ್ಡ್ ಸಂಖ್ಯೆ 1 ರಿಂದ 8 ರವರೆಗೆ ಚುನಾವಣಾಧಿಕಾರಿ ಪ್ರಮೋದ್ ಸಿ.ಎಂ. (9483110621), ಸಹಾಯಕ ಚುನಾವಣಾಧಿಕಾರಿಯಾಗಿ ರಾಜೇಶ್ ಹೆಚ್.ಪಿ. (9480426663). ವಾರ್ಡ್ ಸಂಖ್ಯೆ 9 ರಿಂದ 16 ರವರೆಗೆ ಚುನಾವಣಾಧಿಕಾರಿಯಾಗಿ ಎಸ್. ವರದರಾಜು (9980 446951), ಸಹಾಯಕ ಚುನಾವಣಾಧಿಕಾರಿ ಬಾಲಕೃಷ್ಣ ರೈ (9480843156),

ವೀರಾಜಪೇಟೆ ಪ.ಪಂ.ಯ ವಾರ್ಡ್ ಸಂಖ್ಯೆ 1 ರಿಂದ 9ರವರೆಗೆ ಚುನಾವಣಾಧಿಕಾರಿಯಾಗಿ ಆರ್. ಗೋವಿಂದರಾಜು (9845909114), ಸಹಾಯಕ ಚುನಾವಣಾಧಿಕಾರಿಯಾಗಿ ಎಚ್.ಎ. ನಟೇಶ್ ಕುಮಾರ್ (9986638205), 10 ರಿಂದ 18 ರವರೆಗೆ ಚುನಾವಣಾಧಿಕಾರಿಯಾಗಿ ಚಾಲ್ರ್ಸ್ ಡಿಸೋಜಾ (974153 5835), ಸಹಾಯಕ ಚುನಾವಣಾ ಧಿಕಾರಿಯಾಗಿ ಶಿವರಾಜು (8904673536).

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‍ಗಳಿಗೆ ನಾಮಪತ್ರ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆಗಸ್ಟ್ 17 ರವರೆಗೆ ಸೋಮವಾರಪೇಟೆ ಪ.ಪಂ.ಯ 1 ರಿಂದ 11 ವಾರ್ಡ್‍ಗಳಿಗೆ ಸೋಮವಾರಪೇಟೆ ಪ.ಪಂ. ಕಚೇರಿ, ಕುಶಾಲನಗರ ಪ.ಪಂ. ವ್ಯಾಪ್ತಿಯ 1 ರಿಂದ 8 ವಾರ್ಡ್‍ಗಳಿಗೆ ಕುಶಾಲನಗರ ಪ.ಪಂ., 9 ರಿಂದ 16 ಕುಶಾಲನಗರ ಪ.ಪಂ. ಕಚೇರಿ (ಕೊಠಡಿ ಸಂಖ್ಯೆ-6), ವೀರಾಜಪೇಟೆ ಪ.ಪಂ. ವ್ಯಾಪ್ತಿಯ 1 ರಿಂದ 9 ವಾರ್ಡ್‍ಗಳಿಗೆ ವೀರಾಜಪೇಟೆ ತಾಲೂಕು ಕಚೇರಿ, 10 ರಿಂದ 18 ವಾರ್ಡ್‍ಗಳಿಗೆ ವೀರಾಜಪೇಟೆ ಪ.ಪಂ. ಕಚೇರಿ.

ನಾಮಪತ್ರ ಸಲ್ಲಿಸಲು ಬೇಕಾದ ಅರ್ಹತೆಗಳು ಮತ್ತು ದಾಖಲೆಗಳ ವಿವರ: ಪತ್ರ-2ರಲ್ಲಿ ನಾಮಪತ್ರ ಸಲ್ಲಿಸಬೇಕು. ರೂ.20ರ ಛಾಪಾ ಕಾಗದಲ್ಲಿ ಘೋಷಣಾ ಪತ್ರವನ್ನು ಸಲ್ಲಿಸಬೇಕು. ಅಭ್ಯರ್ಥಿಯು ಘೋಷಣಾ ಪತ್ರದ ಎಲ್ಲಾ ಪುಟಗಳಿಗೆ ಸಹಿ ಮಾಡಿರಬೇಕು. ಅಫಿಡವಿಟ್‍ನ ಎಲ್ಲಾ ಕಾಲಂಗಳನ್ನು ಭರ್ತಿ ಮಾಡಿರಬೇಕು. ನೋಟರಿ ಪಬ್ಲಿಕ್‍ರಿಂದ ದೃಢೀಕರಿಸಿರಬೇಕು. ಘೋಷಣಾ ಪತ್ರಗಳನ್ನು ಮೂರು ಪ್ರತಿಗಳಲ್ಲಿ ಸಲ್ಲಿಸಬೇಕು. (2 ಮೂಲ ಪ್ರತಿ ಮತ್ತು 1 ಜೆರಾಕ್ಸ್), ಸ್ಪರ್ಧಿಸುವ ಅಭ್ಯರ್ಥಿ ಆ ನಗರ ಸ್ಥಳೀಯ ಸಂಸ್ಥೆಯ ಮತದಾರರಾಗಿರಬೇಕು. ಮೀಸಲು ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧಿಕೃತ ಮೂಲ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು.

ನಗರ ಸ್ಥಳೀಯ ಸಂಸ್ಥೆಯ ಚುನಾವಣೆಗೆ ತಯಾರಿಸಿದ ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿ ಮತ್ತು ಸೂಚಕರ ಹೆಸರು ಇರುವ ಬಗ್ಗೆ ಮತದಾರರ ಪಟ್ಟಿಯ ದೃಢೀಕೃತ ಪ್ರತಿಯನ್ನು ಸಲ್ಲಿಸಬೇಕು. ಸ್ಪರ್ಧಿಸುವ ಅಭ್ಯರ್ಥಿಯ ಕನಿಷ್ಟ 21 ವರ್ಷ ವಯಸ್ಸಿನವರಾಗಿರಬೇಕು. ಒಬ್ಬ ಅಭ್ಯರ್ಥಿ 4 ನಾಮಪತ್ರಗಳನ್ನು ಮಾತ್ರ ಸಲ್ಲಿಸಬಹುದಾಗಿದೆ. ಮಾನ್ಯತೆ ಪಡೆದ ಪಕ್ಷವಾಗಿದ್ದಲ್ಲಿ ಒಬ್ಬರು ಸೂಚಕರು ಮತ್ತು ಪಕ್ಷೇತರವಾಗಿದ್ದಲ್ಲಿ 3 ಜನ ಸೂಚಕರ ಸಹಿ ಮಾಡಿರಬೇಕು (ಸೂಚಕ/ಸೂಚಕರು ಆ ವಾರ್ಡಿನ ಮತದಾರ/ ಮತದಾರರಾಗಿರಬೇಕು ಮತ್ತು ಇತ್ತೀಚಿನ 2 ಪಾಸ್ ಪೋರ್ಟ್ ಸೈಜಿನ ಫೋಟೋ ನೀಡಬೇಕು),

ಮಾನ್ಯತೆ ಪಡೆದ ಪಕ್ಷಗಳ ಅಭ್ಯರ್ಥಿಗಳಾಗಿದ್ದಲ್ಲಿ ಎ ಮತ್ತು ಬಿ ನಮೂನೆಗಳನ್ನು ಮತ್ತು ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿ ಗಳಾಗಿದ್ದಲ್ಲಿ ನಮೂನೆ-ಸಿ ಮತ್ತು ಡಿ ಗಳನ್ನು ಸಲ್ಲಿಸಬೇಕು. (ಮೂಲ ಪ್ರತಿಯನ್ನು ನಾಮಪತ್ರ ಸಲ್ಲಿಸುವ ಕೊನೆಯ ದಿನ ತಾ. 17 ರಂದು 3 ಗಂಟೆಯೊಳಗೆ ಸಲ್ಲಿಸಬೇಕು). ಠೇವಣಿ ಹಣ ಸಾಮಾನ್ಯ ಅಭ್ಯರ್ಥಿಯಾಗಿದ್ದಲ್ಲಿ ರೂ. 1,000, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆ ಆಗಿದ್ದಲ್ಲಿ ರೂ. 500, ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಪ್ರಮಾಣ ವಚನ ಸ್ವೀಕರಿಸಬೇಕು. ಚುನಾವಣಾ ಧಿಕಾರಿಗಳ ಕಚೇರಿಗೆ ಅಭ್ಯರ್ಥಿಯನ್ನು ಸೇರಿದಂತೆ 5 ಜನರಿಗೆ ಮಾತ್ರ ಪ್ರವೇಶವಿರುತ್ತದೆ. ಅಭ್ಯರ್ಥಿಗಳು 2 ಪಾಸ್‍ಪೋರ್ಟ್+ 2 ಸ್ಟಾಂಪ್ ಸೈಜ್ ಭಾವಚಿತ್ರವನ್ನು ಸಲ್ಲಿಸಬೇಕು.

ರಾಜ್ಯ ಚುನಾವಣಾ ಆಯೋಗವು ಮತಗಳ ಎಣಿಕೆ ಕಾರ್ಯವನ್ನು ಸೆಪ್ಟೆಂಬರ್ 1 ರಂದು ನಡೆಸಲು ನಿಗದಿಪಡಿಸಿತ್ತು, ಆದರೆ ಆಗಸ್ಟ್ 9ರ ಆದೇಶದಲ್ಲಿ ಮತಗಳ ಎಣಿಕೆ ದಿನಾಂಕವನ್ನು ಸೆಪ್ಟೆಂಬರ್ 3 ನಡೆಸಲು ಮತ್ತು ಚುನಾವಣಾ ಮಾದರಿ ನೀತಿ ಸಂಹಿತೆಯು ಸೆಷ್ಟೆಂಬರ್ 3 ರವರೆಗೆ ಜಾರಿಯಲ್ಲಿ ರುತ್ತದೆ ಎಂದು ಆದೇಶಿಸಿದೆ.

ಆದ್ದರಿಂದ ಕೊಡಗು ಜಿಲ್ಲೆಯ ವೀರಾಜಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 3 ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಮತ್ತು ಮತಗಳ ಎಣಿಕೆ ಕಾರ್ಯವು ಸೆಪ್ಟೆಂಬರ್ 1 ರ ಬದಲು ಸೆಪ್ಟೆಂಬರ್ 3 ರಂದು ಸಂಬಂಧಪಟ್ಟ ತಾಲೂಕು ಕೇಂದ್ರ ಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.