ಗೋಣಿಕೊಪ್ಪಲು, ಆ. 12: ಕಕ್ಕಡ ಸಂಭ್ರಮದ ಅಂಗವಾಗಿ ಕೊಡಗಿನ ಸಾಂಪ್ರದಾಯಿಕ ನೃತ್ಯ ಸ್ಪರ್ಧೆಯು ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ನಡೆಯಿತು. ಕಾವೇರಿ ಕಾಲೇಜು ವಿದ್ಯಾಸಂಸ್ಥೆ ಹಾಗೂ ಚಾನಲ್ 24 ಕರ್ನಾಟಕ ಆಶ್ರಯದಲ್ಲಿ ನಡೆದ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನು ಕಾರ್ಮಾಡು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಕ್ಕಚ್ಚೀರ ರೋನಾ ಭೀಮಯ್ಯ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಕೊಡಗಿನ ಕಲೆ, ಸಂಸ್ಕøತಿ, ಆಚಾರ, ವಿಚಾರಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಈ ನಾಡಿನ ಜನತೆಯ ಮೇಲಿದೆ. ಯುವ ಸಮೂಹ ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರು ಹೋಗುತ್ತಿರುವದು ವಿಪರ್ಯಾಸ ಕೊಡಗಿನ ಸಂಸ್ಕøತಿಗಳಲ್ಲೊಂದಾದ ಕೊಡವ ವಾಲಗವನ್ನು ಉಳಿಸಬೇಕು.ನಶಿಸಿ ಹೋಗದಂತೆ ಎಚ್ಚರವಹಿಸಬೇಕು. ಸರ್ಕಾರ ಕೂಡ ಈ ಬಗ್ಗೆ ವಿಶೇಷ ಪ್ರಾಧಿಕಾರವನ್ನು ರಚಿಸುವ ಮೂಲಕ ವಾಲಗ ಕಲಾವಿದರನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡಬೇಕು ಎಂದರು. ಛಾಯಾಗ್ರಾಹಕ ಸುದಾಮ ಪೆರಾಜೆ ಮಾತನಾಡಿ, ಕೊಡಗು ಜಿಲ್ಲೆ ಭಾಷೆ, ಸಂಸ್ಕøತಿಯಲ್ಲಿ ತನ್ನದೆ ಆದ ಚಾಪನ್ನು ಮೂಡಿಸಿದೆ ಎಂದರು.

ದಲಿತ ಸಂಘರ್ಷ ಸಮಿತಿಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಹೆಚ್.ಎ. ಅಭಿಜಿತ್ ಮಾತನಾಡಿ ಕೊಡಗಿನ ಶ್ರೀಮಂತಿಕೆ ಉಳಿದ ಪ್ರದೇಶಗಳಿಗೆ ಮಾದರಿ, ನಮ್ಮ ಪುಣ್ಯ ಭೂಮಿಯನ್ನು ಹೊರ ರಾಜ್ಯದವರಿಗೆ ಮಾರಾಟ ಮಾಡುತ್ತಿರುವದು ನಿಲ್ಲಬೇಕು. ಯುವ ಸಮೂಹ ಕೊಡಗಿನ ಸಂಸ್ಕøತಿಯನ್ನು ಉಳಿಸಲು ಪಣ ತೊಡಬೇಕು ಎಂದರು.

ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ಮಾತನಾಡಿ ಯುವ ಸಮೂಹ ಇಂದು ಸಾಮಾಜಿಕ ಜಾಲತಾಣದಲ್ಲಿ ಮಗ್ನವಾಗಿದೆ. ಗುರುಹಿರಿಯರನ್ನು ಗೌರವಿಸುವದು ಕಡಿಮೆಯಾಗಿದೆ. ಇದು ಆತಂಕಕಾರಿ ಬೆಳವಣಿಗೆ, ಸಮಾಜದಲ್ಲಿ ಮುಂದುವರೆಯಲು ದುಶ್ಚಟಗಳಿಂದ ಯುವ ಸಮೂಹ ದೂರವಿರಬೇಕೆಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೋ. ಸಿ.ಎಂ. ನಾಚಪ್ಪ, ಕಲೆ, ಸಂಸ್ಕøತಿಯನ್ನು ಉಳಿಸಲು ಹೆಚ್ಚು ಕಾರ್ಯಕ್ರಮಗಳು ಮೂಡಬೇಕು; ಕೊಡಗಿನ ಸಂಸ್ಕøತಿಗೆ ತನ್ನದೆ ಆದ ಗೌರವವಿದೆ ಇದನ್ನು ಕಾಪಾಡಿಕೊಳ್ಳಬೇಕು ಎಂದರು. ವೇದಿಕೆಯಲ್ಲಿ ಅರವಿಂದ್ ಜ್ಯುವೆಲ್ಲರ್ಸ್‍ನ ಬಿ.ವಿ. ರೋಷನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ಇಂತಿಯಾಸ್, ಕೆನರಾ ಬ್ಯಾಂಕ್‍ನ ಉದ್ಯೋಗಿ ಶ್ರೀಕಾಂತ್, ರದೀಶ್, ರಮೇಶ್, ಕಾಲೇಜಿನ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಆಸೀಫ್ ನಿರೂಪಿಸಿ, ವಂದಿಸಿದರು. ಸುತ್ತಮುತ್ತಲಿನ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ಅಮ್ಮಣಿಚಂಡ ಪ್ರವೀಣ್ ಹಾಗೂ ರಮೇಶ್ ಕಾರ್ಯನಿರ್ವಹಿಸಿದರು.