ಮಡಿಕೇರಿ, ಆ. 11: ಕೊಡಗು ಜಿಲ್ಲೆಯ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳ ವಿವಿರ ಈ ಕೆಳಗಿನಂತಿದೆ.

ಗೋಣಿಕೊಪ್ಪ ವರದಿ: ಕೊಡವ ಎಜುಕೇಷನ್ ಸಂಸ್ಥೆಯ ಸಂಸ್ಥಾಪಕ ದಿ. ಡಾ. ಮುಕ್ಕಾಟಿರ ಎಂ. ಚಂಗಪ್ಪ ಅವರ ಜನ್ಮಶತಮಾನೋತ್ಸವ ಹಾಗೂ ದಿ. ಚಿರಿಯಪಂಡ ಕೆ. ಪೂವಪ್ಪ ಅವರ ದಶ ಪುಣ್ಯಸ್ಮರಣೆಯನ್ನು ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಚರಿಸಲಾಯಿತು.

ಪುಷ್ಪ ನಮನ ಸಲ್ಲಿಸುವ ಮೂಲಕ ಅವರ ಶಿಕ್ಷಣ ಪ್ರೇಮವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಇವರುಗಳÀ ಸ್ಮರಣಾರ್ಥ ಜಿಲ್ಲಾಮಟ್ಟದ ಅಂತರ್ ಶಾಲಾ, ಕಾಲೇಜು ಚರ್ಚಾ ಸ್ಪರ್ಧೆ ನಡೆಯಿತು. ಪ್ರೌಢಶಾಲಾ ವಿಭಾಗದಲ್ಲಿ ಕೂಡಿಗೆಯ ಸೈನಿಕ ಶಾಲೆಯ ವಿದ್ಯಾರ್ಥಿ ನರೇಂದ್ರ ಪಂಡಿತ್ ರೊಡಗಿ ಪ್ರಥಮ, ಗೋಣಿಕೊಪ್ಪ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ಅನುóಷ ಪೊನ್ನಮ್ಮ ದ್ವಿತೀಯ ಬಹುಮಾನ ಪಡೆದುಕೊಂಡರು.

ಕಾಲೇಜು ಹಂತದ ಸ್ಪರ್ಧೆಯಲ್ಲಿ ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಕೆ. ಸಿ. ಸೂರಜ್ ಪೊನ್ನಣ್ಣ ಪ್ರಥಮ, ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿ ಹರಿಹರನ್ ದ್ವಿತೀಯ ಸ್ಥಾನ ಪಡೆದುಕೊಂಡರು. ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರೊ. ಭಾರತಿ ಹಾಗೂ ಸಿ.ಐ.ಟಿ ಕಾಲೇಜಿನ ಪ್ರೊ. ಸಿ. ಪ್ರಮುಖ್ ಗಣಪತಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಈ ಸಂದರ್ಭ ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಪಿ. ಬೆಳ್ಯಪ್ಪ, ಉಪಾಧ್ಯಕ್ಷ ಡಾ. ಎಂ.ಸಿ ಕಾರ್ಯಪ್ಪ, ಕಾರ್ಯದರ್ಶಿ ರಾಕೇಶ್ ಪೂವಯ್ಯ, ಜಂಟಿ ಕಾರ್ಯದರ್ಶಿ ಸಿ.ಎನ್. ರಾಜನಂಜಪ್ಪ, ಖಜಾಂಜಿ ಕೆ.ಎನ್ ಉತ್ತಪ್ಪ, ಸಿ.ಐ.ಪಿ.ಯು.ಸಿಯ ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ, ಸಿ.ಐ.ಟಿ. ಕಾಲೇಜು ಪ್ರಾಂಶುಪಾಲೆ ಪ್ರೊ. ಕವಿತ ಉಪಸ್ಥಿತರಿದ್ದರು.

ಸೋಮವಾರಪೇಟೆ: ಇಲ್ಲಿನ ಯಡೂರು ಸರ್ಕಾರಿ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19ನೇ ಸಾಲಿನ ಪ್ರಥಮ ವರ್ಷದ ಬಿ.ಎ. ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್ ವಹಿಸಿ ಮಾತನಾಡಿ, ಉತ್ತಮ ಬೋಧಕ ವೃಂದ ಸುಸಜ್ಜಿತ ಗ್ರಂಥಾಲಯ, ಪುಸ್ತಕಗಳು, ಕ್ರೀಡಾಂಗಣ, ವಿದ್ಯಾರ್ಥಿ ವೇತನಗಳು ಸೇರಿದಂತೆ ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶಿಸ್ತು, ಸಮಯಪಾಲನೆ ಮತ್ತು ಶ್ರದ್ದೆಯಿಂದ ವರ್ತಿಸಬೇಕು ಎಂದರು.

ವೇದಿಕೆಯಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರುಗಳಾದ ಪ್ರೊ. ಹೆಚ್.ಎನ್. ರಾಜು, ಬಿ.ಎಂ. ಪ್ರವೀಣ್‍ಕುಮಾರ್, ಕೆ.ಹೆಚ್. ಧನಲಕ್ಷ್ಮೀ ಕಾಲೇಜಿನ ಸಹಾಯಕ ಗ್ರಂಥಪಾಲಕರಾದ ವೈ.ಎನ್. ಧರ್ಮಪ್ಪ ಮತ್ತು ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.

ಗೋಣಿಕೊಪ್ಪ: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಂದ ಇತ್ತೀಚೆಗೆ ‘ಟಾಯ್ಸ್‍ಡೇ’ ಆಚರಿಸಲಾಯಿತು.

ಪುಟಾಣಿ ಮಕ್ಕಳು ಮನೆಯಿಂದ ತಾವು ದಿನನಿತ್ಯ ಆಟವಾಡುವ ವಿವಿಧ ಬಗೆಯ ಆಟದ ವಸ್ತುಗಳನ್ನು ತಂದು ಶಾಲೆಯ ವೇದಿಕೆಯಲ್ಲಿ ವಿವಿಧ ರೀತಿಯ ಚುಟುಕಗಳನ್ನು ಹೇಳುತ್ತಾ, ಆಟವಾಡುತ್ತಾ ಎಲ್ಲರನ್ನು ರಂಜಿಸಿದರು. ಪುಟಾಣಿಗಳಿಗೆ ಶಿಕ್ಷಕಿಯರಾದ ಮೀನಾ ಮೊಣ್ಣಪ್ಪ, ಯಾಮಿನಿ ಪೊನ್ನಪ್ಪ, ಪ್ರಿಯಾ ಪೊನ್ನಪ್ಪ, ಕೃತಿ ಗೌರಮ್ಮ ವಿವಿಧ ಬಗೆಯ ತರಬೇತಿಗಳನ್ನು ನೀಡಿದರು. ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಟ್ರಸ್ಟಿ ರಕ್ಷಿತ್ ಅಯ್ಯಪ್ಪ, ಶಾಲಾ ಸಂಸ್ಥಾಪಕಿ ಶಾಂತಿ ಅಚ್ಚಪ್ಪ, ಪ್ರಾಂಶುಪಾಲ ಎಸ್. ಅರುಣ್‍ಕುಮಾರ್ ಹಾಜರಿದ್ದರು.

ನಾಪೋಕ್ಲು: ಯವಕಪಾಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಜಾನ್‍ಪೌಲ್ ಡಿಸೋಜ ಸೋಮವಾರಪೇಟೆ ತಾಲೂಕಿನ ಬೆಸೂರು ಕ್ಲಸ್ಟರಿಗೆ ಸಂಪನ್ಮೂಲ ವ್ಯಕ್ತಿಯಾಗಿ ವರ್ಗಾವಣೆಗೊಂಡ ಹಿನ್ನೆಲೆ ಶಾಲಾ ಎಸ್‍ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಜಾನ್ 15 ಲೀಟರ್ ಕುಕ್ಕರ್‍ನ್ನು ಶಾಲೆಗೆ ಉದಾರವಾಗಿ ನೀಡಿದರು. ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಕುಟ್ಟಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಕೆ.ಪಿ. ತಮ್ಮಯ್ಯ, ಮುಖ್ಯೋಪಾಧ್ಯಾಯ ಎನ್.ಹೆಚ್. ಬಸವರಾಜು, ಎಸ್‍ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಶನಿವಾರಸಂತೆ: ಸಮೀಪದ ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗೋಣಿಮರೂರು ಕ್ಲಸ್ಟರ್ ವತಿಯಿಂದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ನಡೆಯಿತು. ಗ್ರಾಮಾಂತರ ಪ್ರದೇಶದ ವಿವಿಧ ಶಾಲೆಗಳ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿದ್ದ ವೈವಿಧ್ಯಮಯ ಪ್ರತಿಭೆ ಅನಾವರಣಗೊಂಡಿತು.

ಗೋಣಿಮರೂರು ಕ್ಲಸ್ಟರ್ ವ್ಯಾಪ್ತಿಯ 17 ಪ್ರಾಥಮಿಕ ಹಾಗೂ 5 ಪ್ರೌಢಶಾಲೆಗಳ 800ಕ್ಕೂ ಅಧಿಕ ವಿದ್ಯಾರ್ಥಿಗಳು ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಅಭಿನಯಗೀತೆ, ಕಥೆ ಹೇಳುವದು, ಚಿತ್ರಕಲೆ, ಕ್ಲೇಮಾಡೆಲಿಂಗ್, ಮಿಮಿಕ್ರಿ, ಕೋಲಾಟ, ಜಾನಪದ ನೃತ್ಯ, ರಸಪ್ರಶ್ನೆ, ಚರ್ಚಾ ಸ್ಪರ್ಧೆ ಇತ್ಯಾದಿ 54 ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಜನಮನ ರಂಜಿಸಿದರು. 45 ಶಿಕ್ಷಕರು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ವಸತಿ ಶಾಲೆ ಪ್ರಾಂಶುಪಾಲರಾದ ಕೆ.ಆರ್. ಭಾರತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಲೀಲಾವತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಲೋಕೇಶ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಚಿನ್ನಪ್ಪ, ಶಿಕ್ಷಕ ಡಿ.ಪಿ. ಸತೀಶ್, ಎಸ್.ಡಿ.ಎಂ.ಸಿ. ತಾಲೂಕು ಸಮನ್ವಯ ವೇದಿಕೆ ಅಧ್ಯಕ್ಷ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.

ಗೋಣಿಕೊಪ್ಪ: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಶಾಲೆಯ ಸಭಾಂಗಣದಲ್ಲಿ ಜರುಗಿತು. ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಟ್ರಸ್ಟಿ ರಕ್ಷಿತ್ ಅಯ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಲಹೆ-ಸೂಚನೆಗಳನ್ನು ನೀಡಿದರು.

ಶಾಲಾ ಸಂಸ್ಥಾಪಕಿ ಶಾಂತಿ ಅಚ್ಚಪ್ಪ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳು ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಲು ಕರೆ ನೀಡಿದರು. ವಿದ್ಯಾರ್ಥಿ ಸಂಘದ ಶಾಲಾ ನಾಯಕನಾಗಿ ಸಾಹಸ್ ಬಿದ್ದಪ್ಪ, ಶಾಲಾ ನಾಯಕಿಯಾಗಿ ರಿಶಾ ನಾಣಯ್ಯ, ಕ್ರೀಡಾ ನಾಯಕನಾಗಿ ಷಾಜಿಮ್ ಸುಲ್ತಾನ್, ಉಪನಾಯಕನಾಗಿ ಎಂ.ಕೆ. ಯಶಸ್, ಸಾಂಸ್ಕøತಿಕ ನಾಯಕಿಯಾಗಿ ಪೂಜಾ, ಉಪನಾಯಕಿಯಾಗಿ ಆಶಾ ಕುಮಾರಿ, ಶಿಸ್ತಿನ ನಾಯಕನಾಗಿ ಚಿಣ್ಣಪ್ಪ ಆಯ್ಕೆಯಾದರು. ಅಲ್ಲದೆ ಶಾಲೆಯ ವಿವಿಧ ಗುಂಪುಗಳ ‘ಫೀನಿಕ್ಸ್’ ತಂಡದ ನಾಯಕನಾಗಿ ಧ್ಯಾನ್ ಪೆಮ್ಮಯ್ಯ, ಉಪನಾಯಕಿಯಾಗಿ ದಿಶಾ ತಂಗಮ್ಮ, ‘ನೋಕ್ಟ’ ತಂಡದ ನಾಯಕಿಯಾಗಿ ಆಮ್ನ ಅಮೀರ್, ಉಪನಾಯಕನಾಗಿ ರಿವಿನ್ ಭೀಮಯ್ಯ, ‘ಪೆಗಸಸ್’ ತಂಡದ ನಾಯಕನಾಗಿ ಶಿಶಿರ್ ಕಾವೇರಪ್ಪ, ಉಪನಾಯಕಿಯಾಗಿ ಎಂ.ಜೆ. ಸರೋಜ್, ‘ಆಕ್ವಿಲಾ’ ತಂಡದ ನಾಯಕಿಯಾಗಿ ದೀಕ್ಷಿ ಮುತ್ತಮ್ಮ ಹಾಗೂ ಉಪನಾಯಕನಾಗಿ ಆಕಾಶ್ ಆಯ್ಕೆಯಾದರು.

ವಿದ್ಯಾರ್ಥಿ ನಾಯಕರಿಗೆ ಪ್ರಾಂಶುಪಾಲ ಎಸ್. ಅರುಣ್‍ಕುಮಾರ್ ಪ್ರಮಾಣ ವಚನ ಬೋಧಿಸಿದರು. ಬ್ಯಾಂಡ್ ಮಾಸ್ಟರ್ ರಾಹುಲ್ ಬೋಧಿ ನೇತೃತ್ವದ ವಾದ್ಯ ತಂಡಕ್ಕೆ ತಕ್ಕಂತೆ ವಿದ್ಯಾರ್ಥಿ ನಾಯಕರು ಪಥಸಂಚಲನ ನಡೆಸಿದರು. ಲೀಶ್ಮ ಸ್ವಾಗತಿಸಿ, ಸಾಹಸ್ ಬಿದ್ದಪ್ಪ ವಂದಿಸಿದರು.

ಮಡಿಕೇರಿ: ವಸತಿ ಶಾಲೆ ಕಕ್ಕಬೆಯಲ್ಲಿ ಜಂತುಹುಳು ನಿವಾರಣೆ ದಿನ ಆಚರಿಸಲಾಯಿತು. ಚೆಯ್ಯಂಡಾಣೆ ವೈದ್ಯಾಧಿಕಾರಿ ಡಾ. ಪಲ್ಲವಿ, ಶುಶ್ರೂಷಕಿ ಕಾವೇರಮ್ಮ, ಮುಖ್ಯ ಶಿಕ್ಷಕಿ ಕೆ.ಎಂ. ಸುಮಯ್ಯ, ಸಹ ಶಿಕ್ಷಕಿ ಕವಿತಾ ಹಾಜರಿದ್ದರು.

ಗೋಣಿಕೊಪ್ಪಲು: ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ಎಂ.ಜಿ. ಮೋಹನ್ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ.

ಉಪಾಧ್ಯಕ್ಷರಾಗಿ ಮನೆಯಪಂಡ ಸಿ. ಉತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಕೆ.ಆರ್. ಶಶಿಕಲಾ, ಸಹ ಕಾರ್ಯದರ್ಶಿಯಾಗಿ ಮಾಜಿ ತಾ.ಪಂ. ಸದಸ್ಯೆ ಎಂ.ಎಸ್. ಹಬೀಬುನ್ನೀಸಾ, ಸಂಘಟನಾ ಕಾರ್ಯದರ್ಶಿಯಾಗಿ ಎನ್.ಕೆ. ನಾರಾಯಣ ಸ್ವಾಮಿ ನಾಯ್ಡು, ಖಜಾಂಚಿಯಾಗಿ ಎಂ.ಪಿ. ಪ್ರಮೋದ್ ಕಾಮತ್, ನಿರ್ದೇಶಕರಾಗಿ ಎಂ.ಜೆ. ಮೈಕಲ್, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಎಂ.ಜಿ. ಕಾಂತರಾಜ್, ಹೆಚ್.ಎ. ಮೋಟಯ್ಯ, ಬಿ.ಟಿ. ಗಣೇಶ್ ರೈ, ನಿಸಾರ್ ಅಹಮ್ಮದ್, ಬಿ.ಎಂ. ರಮೇಶ್, ಎಂ. ಮಂಜುಳಾ, ಟಿ.ಎಲ್. ಶ್ರೀನಿವಾಸ್, ಎಂ.ಜಿ. ನಾರಾಯಣ ಹಾಗೂ ಎಂ.ಜಿ. ನಾಗರಾಜ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಶತಮಾನೋತ್ಸವ ಆಚರಣೆ ಹಿನ್ನೆಲೆ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗುವ ಸಭೆಗೂ ಪೂರಕ ಬೆಂಬಲ ಹಾಗೂ ಅದ್ಧೂರಿ ಆಚರಣೆ ಕುರಿತು ಇದೇ ಸಂದರ್ಭ ಚರ್ಚಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘ ರಚನೆ ಬಗ್ಗೆ ಶಾಲೆಯ ಕಲಾ ಶಿಕ್ಷಕ ಸತೀಶ್ ಹಾಗೂ ದೈಹಿಕ ಶಿಕ್ಷಕ ರಮಾನಂದ್ ಅವರಿಗೆ ಜವಾಬ್ದಾರಿ ನೀಡಲಾಗಿದ್ದು, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಶಶಿಕಲಾ ಹಾಗೂ ಇತರರು ಇದ್ದರು.ವೀರಾಜಪೇಟೆ: ಇಲ್ಲಿಗೆ ಸಮೀಪದ ಬಿ.ಸಿ. ಪ್ರೌಢಶಾಲೆಯಲ್ಲಿ ನಡೆದ 2018-19ನೇ ರೋಟರಿ ಸಂಸ್ಥೆ ವತಿಯಿಂದ 5ನೇ ವರ್ಷದ ಗುರುತಿನ ಚೀಟಿ ವಿತರಣಾ ಸಮಾರಂಭ ಶಾಲಾ ಅಧ್ಯಕ್ಷ ಮುಕ್ಕಾಟಿರ ಸುನಿಲ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ರವಿ ಅವರು ಉಚಿತವಾಗಿ ಶಾಲೆಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸಿದರು. ನಂತರ ಮಾತನಾಡಿ, ರೋಟರಿ ಸಂಸ್ಥೆ ನಡೆದು ಬಂದ ಹಾದಿ, ಇದರ ಧ್ಯೇಯ ಮತ್ತು ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷ ಮುಕ್ಕಾಟಿರ ಸುನಿಲ್ ನಾಣಯ್ಯ ಮಾತನಾಡಿ, ಕಳೆದ 5 ವರ್ಷಗಳಿಂದ ರೋಟರಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸುತ್ತಿರುವ ಬಗ್ಗೆ ತಿಳಿಸಿ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಶಾಲಾ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್ ಸ್ವಾಗತಿಸಿದರು. ರೋಟರಿ ಸಂಸ್ಥೆಯ ಸದಸ್ಯರಾದ ಆದಿತ್ಯ, ಸತೀಶ್ ಗಣಪತಿ, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆಲೂರು-ಸಿದ್ದಾಪುರ: ಸ್ವಚ್ಛ ಭಾರತ್ ಮಿಷನ್ ಯೋಜನೆಯ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ಎಂಬ ನೂತನ ಯೋಜನೆಯ ಅಂಗವಾಗಿ ಗಣಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಸಂಗೈನಪುರ ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಾಗೂ ಜನರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗಣಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತ ಪಾಲ್ಗೊಂಡು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನರು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ತಮ್ಮ ಮನೆಯ ಸುತ್ತಮುತ್ತ ಸೇರಿದಂತೆ ದನದ ಕೊಟ್ಟಿಗೆಗಳು ಹಾಗೂ ಅಡುಗೆ ಕೋಣೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕಾಗಿದೆ. ಎಲ್ಲರೂ ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಗ್ರಾಮದ ನೈರ್ಮಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದು, ಇದು ಕೇವಲ ಯೋಜನೆಗಳಾಗಬಾರದು ಎಂಬ ಉದ್ದೇಶದಿಂದ ಪಂಚಾಯಿತಿ ವತಿಯಿಂದ ನೈರ್ಮಲ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಾಗೂ ಗ್ರಾಮದ ಅಂಗನವಾಡಿಗಳ ಸುತ್ತ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದರು.

ಈ ಸಂದರ್ಭ ಪಂಚಾಯಿತಿ ಸದಸ್ಯ ಶಶಿಕುಮಾರ್, ಚೈಲ್ಡ್ ಲೈನ್ ಸಂಸ್ಥೆಯ ಕುಸುಮ, ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವತ್ ಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಒಡೆಯನಪುರ: ಸಮೀಪದ ನಂದಿಗುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಂದಿಗುಂದ ಗ್ರಾಮದ ದಾನಿಗಳಾದ ಎನ್.ಆರ್. ಹೂವಯ್ಯ ಮೀನಾಕ್ಷಿ ಹೂವಯ್ಯ ದಂಪತಿ ಶಾಲಾ ಪ್ರವೇಶ ದ್ವಾರಕ್ಕೆ ನಾಮಫಲಕವನ್ನು ಕೊಡುಗೆ ನೀಡಿದರು.

ಈ ಸಂದರ್ಭ ಶಾಲಾ ವತಿಯಿಂದ ದಾನಿಗಳಾದ ಹೂವಯ್ಯ ಮತ್ತು ಮೀನಾಕ್ಷಿ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹೂವಯ್ಯ, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಸರಕಾರಿ ಶಾಲೆಗಳಿದ್ದು ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಎನ್.ಬಿ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಾನಿ ಮೀನಾಕ್ಷಿ, ಶಾಲಾ ಮುಖ್ಯ ಶಿಕ್ಷಕ ಒ.ಜೆ. ಗಣಪತಿ, ಮಾಜಿ ಅಧ್ಯಕ್ಷೆ ಯು.ಜೆ. ಶೀಲಾವತಿ, ಮಾಜಿ ಉಪಾಧ್ಯಕ್ಷ ಜಿ.ಎನ್. ಯತೀಶ್, ಗೌಡಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ಹೆಚ್. ಧರ್ಮ ಆಚಾರಿ, ಪ್ರಮುಖರಾದ ಶಾಂತಕುಮಾರ್, ದಿವಾಕರ್, ಆಶಾ, ಯಶೋಧ, ವಿಜಯಲಕ್ಷ್ಮಿ, ಗಾಯತ್ರಿ, ಸವಿತ, ಶಿಕ್ಷಕರಾದ ವಸಂತಿ, ಕಾಳಮ್ಮ, ಗಿರಿಜಾಂಬ ಮುಂತಾದವರು ಹಾಜರಿದ್ದರು.

ನಾಪೆÇೀಕ್ಲು: ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೂ ವಿತರಿಸಲಾಯಿತು.

ಈ ಸಂದರ್ಭ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಪ್ರಬಾರ ಮುಖ್ಯ ಶಿಕ್ಷಕ ಎ.ಟಿ. ಸುಬ್ರಮಣಿ, ಶಿಕ್ಷಕಿ ಶೋಭ, ರೆಜೀನಾ, ಮಾಲತಿ ಇದ್ದರು.

ಮಡಿಕೇರಿ: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಾಯಕತ್ವ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಸ್ಥೆಯ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮಾತನಾಡಿ, ನಾಯಕತ್ವ ಗುಣ ಬಹಳ ಮುಖ್ಯ. ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣನವರು ಮಾತನಾಡಿ, ನಾಯಕತ್ವ ಗುಣ ಇಲ್ಲದಿದ್ದರೆ ಬೆಳೆಯುವದು ಅಸಾಧ್ಯ. ಕಲಿಯುವ ಹಂಬಲ ವಿದ್ಯಾರ್ಥಿಗಳಲ್ಲಿ ಇರಬೇಕಾಗುತ್ತದೆ ಎಂದರು. ಶಿಬಿರದ ತರಬೇತುದಾರರಾಗಿ ಅಂತರರಾಷ್ಟ್ರೀಯ ತರಬೇತುದಾರರಾದ ಸಚಿನ್ ಕಾಮತ್ ಮತ್ತು ಕ್ಲಾರಿಸಾ ಭಾಗವಹಿಸಿದ್ದರು.

ವಿದ್ಯಾರ್ಥಿನಿಯರಾದ ಅಮೃತ ಮತ್ತು ನಮೃತಾ ಪ್ರಾರ್ಥಿಸಿದರು. ನವೀನ್ ನಾಟೋಳಂಡ ಸ್ವಾಗತಿಸಿ, ಉಪನ್ಯಾಸಕ ದರ್ಶನ್ ಮಾದಪ್ಪ ನಿರೂಪಿಸಿ ಹರ್ಷ ಮಂದಣ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸಿ. ಸುಬ್ರಮಣಿ ಹಾಗೂ ಸದಸ್ಯ ಬಡುವಂಡ ಯು. ಪೂವಣ್ಣ, ಬಡುವಂಡ ಚಿಣ್ಣಪ್ಪ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗದವರು ಹಾಜರಿದ್ದರು.ಕೂಡಿಗೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಸಮೂಹ ಸಂಪನ್ಮೂಲ ಕೇಂದ್ರ ಕೂಡಿಗೆ, ಜ್ಞಾನೋದಯ ಶಾಲೆ ಕೂಡಿಗೆ ಇವರ ಸಂಯುಕ್ತ ಆಶ್ರಯದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆ ಕಾರ್ಯಕ್ರಮ ಜ್ಞಾನೋದಯ ಶಾಲಾ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟನೆಯನ್ನು ಜ್ಞಾನೋದಯ ಶಾಲೆ ಆಡಳಿತ ಮಂಡಳಿಯ ಮುಖ್ಯಸ್ಥ ಮುತ್ತಪ್ಪ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಎನ್. ನಾಗರಾಜಚಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸದ್ಗುರು ಅಪ್ಪಯ್ಯ, ಪ್ರೌಢಶಾಲೆಯ ಶಿಕ್ಷಕ ಶಿವಪ್ರಸಾದ್, ನುಬಿನಾ, ಶಿಕ್ಷಕದ ಸಂಘದ ಪದಾಧಿಕಾರಿಗಳಾದ ಖಾನ್, ಸೌಭಾಗ್ಯ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ ಮಟ್ಟದ 18 ಪ್ರಾಥಮಿಕ ಪ್ರೌಢಶಾಲೆಗಳು ಭಾಗವಹಿಸಿದ್ದವು.

ವೀರಾಜಪೇಟೆ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದೇವಣಗೇರಿಯ ಬಿ.ಸಿ. ಪ್ರೌಢಶಾಲೆಯ ವಿದ್ಯಾರ್ಥಿಗಳು 9 ಪ್ರಥಮ ಸ್ಥಾನ, 2 ವಿಭಾಗದಲ್ಲಿ ದ್ವಿತೀಯ ಸ್ಥಾನಗಳು ಹಾಗೂ 4 ವಿಭಾಗದಲ್ಲಿ ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ. ಈ ಮೂಲಕ ಶಾಲೆ ಕ್ಲಸ್ಟರ್ ಮಟ್ಟದ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಗೋಣಿಕೊಪ್ಪ ವರದಿ: ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪೊನ್ನಂಪೇಟೆ ವಲಯ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ವಿದ್ಯಾರ್ಥಿಗಳು ಪಾಲ್ಗೊಂಡರು. ಈ ಸಂದರ್ಭ ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ರಂಡ ರೇಖಾ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಚೋಡುಮಾಡ ಶೈಲಾ, ಈಶ್ವರ ಯುವಕ ಸಂಘ ಅಧ್ಯಕ್ಷ ಮತ್ರಂಡ ರಾಜೇಂದ್ರ, ಅರಣ್ಯ ವಲಯ ಅಧಿಕಾರಿ ಹೆಚ್.ಎಸ್. ಗಂಗಾಧರ್, ಶಾಲಾ ಮುಖ್ಯ ಶಿಕ್ಷಕಿ ಸುಜಾತ ಪಾಲ್ಗೊಂಡಿದ್ದರು.

ಮಡಿಕೇರಿ: ಸಮರ್ಥ ಕನ್ನಡಿಗ ಸಂಸ್ಥೆಯಿಂದ ಆಯೋಜಿತ ಹಿಮವನ ಪ್ರತಿಭಾ ಸ್ಪರ್ಧೆ ಅಂಗವಾಗಿ ಹಲವಾರು ಸ್ಪರ್ಧೆಗಳು ಆಯೋಜಿತವಾಗಿದ್ದವು. 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆ ಜರುಗಿತು. ಸಮರ್ಥ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ಎನ್.ಟಿ. ಬೋಳಾರ್, ಗೋಣಿಕೊಪ್ಪಲು ಕವಯತ್ರಿ ಕೆ.ಟಿ. ಕೌಶಲ್ಯ, ಸಾಹಿತಿ ಗಿರೀಶ್ ಕಿಗ್ಗಾಲು ಉಪಸ್ಥಿತರಿದ್ದರು. ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಪ್ರಬಂಧ ಸ್ಪರ್ಧೆ ಆಯೋಜಿತವಾಗಿತ್ತು. 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವಿಭಾಗ ವಚನಗಾಯನ ಸ್ಪರ್ಧೆ ಜರುಗಿತು. ಡಾ. ಗಂಗಾಧರ್, ಬಿ.ಎಂ. ಸಂತೋಷ್ ಕುಮಾರ್, ಸುಮಿತ್ರ ಬಾಲಕುಮಾರ್ ಉಪಸ್ಥಿತರಿದ್ದರು.

8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಆಶುಭಾಷಣ ಸ್ಪರ್ಧೆ ಆಯೋಜಿಸಲ್ಪಟ್ಟು ಮೈಸೂರಿನ ಸ್ವಾಮಿ ವಿವೇಕಾನಂದ ಯುವ ಚರ್ಚಾಪಟುಗಳ ವೇದಿಕೆ ಅಧ್ಯಕ್ಷ ಕೃ.ಪಾ. ಮಂಜುನಾಥ್, ಶಿಕ್ಷಕ ದಿನೇಶ್ ಕಾನ್‍ಬೈಲು ಉಪಸ್ಥಿತರಿದ್ದರು. ವೇದಿಕೆ ನಿರ್ವಹಣೆ ಹಾಗೂ ನಿರೂಪಣೆ ಕಾರ್ಯಾಗಾರವನ್ನು ಲಿಂಗೇಶ್ ಹುಣಸೂರು ನಿರ್ವಹಿಸಿದರು.

ಪಿ.ಯು.ಸಿ. ವಿದ್ಯಾರ್ಥಿಗಳಿಗೆ ವೈಯಕ್ತಿಕ ವಿಭಾಗದಲ್ಲಿ ಕನ್ನಡ ಭಾವಗೀತೆ ಸ್ಪರ್ಧೆ ಜತೆಗೆ ಕನ್ನಡ ಜಾಗೃತಿ ಕವಿಗೋಷ್ಠಿ ಜರುಗಿತು. ಮಂಗಳೂರಿನ ಸಾಹಿತಿ, ಚಿತ್ರ ನಿರ್ದೇಶಕ ಸುಳ್ಯದ ಭೀಮರಾವ್ ವಾಷ್ಠರ್, ಹಿರಿಯ ಸಾಹಿತಿ, ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಪಾಲ್ಗೊಂಡಿದ್ದರು. ಉಮೇಶ ಮುನವಳ್ಳಿ, ಧಾರವಾಡ ಕೋಟೋಜಿರಾವ್ ಆರ್. ಶಿಕಾರಿಪುರ, ಶಿವಶಂಕರ್ ಕಾರ್ಕಳ, ಕೆ.ಪಿ. ಭಾರತಿ ಸುರೇಶ್, ಸುರೇಶ್ ರಾವ್ ಚವ್ಹಾಣ್ ಜಿ. ಕವನ ವಾಚಿಸಿದರು.

ಪರಿಸರ ಜಾಗೃತಿ -ಮಾತು ಕಥೆಯಲ್ಲಿ ಪರಿಸರ ಜಾಗೃತಿಯ ಪ್ರಧಾನ ಸಂಚಾಲದ ಎಂ.ಬಿ. ಸಂತೋಷ್ ಕುಮಾರ್ ಪಾಲ್ಗೊಂಡಿದ್ದು, ಯುವ ಸಾಹಿತಿ ಶಿವಶಂಕರ್ ಕ�