ಸುಂಟಿಕೊಪ್ಪ, ಆ.11 : ಸರಕಾರ ನಿಗಧಿ ಪಡಿಸಿರುವ ದರಕ್ಕಿಂತ ದುಪ್ಪಟ್ಟು ದರವನ್ನು ಕೊಡಗರಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಸಾಮಗ್ರಿಗಳಿಗೆ ಪಡೆಯಲಾಗುತ್ತಿದೆ. ಕಾಡಾನೆ ಹಾವಳಿ ನಿಯಂತ್ರಿಸಿ, ಕುಡಿಯುವ ನೀರು, ವಿದ್ಯುತ್ ವ್ಯತ್ಯಯ ಹಾಗೂ ಚರಂಡಿ ಸೂರು ಕಲ್ಪಿಸಿಕೊಡಿ ಎಂದು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಒತ್ತಾಯಿಸಿದರು.

ಕೊಡಗರಹಳ್ಳಿ ಗ್ರಾ.ಪಂ.ಯ 2018-19ನೇ ಸಾಲಿನ ಗ್ರಾಮಸಭೆಯು ಕೊಡಗರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ ಹೆಚ್.ಇ. ಅಬ್ಬಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಭಾರಿಯ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದೆ. ಮನೆಗಳಿಗೂ ಮರ ಬಿದ್ದಿದೆ. ಚರಂಡಿ ಇಲ್ಲದೆ ರಸ್ತೆ ಹಾಳಾಗಿದೆ. ಸೆಸ್ಕ್ ಇಲಾಖೆಯವರಿಗೆ ಕರೆಮಾಡಿದರೆ ಸ್ವೀಕರಿಸುತ್ತಿಲ್ಲ. ವಿದ್ಯುತ್ ಸಂಪರ್ಕ ಕಡಿತ ಗೊಳಿಸಿ ಮನೆಗೆ ಬೀಳಲಿರುವ ಕಂಬ ತೆರವು ಗೊಳಿಸಲು ಲೈನ್‍ಮೆನ್ ಸ್ಪಂದಿಸುತ್ತಿಲ್ಲ. ಕೊಡಗರಹಳ್ಳಿ ನ್ಯಾಯಬೆಲೆ ಅಂಗಡಿ ಯಲ್ಲಿ ಬಡ ಕೂಲಿ ಕಾರ್ಮಿಕರಿಗೆ ಪಡಿತರ ಅಕ್ಕಿ, ಸಾಮಾಗ್ರಿ, ಸೀಮೆಎಣ್ಣೆಗೆ 1 ರೂ., 2 ರೂ. ಅದಿಕ ವಸೂಲಿ ಮಾಡುತಿದ್ದಾರೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ವರ್ಷವಾದರೂ ಲಭ್ಯವಾಗುತ್ತಿಲ್ಲ. ಆಹಾರ ಇಲಾಖೆ ಅಧಿಕಾರಿ ರಾಜಣ್ಣ ಗ್ರಾ.ಪಂ. ಜನಜಾಗೃತಿ ಸಮಿತಿಗೆ ದೂರು ನೀಡಿದರೆ ಅದನ್ನು ತಹಶೀಲ್ದಾರರಿಗೆ ರವಾನಿಸಿ ಇದರ ಬಗ್ಗೆ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಡಲಾಗುವ ದೆಂದರು. ಕುಡಿಯುವ ನೀರು ತಿಂಗಳಿಗೆ 10 ದಿನ ಬಂದರೆ ನಂತರ ನೀರು ಲಭ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರಾದ ಸುನಿಲ್, ಸುಕುಮಾರ್, ಶ್ರೀನಾಥ್, ಲೂಯಿಸ್, ಅನಿಲ್ ಕುಮಾರ್, ಉಗ್ಗಪ್ಪ ಅವರು ಗಂಭೀರವಾಗಿ ಚರ್ಚಿಸಿದರು. ಇದಕ್ಕೆ ಉತ್ತರಿಸಿದ ಗ್ರಾ.ಪಂ. ಅಧ್ಯಕ್ಷ ಅಬ್ಬಾಸ್ ಪಂಚಾಯಿತಿ ಆಡಳಿತದಿಂದ ಶ್ರೀ ಸಾಮಾನ್ಯರಿಗೆ ಸೌಲಭ್ಯ ಕಲ್ಪಿಸುವದು ನಮ್ಮ ಕರ್ತವ್ಯ. ಮಳೆ ಗಾಳಿ ಹಾನಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡರೂ ಗ್ರಾಮಸ್ಥರ ನೆರವಿನಿಂದ ಸೆಸ್ಕ್ ಇಲಾಖೆಯ ಸಹಕಾರದಿಂದ ವಿದ್ಯುತ್ ಒದಗಿಸಿ ಕೊಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದೇವೆ ಎಂದರು.

ಪಂಚಾಯಿತಿ ಅನುದಾನದಲ್ಲಿ 14ನೇ ಹಣಕಾಸು ಯೋಜನೆಯಡಿ ಉದ್ಯೋಗಖಾತ್ರಿ ಅನುದಾನದಲ್ಲಿ ತಾ.ಪಂ., ಜಿ.ಪಂ. ಸದಸ್ಯರೊಂದಿಗೆ ಶಾಸಕರನ್ನು ಸಂಪರ್ಕಿಸಿ ಈ ಗ್ರಾಮದ ಅಬಿವೃದ್ಧಿಗೆ ಶ್ರಮಿಸುವ ಆಶ್ವಾಸನೆ ನೀಡಿದರು. ಕೊಡಗರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಬೀಳುವ ಸ್ಥಿತಿಯಲ್ಲಿದೆ. ಇಲ್ಲೇ ಗ್ರಾಮ ಸಭೆ ನಡೆಸಲಾಗುತ್ತಿದೆ. ಜನಪ್ರತಿನಿಧಿಗಳು ಈ ಶಾಲೆಯನ್ನು ದುರಸ್ಥಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಮಳೆಯಿಂದ ಮನೆಗೆ ನೀರು ನುಗ್ಗಿದೆ, ತಡೆ ಗೋಡೆ ನಿರ್ಮಿಸಿಕೊಡಿ, ಮನೆಗೆ ಪಕ್ಕದ ತೋಟದ ಮರ ಬೀಳಲಿದ್ದು ನಮಗೆ ಜೀವ ಹಾನಿ ಆಗಲಿದೆ, 3 ವರ್ಷದಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪ್ಲಾಸ್ಟಿಕ್ ಮುಕ್ತ ಸಮಾಜ ಮಾಡಲು ಪ್ರತಿಯೊಬ್ಬರ ಮನೆಯಿಂದಲು ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಮೋಬಿನ್ ತೋಮಸ್ ಹಾಗೂ ಪ್ರೇಮ ಅವರು ಕಳವಳ ವ್ಯಕ್ತಪಡಿಸಿದರು.

ಆಹಾರ ಮತ್ತು ಗ್ರಾಹಕರ ಸರಬರಾಜು ಇಲಾಖೆಗೆ ಬಡವರು ಪಡಿತರ ಚೀಟಿಗೆ ಅರ್ಜಿಸಲ್ಲಿಸಿ 2 ವರ್ಷವಾದರೂ ಅದು ಲಭ್ಯವಾಗಿಲ್ಲ ಎಂದು ಗ್ರಾ.ಪಂ. ಸದಸ್ಯೆ ಜಯಲಕ್ಷ್ಮಿ ಆಹಾರ ಇಲಾಖೆ ಪರಿವೀಕ್ಷಕರನ್ನು ತರಾಟೆಗೆ ತೆಗೆದುಕೊಂದರು. ಸ್ವಚ್ಚ ಭಾರತ್ ಮಿಷನ್ ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ, ಸೆಸ್ಕ್ ಅಧಿಕಾರಿಗಳು, ಸಭೆಯಲ್ಲಿ ಭಾಗವಹಿಸಿ, ಮಾಹಿತಿ ನೀಡಿದರು. ಹಕ್ಕು ಮಾಹಿತಿಯಡಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ 1 ತಿಂಗಳು, 10 ದಿನವಾದರೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಸುನಿಲ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಾಹಿತಿ ಸಿದ್ದವಾಗಿದೆ, ಇಂದೇ ಪಡೆದುಕೊಳ್ಳಿ ಎಂದರು. ಈ ಸಭೆಯಲ್ಲಿ ಗ್ರಾ.ಪಂ. ಪಿ.ಡಿ.ಒ, ಉಪಾದ್ಯಕ್ಷೆ ಪ್ರೇಮ, ಜಿ.ಪಂ ಸದಸ್ಯ ಪಿ.ಎಮ್. ಲತೀಫ್, ತಾ.ಪಂ. ಸದಸೆ ಹೆಚ್.ಡಿ.ಮಣಿ, ಗ್ರಾ.ಪಂ. ಸದಸ್ಯರುಗಳಾದ ಸುಮಿತ್ರ, ಲಲಿತ, ವಸಂತ, ಕುಸುಮ, ಉಸ್ಮಾನ್, ಜಯಲಕ್ಷಿ, ಸಲೀಂ, ನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.