ಮಡಿಕೇರಿ, ಆ. 11: ಮಡಿಕೇರಿ ನಗರಸಭಾ ವ್ಯಾಪ್ತಿಯ 16ನೇ ವಾರ್ಡ್ಗೆ ಸೇರಿದ ವಸತಿ ಪ್ರದೇಶ ಬಳಿಯಲ್ಲಿ ಹೆದ್ದಾರಿ ಕುಸಿದು ಭಾರೀ ವಾಹನಗಳ ಸಂಚಾರಕ್ಕೆ ತೊಡಕಾಗಿ ರುವ ಸ್ಥಳಕ್ಕೆ ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಹುಶಃ ಭಾರತ ದೂರವಾಣಿ ಸಂಚಾರ ನಿಗಮ ಹಾಗೂ ಇತರ ಕೇಬಲ್ಗಳನ್ನು ಹೆದ್ದಾರಿ ಬದಿ ಸುರಂಗ ತೆಗೆದು ಅಳವಡಿಸಿರುವ ವೇಳೆ, ಸಮರ್ಪಕವಾಗಿ ಮುಚ್ಚದ ಪರಿಣಾಮ ಅಂತಹ ಕಡೆ ವಿಪರೀತ ಮಳೆಯಿಂದ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಈ ಸಂಬಂಧ ಜಿಲ್ಲಾಧಿಕಾರಿಗಳ ಗಮನ ಸೆಳೆದು ಸಂಬಂಧಿಸಿದವರಿಗೆ ನೋಟೀಸ್ ಜಾರಿಗೊಳಿಸಿ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಾರ್ಯಪಾಲಕ ಅಭಿಯಂತರರು, ಇಲ್ಲಿನ ಕಾರ್ಯಪಾಲಕ ಅಭಿಯಂತ ರರಿಗೆ ಸೂಚಿಸಿದ್ದಾಗಿ ಗೊತ್ತಾಗಿದೆ.
ಅಧಿಕಾರಿಗಳ ತಂಡದಲ್ಲಿ ಗಣೇಶ್, ರಾಘವನ್, ಸುಬ್ರಹ್ಮಣ್ಯ ಹೊಳ್ಳ, ಪ್ರಸಾದ್, ರಮೇಶ್ ಬಾಬು ಮೊದಲಾದವರು ಹಾಜರಿದ್ದು, ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಲು ಕೆಳಹಂತದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.