ಮಡಿಕೇರಿ, ಆ. 11: ಸೆಪ್ಟೆಂಬರ್ 12 ರಿಂದ 16ರ ವರೆಗೆ ವೆಸ್ಟ್ ಬೆಂಗಾಲ್ ರಾಜ್ಯದ ಕಲ್ಕತ್ತಾ ನಗರದಲ್ಲಿ ನಡೆಯುವ ಸಬ್ ಜೂನಿಯರ್ ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಬಾಲಕ ಹಾಗೂ ಬಾಲಕಿಯರ (20 ವರ್ಷದ ಒಳಗಿನ 1999ರ ನಂತರದಲ್ಲಿ ಜನಿಸಿದ) ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಯು ತಾ. 19 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.
ರಾಜ್ಯ ತಂಡಕ್ಕೆ ಕೊಡಗು ಜಿಲ್ಲೆಯ ಆಟಗಾರರ ಆಯ್ಕೆ ಪ್ರಕ್ರಿಯೆಯು ತಾ. 15 ರಂದು ಕುಶಾಲನಗರದ ಜ್ಞಾನ ಭಾರತಿ ಸ್ಪೋಟ್ಸ್ ಕ್ಲಬ್‍ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿದ್ದು, ಆಸಕ್ತ ಕ್ರೀಡಾಪಟುಗಳು ತಮ್ಮ ಜನನ ಪತ್ರದೊಂದಿಗೆ ಹಾಗೂ ಸಮವಸ್ತ್ರ ದೊಂದಿಗೆ 12 ಗಂಟೆಗೆ ಸರಿಯಾಗಿ ಹಾಜರು ಇರಬೇಕಾಗಿ ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿ ಯೇಷನ್‍ನ ಪ್ರಧಾನ ಕಾರ್ಯದರ್ಶಿ, ವಕೀಲ ಕಪಿಲ್ ಕುಮಾರ್ ತಿಳಿಸಿದ್ದಾರೆ.