ಮಡಿಕೇರಿ, ಆ. 10: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ತಾ. 15 ರ ಸ್ವಾತಂತ್ರ್ಯೋತ್ಸವದಂದು ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಧ್ವಜಾರೋಹಣ ಮಾಡುವ ಸಂದರ್ಭ ಪಥ ಸಂಚಲನದಲ್ಲಿ ಭಾಗವಹಿಸಲು ಮಡಿಕೇರಿ ಜನರಲ್ ತಿಮ್ಮಯ್ಯ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳಾದ ತನುಷ್ ಕುಟ್ಟಯ್ಯ ಮತ್ತು ಕುಶಾನ್ ಕಾರ್ಯಪ್ಪ ಹಾಗೂ ಗೈಡ್ಸ್‍ನ ವಿದ್ಯಾರ್ಥಿಗಳಾದ ಪ್ರೇಕ್ಷ ತಂಗಮ್ಮ ಮತ್ತು ಎಸ್.ಎಂ.ಎಸ್. ಅರಮೇರಿ ಶಾಲೆಯ ಪಿ.ಡಿ. ಬಬಿತ ಆಯ್ಕೆಯಾಗಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದಾರೆ ಎಂದು ಸಂಸ್ಥೆಯ ದಮಯಂತಿ ತಿಳಿಸಿದ್ದಾರೆ.