ನಾಪೋಕ್ಲು, ಆ. 10: ಕ್ಲಬ್ನಲ್ಲಿ ಸೇರ್ಪಡೆಗೊಂಡ ಸದಸ್ಯರು ಉತ್ತಮ ಶಿಸ್ತು, ನಾಯಕತ್ವ ಗುಣ, ಸಾಮಾಜಿಕ ಕಳಕಳಿಯ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ದೇಶಪ್ರೇಮದಂತಹ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ರೋಟರಿ ಮಿಸ್ಟಿ ಹಿಲ್ಸ್ನ ಬಿ.ಜಿ. ಅನಂತಶಯನ ಹೇಳಿದರು.
ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಏರ್ಪಡಿಸಲಾಗಿದ್ದ ರೋಟರಿ ಮಿಸ್ಟಿ ಹಿಲ್ಸ್ನ ಪದಗ್ರಹಣ ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣವಚನ ವನ್ನು ಭೋದಿಸಿ ಅವರು ಮಾತನಾಡಿದರು.ಕ್ಲಬ್ ಮೂಲಕ ಉತ್ತಮ ಸಮಾಜ ಕಾರ್ಯಗಳನ್ನು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಸಂಸ್ಥೆಯ ಉಪಪ್ರಾಂಶುಪಾಲೆ ಬಡ್ಡೀರ ನಳಿನಿ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಕ್ಲಬ್ನ ಸದಸ್ಯರಾಗು ವದರ ಮೂಲಕ ನಾಯಕತ್ವ ಗುಣ ಬೆಳೆಸಿ ಕೊಳ್ಳಬೇಕು ಎಂದರು. ಸಂಯೋಜಕಿ ಉಷಾರಾಣಿ ಮಾತ ನಾಡಿ, ಕ್ಲಬ್ಗೆ ಸೇರ್ಪಡೆಗೊಂಡ ನಂತರ ತಮ್ಮ ಉತ್ತಮ ಅನುಭವಗಳನ್ನು ಹಂಚಿ ಕೊಳ್ಳುವದರ ಮೂಲಕ ವೃತ್ತಿ ಮಾರ್ಗದರ್ಶನ, ಗ್ರಾಹಕರ ವೇದಿಕೆ, ಕಾನೂನು ಅರಿವು ಕಾರ್ಯಾ ಗಾರಗಳಿಗೆ ಸಂಪನ್ಮೂಲ ವ್ಯಕ್ತಿ ಗಳನ್ನು ನಿಯೋಜನೆ ಮಾಡಬೇಕು ಎಂದರು. ರೋಟರಿ ಮಿಸ್ಟಿ ಹಿಲ್ ಅಧ್ಯಕ್ಷ ಜಿ.ಆರ್. ರವಿಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಕ್ಲಬ್ನ ಹುಟ್ಟು, ಬೆಳವಣಿಗೆ ಧ್ಯೇಯೋದ್ದೇಶಗಳನ್ನು ತಿಳಿಸಿ ಸ್ವಾಗತಿಸಿದರು.
2018-19ರ ಸಾಲಿನ ಇಂಟರ್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ನೇಸರ, ಕಾರ್ಯದರ್ಶಿಯಾಗಿ ಲುಕಿಮಣಿ, ಉಪಾಧ್ಯಕ್ಷೆಯಾಗಿ ರಮ್ಯ ಎನ್.ಡಿ., ಉಪ ಕಾರ್ಯದರ್ಶಿಯಾಗಿ ಸಯ್ಯದ್ ದಾನೀಶ್, ಖಜಾಂಚಿಯಾಗಿ ಚೇತಕ್ ಎಂ.ಪಿ. ಹಾಗೂ 32 ಮಂದಿ ಸದಸ್ಯರು ನೇಮಕಗೊಂಡರು. ಅಜಿತ್ ಕಾರ್ಯಕ್ರಮ ನಿರೂಪಿಸಿದರೆ, ಲುಕಿಮಣಿ ವಂದಿಸಿದರು.