ಶ್ರೀಮಂಗಲ, ಆ. 7: ಹಿರಿಯರು, ಕಿರಿಯರನ್ನು ಜೊತೆಯಲ್ಲಿ ಸೇರಿಸಿಕೊಂಡು ಹಬ್ಬಗಳನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕøತಿ, ಸಂಪ್ರದಾಯ, ಪದ್ಧತಿಯನ್ನು ಹಸ್ತಾಂತರಿಸಲು ನೆರವಾಗಲಿದೆ. ಕೊಡಗಿನ ಹಬ್ಬ ಹರಿದಿನಗಳಂತಹ ಆಚರಣೆಗಳನ್ನು ಮಕ್ಕಳನ್ನು ಜೊತೆಯಲ್ಲಿ ಸೇರಿಸಿ ಕೊಂಡು ನಡೆಸುವಂತಾಗ ಬೇಕೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಪ್ರತಿಪಾದಿಸಿದರು.

ಅವರು ಕುಟ್ಟ ಕೊಡವ ಸಮಾಜದ ಆಶ್ರಯದಲ್ಲಿ ಸಮಾಜದ ಸಭಾಂಗಣದಲ್ಲಿ ನಡೆದ 6ನೇ ವರ್ಷದ ಕಕ್ಕಡ ನಮ್ಮೆಯನ್ನು ಉದ್ಘಾಟಿಸಿ ಮಾತನಾಡಿದರು.

ಕುಟ್ಟದಂತಹ ರಾಜ್ಯ ಹಾಗೂ ಜಿಲ್ಲೆಯ ಗಡಿ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮದಲ್ಲಿ ಅಯೋಜಿಸುತ್ತಿರುವ ದರಿಂದ ಹಾಗೂ ಈ ಕಾರ್ಯಕ್ರಮ ದಲ್ಲಿ ಕೊಡವೇತರ ಅತಿಥಿಗಳೂ ಭಾಗವಹಿಸಿರುವದರಿಂದ ಕೊಡವ ಸಂಸ್ಕøತಿಯ, ತಿಂಡಿ-ತಿನಿಸು, ಪದ್ಧತಿ-ಪರಂಪರೆಯ ಬಗ್ಗೆ ಪರಿಚಯ ಮಾಡಿದಂತೆಯೂ ಆಗುತ್ತದೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದನ್ನು ನೋಡಿದರೆ ಸಂತೋಷವಾಗುತ್ತದೆ. ಈ ಕಾರ್ಯ ಕ್ರಮದಲ್ಲಿ ಹಲವು ಮಳಿಗೆಗಳನ್ನು ಮಹಿಳೆಯರೇ ನಡೆಸುತ್ತಿರುವದರಿಂದ ಅವರಲ್ಲಿ ವ್ಯಾಪಾರ ಕೌಶಲ್ಯಾಭಿವೃದ್ಧಿ ಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಟ್ಟ ಕೊಡವ ಸಮಾಜದ ಹಾಗೂ ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷರೂ ಆದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಕುಟ್ಟದಲ್ಲಿ ಆಯೋಜಿಸಿರುವ ಕಕ್ಕಡ ನಮ್ಮೆಯಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದಲು ಅತಿಥಿಗಳು ಆಗಮಿಸಿದ್ದಾರೆ. ಮಹಿಳೆಯರು ತಮ್ಮ ಆರ್ಥಿಕ ಅಭಿವೃದ್ಧಿ ಪಡಿಸಿಕೊಳ್ಳಲು ಹಲವು ಮಳಿಗೆಗಳನ್ನು ಸ್ಥಾಪಿಸಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿ ಕೊಂಡಿರುವದು ಅವರಲ್ಲಿ ವ್ಯಾಪಾರದ ಬಗ್ಗೆ ಹೆಚ್ಚಿನ ಜ್ಞಾನ ಮೂಡಿಸಲು ಸಹಕಾರಿಯಾಗಲಿದೆ. ಮಹಿಳೆಯ ರಿಂದಲೇ ಸಂಸ್ಕøತಿ ಉಳಿಯಲು ಸಾಧ್ಯ. ಮಕ್ಕಳಲ್ಲಿ ಸಂಸ್ಕøತಿ, ಸಂಸ್ಕಾರದ ಬಗ್ಗೆ ಅರಿವು ಮೂಡಿಸುವತ್ತ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು. ಕೊಡವ ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರು ಆಸಕ್ತಿ ತೋರು ತ್ತಿರುವದು ಶ್ಲಾಘನೀಯ ಎಂದು ಹೇಳಿದರು. ಕಕ್ಕಡ ನಮ್ಮೆಯ ಪ್ರಯುಕ್ತ ವಿಶೇಷವಾದ ಮದ್ದ್ ಪಾಯಸವನ್ನು ಕಾರ್ಯಕ್ರಮದಲ್ಲಿ ಎಲ್ಲರೂ ಸವಿದರು. ಹೊರಗಿನಿಂದ ಆಗಮಿಸಿದ್ದು ಅತಿಥಿಗಳಿಗೂ ಪಾಯಸದ ಮಹತ್ವವನ್ನು ಪರಿಚಯಿಸಲಾಯಿತು.

ಕೊಲ್ಕತ್ತ, ಮಂಗಳೂರು ಗಳಿಂದಲೂ ಅತಿಥಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಕಕ್ಕಡ ನಮ್ಮೆ ಪ್ರಯುಕ್ತ ಮಹಿಳೆಯರ –ಮಕ್ಕಳ ವಿಶೇಷ ಉಡುಪುಗಳು, ಮನೆಯಲ್ಲಿ ತಯಾರಿಸಿದ ಬಗೆ ಬಗೆಯ ತಿಂಡಿ ತಿನಿಸುಗಳು, ಪಾಲಿಬೆಟ್ಟದ ವಿಕಲಚೇತನ ಮಕ್ಕಳ ಸಂಸ್ಥೆ ಚೇಷೈರ್ ಹೋಂ, ಸುಂಠಿಕೊಪ್ಪದ ಸ್ವಸ್ಥ ಸಂಸ್ಥೆಯವರು ತಯಾರಿಸಿದ ವಸ್ತುಗಳು, ಆಭರಣ ಮಳಿಗೆ, ಕರಕುಶಲ ವಸ್ತುಗಳು, ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿಯಾದ ಬ್ಯಾಗ್‍ಗಳು, ಕವರ್‍ಗಳು, ಮರದ ಟೂತ್ ಬ್ರಶ್, ಮನೆಯ ಬಳಕೆಯ ಹಲವು ಮರದ ಅಡಿಗೆ ಸಾಮಾಗ್ರಿಗಳ ಪ್ರದರ್ಶನ ಮತ್ತು ಮಾರಾಟ ಗಮನ ಸೆಳೆಯಿತು.

ವೇದಿಕೆಯಲ್ಲಿ ಕುಟ್ಟ ಕೊಡವ ಸಮಾಜದ ಕಾರ್ಯದರ್ಶಿ ಕೊಂಗಡ ಸುರೇಶ್ ದೇವಯ್ಯ, ಜಂಟಿ ಕಾರ್ಯದರ್ಶಿ ತೀತಿರ ಮಂದಣ್ಣ, ಖಜಾಂಚಿ ಮಚ್ಚಮಾಡ ಸುಬ್ರಮಣಿ, ಸದಸ್ಯರುಗಳಾದ ತೀತಿರ ಕಬೀರ್ ತಿಮ್ಮಯ್ಯ, ಕುಟ್ಟ ಕೊಡವ ಸಮಾಜ ಆಶ್ರಯದ ಸಾಂಸ್ಕøತಿಕ ಕೇಂದ್ರದ ಕಾರ್ಯದರ್ಶಿ ಚೆಕ್ಕೆರ ರಾಬಿನ್ ಕಾರ್ಯಪ್ಪ, ಖಜಾಂಚಿ ಕಳ್ಳಂಗಡ ಅಪ್ಪಣ್ಣ, ಬಾಡಗ ಮಹಿಳಾ ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷೆ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಮಂಚಳ್ಳಿಯ ಬಾಂಧವ್ಯ ಮಹಿಳಾ ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಹಾಗೂ ಮತ್ತಿತರರು ಹಾಜರಿದ್ದರು.ಸುಬ್ಬಯ್ಯ ಹಾಗೂ ಮತ್ತಿತರರು ಹಾಜರಿದ್ದರು.