ಗೋಣಿಕೊಪ್ಪ ವರದಿ, ಆ. 6: ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಮಲಯಾಳಿ ಜನಾಂಗದವರಿಗೆ ತಾ. 30 ರಿಂದ ಮೊದಲನೇ ವರ್ಷದ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಶರತ್‍ಕಾಂತ್ ತಿಳಿಸಿದ್ದಾರೆ.
ತಾ. 30, 31 ಹಾಗೂ ಸೆಪ್ಟೆಂಬರ್ 1 ರವರೆಗೆ ಗೋಣಿಕೊಪ್ಪದ ಅರ್ವತೋಕ್ಲು ಜಿ.ಟಿ. ಗಿರೀಶ್ ಅವರ ಬಡಾವಣೆಯ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೊಡಗಿನಲ್ಲಿರುವ ಮಲಯಾಳಿ ಜನಾಂಗದವರಿಗೆ ಆಡಲು ಅವಕಾಶವಿದೆ. ಸೆವೆನ್ ಸೈಡ್ ಫುಟ್ಬಾಲ್ ಪಂದ್ಯ ನಡೆಯಲಿದ್ದು, ಜನಾಂಗದಲ್ಲಿ ಒಗ್ಗಟ್ಟಿಗಾಗಿ ನಡೆಸುತ್ತಿರುವ ಕ್ರೀಡೆಯಲ್ಲಿ ಹೆಚ್ಚಿನ ತಂಡಗಳು ಪಾಲ್ಗೊಳ್ಳಬೇಕಿದೆ ಎಂದರು. ತಾ. 25 ರೊಳಗೆ ತಂಡಗಳು ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ 9448448505, 9591923193 ಸಂಪರ್ಕಿಸಬಹುದಾಗಿದೆ. ಗೋಷ್ಠಿಯಲ್ಲಿ ಕ್ರೀಡಾಕೂಟ ಸಂಚಾಲಕರುಗಳಾದ ವಿಜೇಶ್, ವಿನೋದ್, ನಿರ್ದೇಶಕ ಅಖಿಲ್, ಸಮಾಜದ ಪಾಲಿಬೆಟ್ಟ ಸಮಿತಿ ಅಧ್ಯಕ್ಷ ರಿನೇಶ್ ಉಪಸ್ಥಿತರಿದ್ದರು.