ಮಡಿಕೇರಿ, ಆ. 6: 2018-19ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಸಲುವಾಗಿ ವಿಜ್ಞಾನ ವಿಚಾರಗೋಷ್ಠಿಯನ್ನು ವೀರಾಜಪೇಟೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಸಲಾಯಿತು. ಗೋಷ್ಠಿಯಲ್ಲಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಆಶಿಕಾ ರಾಯ್ “ಕೈಗಾರಿಕ ಕ್ರಾಂತಿ - ನಾವು ತಯಾರಾಗಿದ್ದೇವೆ” ಎಂಬ ವಿಚಾರ ಮಂಡಿಸಿ ಪ್ರಥಮ ಬಹುಮಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಸಹ ಶಿಕ್ಷಕಿಯರಾದ ಲೀನಾ ದೇವಯ್ಯ ಮತ್ತು ನಿರಿಕ್ಷಾ, ಮುಖ್ಯ ಶಿಕ್ಷಕಿ ಚಿನ್ನಮ್ಮ ಮತ್ತು ಪ್ರಾಂಶುಪಾಲ ವಿನೋದ್ ಅವರುಗಳ ಮಾರ್ಗದರ್ಶನದಲ್ಲಿ ವಿಚಾರ ಮಂಡಿಸಿದ್ದಾಳೆ.