ಮಡಿಕೇರಿ, ಆ. 6: ಕನ್ನಡ ಭಾಷಾ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಆಧುನಿಕ ವ್ಯವಸ್ಥೆಗೆ ಪೂರಕವಾದ ತಂತ್ರಜ್ಞಾನವನ್ನು ಮೊಬೈಲ್‍ನಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ಹರಿಸಬೇಕೆಂದು ‘ಶಕ್ತಿ’ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಸಮರ್ಥ ಕನ್ನಡಿಗ ಸಂಸ್ಥೆಯ ವತಿಯಿಂದ ಆಯೋಜಿತ ಹಿಮವನ ಪ್ರತಿಭಾ ಸಂಗಮ ಕಾರ್ಯಕ್ರಮದಲ್ಲಿ ಸಮರ್ಥ ಕನ್ನಡಿಗರು ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರದಾನ ಮಾಡಿ ಮಾತನಾಡಿದ ಜಿ.ರಾಜೇಂದ್ರ,, ಕನ್ನಡ ಭಾಷೆಯ ಬಳಕೆಯನ್ನು ಮತ್ತಷ್ಟು ಹೆಚ್ಚಿಸುವ ಅನಿವಾರ್ಯತೆಯ ಈ ದಿನಗಳಲ್ಲಿ ಮೊಬೈಲ್ ಬಳಕೆ ಸರ್ವವ್ಯಾಪಿಯಾಗುತ್ತಿರುವದರಿಂದ ಮೊಬೈಲ್ ನಲ್ಲಿಯೇ ಕನ್ನಡ ಲಿಪಿಯ ಪರಿಣಾಮಕಾರಿ ಬಳಕೆಗೆ ಸರ್ಕಾರ ಒತ್ತು ನೀಡಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಬೇಕೆಂದು ಸಲಹೆ ನೀಡಿದರು. ಆಧುನಿಕ ತಂತ್ರಜ್ಞಾನ ಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷಾ ಬಳಕೆ ಸಂಬಂಧಿತ ತಂತ್ರಜ್ಞಾನ ಕ್ರಾಂತಿಯೇ ಆಗಬೇಕೆಂದೂ ರಾಜೇಂದ್ರ ಅವರು ಅನಿಸಿಕೆ ವ್ಯಕ್ತಪಡಿಸಿದರು.
ಭಾಷಾ ಬಳಕೆಗೆ ಸಂಬಂಧಿಸಿ ದಂತೆ ತಂತ್ರಜ್ಞಾನವನ್ನು ಮತ್ತಷ್ಟು ಹೆಚ್ಚಿಗೆ ಬಳಕೆ ಮಾಡುವಂತೆ ಕರೆ ನೀಡಿದ ಜಿ.ರಾಜೇಂದ್ರ, ಮಾತೃಭಾಷೆ ಬಿಟ್ಟು ಬೇರೆ ಭಾಷೆಗಳನ್ನು ಹೆಚ್ಚಾಗಿ ಬಳಕೆ ಮಾಡುವದೂ ಸರಿಯಲ್ಲ. ಉದ್ಯೋಗನಿಮಿತ್ತ ಬೇರೆ ಭಾಷೆ ಬಳಕೆ ಸಮರ್ಥನಿಯವೇ ಹೊರತು ಮಾತೃಭಾಷೆಯ ಕಡೆಗಣನೆ ಮಾಡಿ ಅನ್ಯ ಭಾಷೆಯ ಹೆಚ್ಚಿನ ಬಳಕೆ ಬೇಡ ಎಂದು ರಾಜೇಂದ್ರ ಸಲಹೆ ನೀಡಿದರು. ಮಕ್ಕಳಿಗೆ ಚಿಕ್ಕಂದಿನಿಂದಲೇ ಕನ್ನಡ ಕಲಿಸಿ ಎಂದು ಅವರು ಪೆÇೀಷಕರಿಗೆ ಸಲಹೆ ನೀಡಿದರು.
ಕನ್ನಡ ಭಾಷೆಯನ್ನು ಹೆತ್ತ ತಾಯಿಗೆ ಹೋಲಿಸಿದ ರಾಜೇಂದ್ರ, ಹೆತ್ತ ತಾಯಿಯನ್ನು ಹೇಗೆ ಸದಾ ಸ್ಮರಿಸುತ್ತೇವೆಯೋ ಅಂತೆಯೇ ಕನ್ನಡ ಭಾಷೆಯನ್ನೂ ಮನದಲ್ಲಿ, ಬಳಕೆ ಮೂಲಕ ಸ್ಮರಿಸುವಂತಾದರೆ ಭಾಷೆಗೆ ಖಂಡಿತಾ ಅಳಿವಿಲ್ಲ ಎಂದು ಹೇಳಿದರು.
ಮಾಧ್ಯಮ ಕ್ಷೇತ್ರದಲ್ಲಿ 50 ಪ್ರಶಸ್ತಿಗಳಿಗೆ ಬಾಜನರಾದ ಪತ್ರಕರ್ತ ಅನಿಲ್ ಎಚ್.ಟಿ. ಸಮರ್ಥ ಕನ್ನಡಿಗ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, , ಸಾಹಿತ್ಯ, ಸಾಂಸ್ಕøತಿಕ ಸಂಬಂಧಿತ ಚಟುವಟಿಕೆ ಕಡಿಮೆಯಿರುವ ಕೊಡಗಿನಲ್ಲಿ ಸಮರ್ಥ ಕನ್ನಡಿಗ ಸಂಸ್ಥೆಯ ವೈವಿಧ್ಯಮಯ ಸ್ಪರ್ಧೆಗಳ ಆಯೋಜನೆ ಮೂಲಕ ನೂರಾರು ವಿದ್ಯಾರ್ಥಿ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದು ಶ್ಲಾಘನೀಯ ಎಂದರು.
ಆಕಾಶವಾಣಿ ಉದ್ಗೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ನಿರರ್ಗಳವಾಗಿ ಕನ್ನಡ ಭಾಷೆ ಉಚ್ಚರಿಸುತ್ತಿದ್ದ ಅದ್ಯಾಪಕರಿಂದಾಗಿಯೇ ಇಂದಿಗೂ ಹಲವಾರು ಮಂದಿ ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರಗಳಲ್ಲಿಯೂ ಕನ್ನಡ ಭಾಷಾ ಶುದ್ಧತೆ ಹೊಂದಿದ್ದಾರೆ. ಇಂಗ್ಲೀಷ್ ಭಾಷಾ ವಾತಾವರಣವೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಕನ್ನಡ ಪರ ಧ್ವನಿ ಹೆಚ್ಚಾಗಬೇಕಾಗಿದೆ ಎಂದರು.
ಬಿ.ಎಸ್.ಎಲ್.ಎನ್.ನ ನಿವೃತ್ತ ಅಧಿಕಾರಿ ಎಸ್.ಎಂ. ದೇವರಾಜು, ಸಮರ್ಥ ಕನ್ನಡಿಗ ಸಂಸ್ಥೆಯ ಕೊಡಗು ಘಟಕದ ಸಂಚಾಲಕಿ ಕೆ.ಜಯಲಕ್ಷ್ಮಿ, ರಾಜ್ಯ ಗೌರವ ಸಲಹೆಗಾರ ಲಿಂಗೇಶ್ ಹುಣಸೂರು, ಗಮಕ ದುಂಧುಬಿಯ ಪ್ರಧಾನ ಸಂಪಾದಕ ಕೃ.ಪಾ. ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯ ಆನಂದ್ ದೆಗ್ಗನಹಳ್ಳಿ, ಪಿ.ಎಸ್.ವೈಲೇಶ್, ಬಸವರಾಜು ಎಸ್. ಕಲ್ಲುಸಕ್ಕರೆ ಉಪಸ್ಥಿತರಿದ್ದರು.