ಕುಶಾಲನಗರ, ಆ. 6: ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು.

ಸಂಘವು ಆರಂಭವಾಗಿ 97 ವರ್ಷಗಳಾಗಿದ್ದು, ಇದೇ ಮೊದಲ ಬಾರಿಗೆ ಒಂದು ಕೋಟಿ 5 ಲಕ್ಷ ರೂಗಳನ್ನು ಲಾಭಗಳಿಸಿದೆ ಎಂದು ಶರವಣಕುಮಾರ್ ಹೇಳಿದರು. ಸಂಘದ ವತಿಯಿಂದ ಕುಶಾಲನಗರ ಮಾರುಕಟ್ಟೆ ರಸ್ತೆಯಲ್ಲಿ ಎಂಟುವರೆ ಸೆಂಟು ಜಾಗದಲ್ಲಿ ಮೂರುವರೆ ಕೋಟಿ ರೂಗಳ ವೆಚ್ಚದಲ್ಲಿ ನೂತನ ಹವಾನಿಯಂತ್ರಿತ ಆಡಳಿತ ಭವನವನ್ನು ನಿರ್ಮಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಕಟ್ಟಡ ಇದಾಗಿದ್ದು ಸಂಘದ ಸದಸ್ಯರ ಒಳಿತಿಗೆ ವಿಶೇಷವಾಗಿ ಯೋಜನೆ ರೂಪಿಸಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ಸಂಘದಲ್ಲಿ 2800 ಸದಸ್ಯರಿದ್ದಾರೆ. ಸಂಘದಲ್ಲಿ 29.59 ಕೋಟಿ ರೂಗಳ ಠೇವಣಿ ಸಂಗ್ರಹಿಸಲಾಗಿದ್ದು 23.19 ಕೋಟಿ ರೂಗಳನ್ನು ಸದಸ್ಯರಿಗೆ ಸಾಲವಾಗಿ ವಿತರಿಸಲಾಗಿದೆ ಎಂದು ಶರವಣಕುಮಾರ್ ಹೇಳಿದರು.

ಸಂಘಕ್ಕೆÀÅ ಆರ್ಥಿಕವಾಗಿ ಲಾಭ ಬಂದಿರುವದರಿಂದ ಸದಸ್ಯರಿಗೆ ಕೊಡುತ್ತಿರುವ ಶೇ.10 ಡಿವಿಡೆಂಡ್ ಬದಲು ಶೇ.25 ಡಿವಿಡೆಂಡ್ ನೀಡುವಂತೆ ಸದಸ್ಯ ಎಂ.ಇ.ಮೋಹಿದ್ದೀನ್ ಒತ್ತಾಯಿಸಿದರು.

ಸಂಘದಲ್ಲಿ 25 ಕೋಟಿ ರೂಗಳಿಗೂ ಅಧಿಕ ಪ್ರಮಾಣದ ಠೇವಣಿ ಇರಿಸಿಕೊಂಡಿರುವದರಿಂದ ಆ ಹಣವನ್ನು ದುಡಿಯುವ ಬಂಡವಾ¼ Àವಾಗಿ ಅಳವಡಿಸಿಕೊಳ್ಳದಿದ್ದಲ್ಲಿ ಆ ಠೇವಣಿ ಹಣ ಸಂಘಕ್ಕೆ ಹೊರೆಯಾಗುವ ಬಗ್ಗೆ ಸದಸ್ಯ ವಿ.ಪಿ.ಶಶಿಧರ್ ಸಭೆಯ ಗಮನಕ್ಕೆ ತಂದರು.

ಮಹಾಸಭೆಯಲ್ಲಿ ಸದಸ್ಯರಿಗೆ ನೀಡುತ್ತಿರುವ 100 ರೂ. ಭತ್ಯೆ ಬಹಳ ವರ್ಷಗಳಿಂದ ನಡೆದು ಬರುತ್ತಿದೆ. ಇನ್ನು ಮುಂದೆ 500 ರೂಗಳಿಗೆ ಹೆಚ್ಚಿಸಬೇಕೆಂದು ಸದಸ್ಯರಾದ ಗಣಪತಿ ಹಾಗು ರಾಮಶೆಟ್ಟಿ ಕೋರಿಕೆ ಮಂಡಿಸಿದಾಗ ಅಧ್ಯಕ್ಷ ಶರವಣಕುಮಾರ್, ಮಹಾಸಭೆಗೆ ಆಗಮಿಸುವ ಸದಸ್ಯರಿಗೆ ಊಟದ ಭತ್ಯೆ ಎಂದು ನೀಡಲಾಗುತ್ತದೆ ವಿನಃ ಸದಸ್ಯರಿಗೆ ನೀಡುವ ಭತ್ಯೆಯಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಂ.ಕೆ.ಗಣೇಶ, ಅಬ್ದುಲ್ ಖಾದರ್, ವಿ.ಎಸ್. ಆನಂದಕುಮಾರ್, ಗಣಿಪ್ರಸಾದ್, ಯತೀಶ್, ಕೆ.ಎನ್.ಅಶೋಕ್, ಕವಿತಾ ಮೋಹನ್, ನೇತ್ರಾವತಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಲೋಕೇಶ್, ಲೆಕ್ಕಪರಿಶೋಧಕ ಡಿ.ಎನ್.ಚಂದ್ರಶೇಖರ್ , ವಿಜಯಕುಮಾರ್ ಇದ್ದರು.