ನಾಪೋಕ್ಲು, ಆ. 6: ಮುಸ್ಲಿಂ ಅಸೋಸಿಯೇಶನ್ ಅಡಳಿತ ಮಂಡಳಿ ಅಧ್ಯಕ್ಷರಾಗಿ ಚೆರಿಯಪರಂಬುವಿನ ಅಬೂಬಕರ್ ಸಖಾಫಿ ಆಯ್ಕೆಯಾಗಿ ದ್ದಾರೆ. ಕಾರ್ಯದರ್ಶಿಯಾಗಿ ಅಶ್ರಫ್ ಸಖಾಫಿ ವಯಕೋಲ ಕೋಶಾಧಿಕಾರಿಯಾಗಿ ಅಬ್ದುಲ್ ರಜಾಕ್ ಸಹವಿ, ಪರೀಕ್ಷ್ಷಾ ವಿಚಾರಕರಾಗಿ ಸಫೀಕ್ ಅಹನಿ, ಮಹಮದ್‍ಸಖಾಫಿ, ತರಬೇತಿ ಮೇಲ್ವಿಚಾರಕರಾಗಿ ಮಹಮದ್ ಮುಸ್ಲಿಯಾರ್, ಆಲಿ ಮುಸ್ಲಿಯಾರ್ ಹಾಗೂ ವೆಲ್ಫೇರ್ ಮೇಲ್ವಿಚಾರಕರಾಗಿ ಜಲೀಲ್ ಇಂದಾಯಿ ಹಾಗೂ ಷಂಶುದ್ದೀನ್ ಸಖಾಫಿ ಆಯ್ಕೆಯಾಗಿದ್ದಾರೆ.