ಚೆಟ್ಟಳ್ಳಿ, ಆ. 6: ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ 30 ವರ್ಷಗಳ ಕಾಲಹಿಂದಿ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿ ದೈವಾದೀನರಾಗಿರುವ ಪುತ್ತರಿರ ಸೋಮಣ್ಣ ಅವರ ಜ್ಞಾಪಕಾರ್ಥವಾಗಿ ಅವರ ಮಗ ಶಾಲೆಯ ಹಳೇ ವಿದ್ಯಾರ್ಥಿ ಪುತ್ತರಿರ ಹರೀಶ್ ಅಯ್ಯಪ್ಪ ತಮ್ಮ ಕುಟುಂಬದ ಪರವಾಗಿ ದತ್ತಿ ನಿಧಿ ನೀಡಿದ್ದಾರೆ. ಚೆಟ್ಟಳ್ಳಿ ಪ್ರೌಢಶಾಲೆಯ ಸಂಚಾಲಕ ಮುಳ್ಳಂಡ ರತ್ತುಚಂಗಪ್ಪ ಹಾÀಗು ಶಾಲೆಯ ಮುಖ್ಯೋಪಧ್ಯಾಯಿನಿ ತಿಲಕ ಅವರ ಸಮ್ಮುಖದಲ್ಲಿ ರೂ.15000ದ ಚೆಕ್ಕನ್ನು ನೀಡಿ ತಂದೆಯವರಾದ ದಿ.ಪುತ್ತರಿರ ಸೋಮಣ್ಣ ನವರ ಹೆಸರಿನಲ್ಲಿ ದತ್ತಿನಿಧಿಯನ್ನು ಸ್ಥಾಪಿಸಿ ಅದರ ಬಡ್ಡಿಯಲ್ಲಿ 8ನೇ ತರಗತಿಯ ಹಿಂದಿ ವಿಷಯದಲ್ಲಿ ಅತಿ ಹೆಚ್ಚು ಅಂಕಪಡೆದು ಉತೀರ್ಣನಾಗುವ ವಿದ್ಯಾರ್ಥಿಗೆ ಹಾಗೂ ಹಿಂದಿ ಶಿಕ್ಷಕರಿಗೆ ಪ್ರತೀ ವರ್ಷ ನೀಡುವಂತೆ ಅವರು ಈ ನಿಧಿ ಪ್ರಾರಂಭಿಸಿದ್ದಾರೆ.