ಮಡಿಕೇರಿ, ಆ. 5: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಸರ್ಟಿಫಿಕೇಟ್ ಕೋರ್ಸ್‍ಗಳ ಮೊದಲ ತರಗತಿ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಜಾನ್ಸಿ, ಸುಬ್ರಾಯ ಸಂಪಾಜೆ, ಕೂಪದಿರ ಶಾರದ ನಂಜಪ್ಪ ಮತ್ತು ಗೋಣಿಕೊಪ್ಪ ಕಾಲೇಜಿನ ಇಂಗ್ಲೀಷ್ ಪ್ರಾದ್ಯಾಪಕಿ ಪ್ರೊ. ಭಾರತಿ ಭಾಗವಹಿಸಿದ್ದರು. ಯೋಗ ಮತ್ತು ಧ್ಯಾನದ ಮಹತ್ವದ ಜೊತೆಗೆ ಯೋಗದ ವಿವಿಧ ಆಸನಗಳನ್ನು ಪ್ರಥಮ ಬಿ.ಕಾಂ ತರಗತಿ ವಿದ್ಯಾರ್ಥಿಗಳಿಗೆ ಕಲಿಸಿ ಕೊಟ್ಟರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಿಗೆ ಮಡಿಕೇರಿ ಆಕಾಶವಾಣಿಯ ಉದ್ಘೋಷಕರು ಗಳಾದ ಸುಬ್ರಾಯ ಸಂಪಾಜೆ ಮತ್ತು ಕೂಪದಿರ ಶಾರದ ನಂಜಪ್ಪನವರು ಪತ್ರಿಕೋದ್ಯಮ ಮತ್ತು ಮಾಧ್ಯಮ ಕೌಶಲ್ಯದ ಬಗ್ಗೆ ತಿಳಿಸಿಕೊಡುವದರ ಜೊತೆಗೆ ಆಕಾಶವಾಣಿಯಲ್ಲಿ ಯುವಜನತೆ ಗಿರುವ ಉದ್ಯೋಗ ಅವಕಾಶ, ಪ್ರತಿಭಾ ಪ್ರದರ್ಶನಕ್ಕಿರುವ ಅವಕಾಶಗಳ ಬಗ್ಗೆ ಮಾಹಿತಿಯನ್ನು ಒದಗಿಸಿಕೊಟ್ಟರು. ಅಂತಿಮ ಬಿ.ಕಾಂ ವಿದ್ಯಾರ್ಥಿ ಗಳಿಗೆ ಸಂವಹನ ಇಂಗ್ಲೀಷ್‍ನಲ್ಲಿ ಪ್ರೊ. ಭಾರತಿ ಅವರು ಆಂಗ್ಲ ಭಾಷೆಯ ಮಹತ್ವ, ಸಂವಹನೆ ನಡೆಸುವ ಕಲೆ, ಬರವಣಿಗೆಯ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಟ್ಟಡ ಪೂವಣ್ಣ, ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.