ಮಡಿಕೇರಿ, ಆ. 5: ಬೆಂಗಳೂರು ಕೇಂದ್ರ ಮೌಲ್ಯ ಮಾಪನ ಸಮಿತಿ ನಿರ್ದೇಶನದಂತೆ ಮಡಿಕೇರಿ ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶಗಳ ಸ್ಥಿರಾಸ್ತಿಗಳ ದರಗಳನ್ನು ಮಡಿಕೇರಿ ಮಾರುಕಟ್ಟೆ ಬೆಲೆ ಉಪ ಸಮಿತಿಯಲ್ಲಿ 2018-19ನೇ ಸಾಲಿಗೆ ಅನ್ವಯವಾಗುವಂತೆ ಪರಿಷ್ಕರಿಸಲಾಗಿದೆ. ಈ ದರಪಟ್ಟಿಯನ್ನು ಹಿರಿಯ ಉಪ ನೋಂದಣಿ ಕಚೇರಿ, ಮಡಿಕೇರಿ, ತಹಶೀಲ್ದಾರ್ ಕಚೇರಿ, ನಗರಸಭೆ ಹಾಗೂ ಇತರ ಕಚೇರಿಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
2018-19ನೇ ಸಾಲಿನ ಸ್ಥಿರಾಸ್ತಿಗಳ ಪರಿಷ್ಕøತ ದರಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಹಿರಿಯ ಉಪ ನೋಂದಣಾಧಿಕಾರಿಗಳು ಇವರಿಗೆ ತಾ. 18 ರೊಳಗೆ ದಾಖಲೆಗಳೊಂದಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಬಹುದು ಎಂದು ಮಡಿಕೇರಿ ಹಿರಿಯ ಉಪ ನೋಂದಣಾಧಿಕಾರಿ ತಿಳಿಸಿದ್ದಾರೆ.