ಮಡಿಕೇರಿ, ಆ. 5: ಕರ್ನಾಟಕ ಪೊಲೀಸ್ ಶಸಸ್ತ್ರ ಪಡೆಯ ಸಿಬ್ಬಂದಿಗಳ ಆಯ್ಕೆ ಪ್ರಕ್ರಿಯೆ ಸಂಬಂಧ ಇಂದು ಲಿಖಿತ ಪರೀಕ್ಷೆ ನಡೆಯುವ ವಿದ್ಯಾಲಯದೊಳಗೆ, ನಾಲ್ಕಾರು ಕೊಠಡಿಗಳ ಸರಣಿ ಬೀಗ ಒಡೆದು ಕಿಡಿಗೇಡಿಗಳು ಆತಂಕ ಸೃಷ್ಟಿಸಿರುವ ಪ್ರಸಂಗ ಎದುರಾಗಿದೆ. ನಗರದ ಹೃದಯ ಭಾಗದಲ್ಲಿರುವ ಸರಕಾರಿ ಪ.ಪೂ. ಕಾಲೇಜಿನ ಆವರಣದೊಳಗೆ ಈ ಕೃತ್ಯ ನಡೆದಿದೆ.ಇಂದು ಬೆಳ್ಳಂಬೆಳಿಗ್ಗೆ ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರರಾಜ್ ಹಾಗೂ ಪೊಲೀಸರ ತಂಡ ಪರೀಕ್ಷಾ ಕೇಂದ್ರದ ಪರಿಶೀಲನೆಗೆ ಬಂದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯುಸಿ ವಿಭಾಗ ಹಾಗೂ ಪ್ರಥಮ ದರ್ಜೆ ಕಾಲೇಜಿನ ಕೊಠಡಿಗಳ ಬೀಗಗಳನ್ನು ಒಡೆದಿರುವ ಕಿಡಿಗೇಡಿಗಳು ಹಣ ಅಥವಾ ಇಂದಿನ ಪರೀಕ್ಷಾ ಪತ್ರಿಕೆಗಾಗಿ ಹುಡುಕಾಟ ನಡೆಸಿರುವ ಶಂಕೆಯಿದೆ.
ಶಾಲಾ-ಕಾಲೇಜು ಕಚೇರಿ ಕೊಠಡಿಗಳ ಬಾಗಿಲಿಗೆ ಹಾಕಲಾಗಿದ್ದ ಬೀಗಗಳನ್ನು ಕಬ್ಬಿಣದ ರಾಡ್‍ನಿಂದ ಚಿಲಕಗಳ ಸಹಿತ ಮುರಿದಿರುವ ಕಿಡಿಗೇಡಿಗಳು;
(ಮೊದಲ ಪುಟದಿಂದ) ಕಚೇರಿಗಳ ಕಪಾಟುಗಳು, ಮೇಜುಗಳ ಒಳಗಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಯಾಗಿ ಎಸೆದು ಹುಡುಕಾಟ ನಡೆಸಿರುವದು ಬೆಳಕಿಗೆ ಬಂದಿದೆ.
ಪ್ರೌಢಶಾಲಾ ವಿಭಾಗ, ಪ.ಪೂ. ಕಾಲೇಜು ವಿಭಾಗ, ಪದವಿ ಕಾಲೇಜು ಕೊಠಡಿಗಳಲ್ಲು ಹುಡುಕಾಟ ನಡೆಸಿರುವ ಕಿಡಿಗೇಡಿಗಳು; ಆಯ ಕಚೇರಿಗಳಲ್ಲಿನ ಬೆಲೆ ಬಾಳುವ ಗಣಕ ಯಂತ್ರ ಇತ್ಯಾದಿಗಳನ್ನು ಮುಟ್ಟದೆ ತೆರಳಿರುವದು ಸಾಕಷ್ಟು ಸಂಶಯ ಮೂಡಿಸಿದೆ.
ಬದಲಾಗಿ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಕಚೇರಿ ಕೊಠಡಿಯ ಬೀಗ ಮುರಿದು ಒಳ ನುಗ್ಗಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಯಾಗಿಸಿರುವ ಕಳ್ಳರು; ಮುಖ್ಯೋಪಾಧ್ಯಾಯರ ಆಸನ ಬಳಿ ಕಾಗದ ಪತ್ರಗಳನ್ನು ಬಳಸಿ ಬೆಂಕಿ ಹೊತ್ತಿಸಿರುವ ಕುರುಹು ಲಭಿಸಿದೆ. ಅಲ್ಲದೆ ಅಕ್ಷರ ದಾಸೋಹ ಕೊಠಡಿ, ಶಿಕ್ಷಕರ ಕೊಠಡಿ ಬೀಗಗಳನ್ನು ಮುರಿಯಲಾಗಿದ್ದು, ಎಲ್ಲಿಯೂ ಯಾವದೇ ವಸ್ತುಗಳು ಕಾಣೆಯಾಗಿ ರುವ ಬಗ್ಗೆ ಮಾಹಿತಿಯಿಲ್ಲವೆಂದು, ಆಯಾ ಶಾಲೆಗಳ ಮುಖ್ಯೋಪಾಧ್ಯಾ ಯರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಮಡಿಕೇರಿ ನಗರ ಠಾಣೆ ಪೊಲೀಸರು ಮೇಲಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿ, ಆಯಾ ಶಾಲಾ ಮುಖ್ಯಸ್ಥರಿಂದ ಹೇಳಿಕೆಯೊಂದಿಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸಿಸಿ ಕ್ಯಾಮರಾ ಸುಳಿವು
ವಿದ್ಯಾಲಯದ ಪ್ರಥಮ ದರ್ಜೆ ಕಾಲೇಜಿನ ಕಚೇರಿ ಬಳಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಕಿಡಿಗೇಡಿಗಳ ಸುಳಿವು ಲಭಿಸಿದೆ. ಮೂಲಗಳ ಪ್ರಕಾರ ಮಧ್ಯರಾತ್ರಿ ಬಳಿಕ ಬೆಳಗ್ಗಿನ ಜಾವ 2 ಗಂಟೆಯಿಂದ 2.08 ಗಂಟೆ ಅವಧಿ ಯಲ್ಲಿ ಒಂದಿಬ್ಬರು ಸುಳಿದಾಡಿರು ವದು ಸಿಸಿ ಟಿವಿಯಲ್ಲಿ ದಾಖ ಲಾಗಿದೆ. ಆ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿ ದ್ದಾರೆ. ವಿದ್ಯಾಲಯ ಪರಿಸರದಲ್ಲಿ ಇತ್ತೀಚೆಗೆ 2ನೇ ಬಾರಿ ಇಂತಹ ಕೃತ್ಯ ಸಂಭವಿಸುವದಾಗಿದೆ ಎಂದು ಅಲ್ಲಿನ ಶಿಕ್ಷಕ ವೃಂದ ಆತಂಕ ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದೆ.