ಸುಂಟಿಕೊಪ್ಪ, ಆ. 5: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾಗಿ ರೋಸ್ ಮೇರಿ ರಾಡ್ರಿಗಸ್ ಅವರು ನೇಮಕಗೊಂಡಿದ್ದಾರೆ. ಗ್ರಾಮ ಪಂಚಾಯಿತಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಾರ್ಷಿಕ ಮಹಾಸಭೆಯು ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ನಡೆದು ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಉಪಾಧ್ಯಕ್ಷರಾಗಿ ಸುರೇಶ್ ಮಹೇಶ್, ಜೆಸಿಂತ ಡಿಸೋಜ (ಪೂರ್ಣಿಮಾ), ಪ್ರದಾನ ಕಾರ್ಯದರ್ಶಿಯಾಗಿ ಎಂ.ಎಸ್. ಸುನಿಲ್, ಸಹ ಕಾರ್ಯದರ್ಶಿಯಾಗಿ ಪಿರೋಜ್ ಖಾನ್, ಖಜಾಂಚಿಯಾಗಿ ಜಿ.ಬಿ. ಹರೀಶ್, ಸಂಘಟನಾ ಕಾರ್ಯದರ್ಶಿಯಾಗಿ ತಾಹೀರಾ, ಸಲಹೆಗಾರರಾಗಿ ಪಿ.ಆರ್. ಸುಕುಮಾರ್, ಓಡಿಯಪ್ಪನ ವಿಮಲಾವತಿ, ಪಿ.ಎಫ್. ಸಭಾಸ್ಟೀನ್, ಬಿ.ಡಿ. ರಾಜು ರೈ, ಸಮಿತಿ ಸದಸ್ಯರಾಗಿ ಅಪ್ಪು, ವಿಲಿಯಂ, ಸಾವಿತ್ರಿ, ಅರುಣ್ ಕುಮಾರ್, ನಾಗರತ್ನ, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಗ್ರಾ.ಪಂ. ಸದಸ್ಯರು, ವಿವಿಧ ಶಾಲಾ-ಕಾಲೇಜಿನ ಮುಖ್ಯ ಶಿಕ್ಷಕರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರುಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭ ಸ್ವಾತಂತ್ರ್ಯ ದಿನಾರಣೆಯ ಕುರಿತಾಗಿ ಸಲಹೆಗಳನ್ನು ಪಡೆದು ತಾ. 6 ರಂದು ಪೂರ್ವಭಾವಿ ಸಭೆಯನ್ನು ಗ್ರಾ.ಪಂ. ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಸಮಿತಿ ಕಾರ್ಯದರ್ಶಿ ರಾಜು ರೈ ಸ್ವಾಗತಿಸಿ, ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಸುನಿಲ್ ವಂದಿಸಿದರು.