ಮಡಿಕೇರಿ, ಆ. 5: ನಗರದ ಹೃದಯ ಭಾಗದ ಅದರಲ್ಲೂ ನಗರಸಭಾ ಕಟ್ಟಡ ಹತ್ತಿರದ ರಾಜಾಸೀಟು ಮಾರ್ಗದಲ್ಲಿರುವ ರಾಷ್ಟ್ರಕವಿ ಕುವೆಂಪು ಸ್ಮಾರಕವು ಕಳೆದ ಒಂದು ವರ್ಷದಿಂದೀಚೆಗೆ ತಡೆಗೋಡೆ ಕುಸಿತಗೊಂಡು ವಿಲಕ್ಷಣವಾಗಿ ಗೋಚರಿಸುತ್ತಿದೆ. ಈ ಬಗ್ಗೆ ಗಮನಹರಿಸಬೇಕಾದ ನಗರಸಭಾ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷ್ಯ ಕಣ್ಣಿಗೆ ಕಾಣಿಸುವಂತಿದೆ.
ಇನ್ನಾದರೂ ನಗರಸಭಾ ಆಡಳಿತ ಮಂಡಳಿ ಈ ಸ್ಮಾರಕವನ್ನು ದುರಸ್ತಿಪಡಿಸುವದರ ಮೂಲಕ ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸುವಂತೆ ಎಸ್.ಡಿ.ಪಿ.ಐ. ಆಗ್ರಹಿಸಿದೆ. ನಗರಸಭೆಗೆ ಈ ಬಗ್ಗೆ ಒಂದು ತಿಂಗಳ ಗಡುವನ್ನು ನೀಡುತ್ತಿದ್ದು, ತಪ್ಪಿದಲ್ಲಿ ಎಸ್.ಡಿ.ಪಿ.ಐ. ನಗರ ಸಮಿತಿ ಮೂಲಕ ಸ್ಮಾರಕದ ಮುಂದೆ ಪ್ರತಿಭಟನೆ ನಡೆಸಲಾಗುವದೆಂದು ಪಕ್ಷದ ಅಧ್ಯಕ್ಷ ಖಲೀಲ್ ತಿಳಿಸಿದ್ದಾರೆ.