ಗೋಣಿಕೊಪ್ಪ ವರದಿ, ಆ. 5: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದಿಂದ ತಾ. 12 ರಂದು ಬಿಟ್ಟಂಗಾಲ ಗ್ರಾಮದ ಮೇಜರ್ ಜನರಲ್ (ನಿ) ಕುಪ್ಪಂಡ ನಂಜಪ್ಪ ಅವರ ಗದ್ದೆಯಲ್ಲಿ 6ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ ಎಂದು ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕ ಅಧ್ಯಕ್ಷ ವಿಕ್ರಂ ಮೂಡಗದ್ದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ನಡೆಯಲಿದೆ. ಬಾಲಕ, ಬಾಲಕಿ, ಹಿರಿಯರು, ಸಾರ್ವಜನಿಕರಿಗೆ ಓಟ ಸ್ಪರ್ಧೆ ನಡೆಯಲಿದೆ. ಫುಟ್‍ಬಾಲ್‍ನಲ್ಲಿ ಹೆಚ್ಚಿನ ತಂಡ ಪಾಲ್ಗೊಳ್ಳುವ ಸಾಧ್ಯತೆ ಇರುವದರಿಂದ 40 ತಂಡಗಳಿಗೆ ಮಿತಿ ಹೇರಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಯ ಒಳಗೆ ಸ್ಥಳದಲ್ಲಿಯೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ವಿಜೇತರಿಗೆ ಟ್ರೋಫಿ-ನಗದು ಬಹುಮಾನ ನೀಡಲಾಗುವದು ಎಂದರು.
ಗೋಷ್ಠಿಯಲ್ಲಿ ಕ್ರೀಡಾಕೂಟದ ಸಂಯೋಜಕ ಸತೀಶ್ ಸಿಂಗಿ, ಕಾರ್ಯದರ್ಶಿ ವಿನೋದ್ ಮೂಡಗದ್ದೆ, ನಿರ್ದೇಶಕ ಶಿವಕುಮಾರ್ ಉಪಸ್ಥಿತರಿದ್ದರು.