ಮಡಿಕೇರಿ, ಆ. 5: ಇಲ್ಲಿಗೆ ಸಮೀಪದ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಕೆ.ಕೆ. ಜಯಂತಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ನೋಡೆಲ್ ಅಧಿಕಾರಿಯಾಗಿ ಜಿ.ಪಂ. ಇಂಜಿನಿಯರಿಂಗ್ ಉಪ ವಿಭಾಗದ ಅಭಿಯಂತರ ಶ್ರೀಕಂಠಯ್ಯ ಆಗಮಿಸಿದ್ದರು. ಸಭೆಯಲ್ಲಿ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಿತು. ತಾ.ಪಂ. ಸದಸ್ಯೆ ಕುಮುದ ರಶ್ಮಿ, ಗ್ರಾ.ಪಂ. ಉಪಾಧ್ಯಕ್ಷ ಭೀಮಯ್ಯ, ಸದಸ್ಯರುಗಳು, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.