ಮಡಿಕೇರಿ, ಆ. 5: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸುಗಮ ಸಂಗೀತ, ನಾಟಕ, ಶಾಸ್ತ್ರೀಯ ಸಂಗೀತ, ಕೊಡವ ಹಾಗೂ ಗೌಡ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಕಲೆ ಸಂಸ್ಕøತಿ, ಸಾಹಿತ್ಯ, ಜಾನಪದ ಕಲಾಪ್ರಾಕಾರಗಳು, ನೃತ್ಯ ರೂಪಕ, ಭರತನಾಟ್ಯ, ಜಾನಪದ ನೃತ್ಯ ಮುಂತಾದ ಕಲೆಗಳಲ್ಲಿ ಆಸಕ್ತಿ ಹೊಂದಿರುವ ಕೊಡಗು ಜಿಲ್ಲಾ ಕಲಾವಿದರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳದೆ ಇರುವ ಕಲಾವಿದರುಗಳಿಗೆ ಮುಂದೆ ಕಾರ್ಯಕ್ರಮ ನೀಡಲು ಸಾಧ್ಯವಿರುವದಿಲ್ಲ. ಆದ್ದರಿಂದ ಜಿಲ್ಲೆಯ ಹಿರಿಯ ಕಲಾವಿದರುಗಳು, ಯುವ ಕಲಾವಿದರು, ಪ್ರತಿಭಾನ್ವಿತ ಮಕ್ಕಳು, ಕಲೆ ಸಂಸ್ಕøತಿ ಸಾಹಿತ್ಯದಲ್ಲಿ ಗುರುತಿಸಿಕೊಂಡಿರುವ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕ್ರಮ ನೀಡಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ಅರ್ಜಿ ನಮೂನೆಗಳನ್ನು ಪಡೆದು ಸ್ವ ವಿವರದೊಂದಿಗೆ ಭರ್ತಿ ಮಾಡಿ ತಾ. 14 ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:08272-228490 ರಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.