ಸಿದ್ದಾಪುರ, ಆ. 5: ಅಮ್ಮತ್ತಿ ಹೋಬಳಿ ನಾಡು ಕಚೇರಿಯ ವ್ಯಾಪ್ತಿಯ ಪಿಂಚಣಿದಾರರ ಪಿಂಚಣಿ ಅದಾಲತ್ ಕಾರ್ಯಕ್ರಮ ಅಮ್ಮತ್ತಿ ನಾಡು ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭ ಜಿಲ್ಲಾ ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಅವರು ವಿವಿಧ ಪಿಂಚಣಿಯ 7 ಮಂದಿ ಪಿಂಚಣಿದಾರರಿಗೆ ಪಿಂಚಣಿಯ ಆದೇಶ ಪತ್ರವನ್ನು ನೀಡಿದರು. ಈ ಸಂದರ್ಭ ಅಮ್ಮತ್ತಿ ಹೋಬಳಿ ಗ್ರಾಮ ಲೆಕ್ಕಾಧಿಕಾರಿಗಳಾದ ಅನಿಲ್‍ಕುಮಾರ್, ಮಂಜುನಾಥ್ ಇನ್ನಿತರರು ಹಾಜರಿದ್ದರು.