ಮಡಿಕೇರಿ, ಆ. 5: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಬಿ.ಆರ್. ಸವಿತಾ ರೈ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಸವಿತಾ ರೈ ಆಯ್ಕೆಯಾಗಿದ್ದು, ಸಂಘದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿ ಸವಿತಾ ರೈ ಸಾರಥ್ಯ ವಹಿಸಿಕೊಂಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 154 ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಸವಿತಾ ರೈ 81 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಪ್ರತಿ ಸ್ಪರ್ಧಿಗಳಾಗಿದ್ದ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ 45 ಹಾಗೂ ಜಿ.ವಿ. ರವಿಕುಮಾರ್ 27 ಮತ ಗಳಿಸಿದರು.15 ಮಂದಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 16 ಮಂದಿ ಸ್ಪರ್ಧಿಸಿದ್ದು, ಈ ಪೈಕಿ ಉದಯ್ ಮೊಣ್ಣಪ್ಪ (128), ಕುಪ್ಪಂಡ ದತ್ತಾತ್ರಿ (122), ಕುಡೆಕಲ್ ಗಣೇಶ್ (121), ಎಂ.ಎನ್. ಚಂದ್ರಮೋಹನ್ (114), ಚೆರಿಯಮನೆ ಸುರೇಶ್ (110), ನವೀನ್ ಸುವರ್ಣ (121), ಎಂ.ಎನ್. ನಾಸಿರ್ (119), ಪ್ರೇಮ್‍ಕುಮಾರ್ (115), ಮಂಜು ಸುವರ್ಣ (115), ಮೇಲ್ಚೆಂಬು ಮನೋಜ್ (114), ಮಲ್ಲಿಕಾರ್ಜುನ (115), ಮುಬಾರಕ್ (121), ಯಶೋಧ (105), ಬಿ.ಡಿ. ರಾಜು ರೈ (110), ಟಿ.ಕೆ. ಸಂತೋಷ್ (132) ಜಯಗಳಿಸಿದ್ದಾರೆ. ಚಟ್ಟಂಗಡ ರವಿ ಸುಬ್ಬಯ್ಯ (74) ಮತ ಗಳಿಸಿ ಪರಾಭವಗೊಂಡÀರು.

ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತ್ತಿಕೆರೆ ಜಯರಾಂ(128), ಪುಂಡಲೀಕ ಭೀಮಪ್ಪ (81), ಲೀಲಾವತಿ (18), ವಾಸುದೇವ್ (14), ಸೊಗಡು ವೆಂಕಟೇಶ್ (19) ಮತಗಳಿಸಿದರು. ಚುನಾವಣೆಯಲ್ಲಿ 11 ಮತಗಳು ತಿರಸ್ಕøತಗೊಂಡಿವೆ.