ಸುಂಟಿಕೊಪ್ಪ, ಆ. 5: ಹರದೂರು ಅಂಚೆ ಕಚೇರಿಯಲ್ಲಿ ಅಂಚೆ ವಿತರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಆರ್. ನಾರಾಯಣ ಅವರು ಅನಾರೋಗ್ಯದಿಂದ ಇತ್ತೀಚೆಗೆ ಮೃತರಾಗಿದ್ದು, ತೀರಾ ಬಡತನದಲ್ಲಿರುವ ಇವರ ಕುಟುಂಬಕ್ಕೆ ಸುಂಟಿಕೊಪ್ಪ ಅಂಚೆ ಕಚೇರಿ ಮತ್ತು ಉಪ ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿಗಳು ಸಂಗ್ರಹಿಸಿದ ರೂ. 10,250 ಹಣವನ್ನು ಕೆ.ಆರ್. ನಾರಾಯಣ ಅವರ ಪತ್ನಿ ಕೆ.ಎನ್. ಅಶ್ವಿನಿ ಅವರಿಗೆ ನೀಡಿ ಮಾನವಿಯತೆ ಮೆರೆದಿದ್ದಾರೆ. ಈ ಸಂದರ್ಭ ಸುಂಟಿಕೊಪ್ಪ ಅಂಚೆ ಕಚೇರಿ ಪ್ರಧಾನ ಅಧಿಕಾರಿ ಶ್ರೀನಿವಾಸ, ಹರದೂರು ವಿಭಾಗ ಅಧಿಕಾರಿ ಬಿ.ಬಿ. ಚಿನ್ನಪ್ಪ, ಮತ್ತಿಕಾಡು ಅಧಿಕಾರಿ ಎನ್.ಆರ್. ಮುರಳಿಧರ್, ಕೆ. ಬೈಚನಹಳ್ಳಿ ಅಧಿಕಾರಿ ಸಂದೀಪ್, ಅಂಚೆ ವಿತರಕ ಮಹೇಶ್, ಡಿ ದರ್ಜೆ ನೌಕರ ಪೊನ್ನಪ್ಪ ಹಾಜರಿದ್ದರು.