ಏರ್‍ಟೆಲ್ ವಿರುದ್ಧ ಪ್ರಕರಣ ದಾಖಲು

ಶ್ರೀನಗರ, ಆ. 5: ಪ್ರತಿಷ್ಠಿತ ಟೆಲಿಕಾಂ ಸಂಸ್ಥೆ ಏರ್‍ಟೆಲ್ ವಿರುದ್ಧ ಪೆÇಲೀಸರು ಕಳ್ಳತನದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್‍ನಿಂದ ವಿದ್ಯುತ್ ಕಳ್ಳತನ ಮಾಡುತ್ತಿದೆ ಎಂದು ಸಾರ್ವನಿಕ ಕ್ಷೇತ್ರದ ಟೆಲಿಕಾಂ ಸಂಸ್ಥೆ ದೂರು ದಾಖಲಿಸಿದ್ದು, ಪೆÇಲೀಸರು ಏರ್‍ಟೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಎಸ್‍ಎನ್‍ಎಲ್ ಸಂಸ್ಥೆ ಬಳಕೆ ಮಾಡುತ್ತಿರುವ ಟ್ರಾನ್ಸ್‍ಫಾರ್ಮರ್‍ನಿಂದ ಏರ್‍ಟೆಲ್ ಸಂಸ್ಥೆ ತನ್ನ ಟವರ್‍ಗಾಗಿ ವಿದ್ಯುತ್ ಕಳ್ಳತನ ಮಾಡುತ್ತಿದೆ ಎಂದು ತಾ. 3 ರಂದು ಬಿಎಸ್‍ಎನ್‍ಎಲ್ ಸಂಸ್ಥೆ ದೂರು ನೀಡಿತ್ತು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಏರ್‍ಟೆಲ್ ಟವರ್‍ನ್ನು ಬಿಎಸ್‍ಎನ್‍ಎಲ್ ಟ್ರಾನ್ಸ್‍ಫಾರ್ಮರ್‍ಗೆ ಅಕ್ರಮವಾಗಿ ಕನೆಕ್ಟ್ ಮಾಡಲಾಗಿರುವದು ಕಂಡುಬಂದಿದೆ. ವಿದ್ಯುತ್ ಕಾಯ್ದೆಯ ಸೆಕ್ಷನ್ 95 ರ ಅಡಿಯಲ್ಲಿ ಏರ್‍ಟೆಲ್ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಧ ಲೀಟರ್ ನೀರಿಗೆ ರೂ. 1

ಬೆಂಗಳೂರು, ಆ. 5: ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ ಬಸ್‍ನಲ್ಲಿ ನೀರು ಕೊಂಡೊಯ್ಯಬೇಕಾಗಿಲ್ಲ ಅಥವಾ ದುಬಾರಿ ಹಣ ಕೊಟ್ಟು ಮಿನರಲ್ ವಾಟರ್ ಖರೀದಿಸಬೇಕಾಗಿಲ್ಲ. ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ರಿವರ್ಸ್ ಒಸ್ಮೊಸಿಸ್ ಘಟಕಗಳನ್ನು ಸ್ಥಾಪಿಸಲು ನಿಗಮ ಮುಂದಾಗಿದೆ. ಮಂಡ್ಯ ವಿಭಾಗದ ಶ್ರೀರಂಗಪಟ್ಟಣ ಬಸ್ ನಿಲ್ದಾಣದ ಸಮೀಪ ಪಾಂಡವಪುರದಲ್ಲಿ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸಕ್ತ ವರ್ಷ ರಾಜ್ಯಾದ್ಯಂತ 156 ಬಸ್ ನಿಲ್ದಾಣಗಳಲ್ಲಿ ಇಂತಹ ಘಟಕ ಸ್ಥಾಪಿಸಲು ಮುಂದಾಗಿದೆ. ಪ್ರಯಾಣಿಕರಿಗೆ ನೀಡುವ ಅರ್ಧ ಲೀಟರ್ ನೀರಿಗೆ ರೂ. 1 ಮತ್ತು ಒಂದು ಲೀಟರ್‍ಗೆ ರೂ. 2 ಮತ್ತು 5 ಲೀಟರ್‍ಗೆ ರೂ. 5 ನಿಗದಿಪಡಿಸಲಿದೆ. ಈ ಬಗ್ಗೆ ವಿವರಣೆ ನೀಡಿದ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್, ರಾಜ್ಯಾದ್ಯಂತ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುತ್ತದೆ. ಆದರೆ ಒಂದು ನಿಲ್ದಾಣದಲ್ಲಿ ಇದ್ದಂತೆ ಇನ್ನೊಂದು ನಿಲ್ದಾಣದಲ್ಲಿ ನೀರಿನ ಮೂಲಗಳು ಇರುವದಿಲ್ಲ, ಹೀಗಾಗಿ ನೀರಿನ ಶುದ್ಧತೆ ಬಗ್ಗೆ ನಾವು ಖಾತ್ರಿ ನೀಡುವದಿಲ್ಲ ಎನ್ನುತ್ತಾರೆ. ಆದರೆ ಬಡ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ರಿವರ್ಸ್ ಒಸ್ಮೊಸಿಸ್ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದರು.

ಅಪ್ಪ-ಅಮ್ಮ ಸೆಲ್ಫಿ ಹುಚ್ಚು : ಮಗು ಸಾವು

ಸೂರತ್, ಆ. 5: ತಂದೆ-ತಾಯಿ ಸೆಲ್ಫಿ ತೆಗೆದುಕೊಳ್ಳುವಲ್ಲಿ ಬ್ಯುಸಿಯಾಗಿದ್ದು ಈ ವೇಳೆ ಮೂರು ವರ್ಷದ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಗುಜರಾತ್‍ನಲ್ಲಿ ನಡೆದಿದೆ. ದಂಪತಿ ಇಬ್ಬರು ಮಕ್ಕಳ ಜತೆ ಗಾರ್ಡನ್‍ಗೆ ಬಂದಿದ್ದರು. ಈ ವೇಳೆ ದಂಪತಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಮೂರು ವರ್ಷದ ಮಗು ಪಕ್ಕದಲ್ಲೇ ಇದ್ದ ಕೆರೆಗೆ ಬಿದ್ದು ಮುಳುಗಿದೆ. ಇದರ ಪರಿವೇ ಇಲ್ಲದೆ ದಂಪತಿಗಳು ಸೆಲ್ಫಿ ತೆಗೆದುಕೊಳ್ಳುವಲ್ಲಿ ಬ್ಯುಸಿಯಾಗಿದ್ದರು. ಕೆಲ ಸಮಯದ ನಂತರ ಮಗು ಅಲ್ಲಿರದಿರುವದು ಗಮನಿಸಿದ ದಂಪತಿ ಗಾರ್ಡನ್‍ನಲ್ಲಿ ಹುಡುಕಾಡಿದ್ದಾರೆ. ಎಷ್ಟೇ ಹುಡುಕಿದರು ಮಗು ಸಿಗದಿದ್ದ ಕಾರಣ ದಂಪತಿ ತಕ್ಷಣ ಪೆÇಲೀಸ್ ಠಾಣೆಗೆ ತೆರಳಿ ಮಗು ಅಪಹರಣವಾಗಿದೆ ಎಂದು ದೂರು ಕೊಟ್ಟಿದ್ದಾರೆ. ತನಿಖೆ ಕೈಗೊಂಡ ಪೆÇಲೀಸರು ಮಗು ನಾಪತ್ತೆಯಾದ ಸ್ಥಳದಲ್ಲಿದ್ದ ಕೆರೆಯ ಬಳಿ ಶೂ ಸಿಕ್ಕಿದೆ. ಅಗ್ನಿಶಾಮಕ ಸಿಬ್ಬಂದಿ ಕೆರೆಯಿಂದ ಮಗುವಿನ ದೇಹವನ್ನು ಮೇಲೆತ್ತಿದಾಗಲೇ ಮಗು ನೀರಲ್ಲಿ ಮುಳುಗಿ ಸಾವನ್ನಪ್ಪಿರುವದು ಬೆಳಕಿಗೆ ಬಂದಿದೆ

ಸೇನೆ ಗುಂಡಿನ ಧಾಳಿ : ವ್ಯಕ್ತಿ ಸಾವು

ಬನಿಹಾಲ್, ಆ. 5: ಜಮ್ಮು ಮತ್ತು ಕಾಶ್ಮೀರದ ರಂಬನ್ ಎಂಬ ಜಿಲ್ಲೆಯಲ್ಲಿ ಸೇನೆ ನಡೆಸಿದ್ದ ಗುಂಡಿನ ಧಾಳಿಗೆ ಜಾನುವಾರು ವ್ಯಾಪಾರಿ ಸಾವನ್ನಪ್ಪಿ, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮೊಹಮ್ಮದ್ ರಫೀಕ್ ಗುಜ್ಜರ್ (28) ಸಾವನ್ನಪ್ಪಿದ್ದ ಜಾನುವಾರು ವ್ಯಾಪಾರಿಯಾಗಿದ್ದು, ಶಕೀಲ್ ಅಹ್ಮದ್ (30) ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಇಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಗುಜ್ಜರ್ ಹಾಗೂ ಶಕೀಲ್ ಇಬ್ಬರೂ ಕೊಹ್ಲಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ 58 ರಾಷ್ಟ್ರೀಯ ರೈಫಲ್ಸ್ ಪಡೆ ಗುಂಡಿನ ಧಾಳಿ ನಡೆಸಿದ್ದು, ಗುಜ್ಜರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಗಾಯಗೊಂಡಿದ್ದ ಶಕೀಲ್‍ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೆÇಲೀಸರು ಹೇಳಿದ್ದಾರೆ. ಗುಜ್ಜರ್ ಹಾಗೂ ಶಕೀಲ್ ಇಬ್ಬರೂ ಜಾನುವಾರು ವ್ಯಾಪಾರಿಗಳಾಗಿದ್ದು, ವ್ಯವಹಾರ ನಿಮಿತ್ತ ಗ್ರಾಮಕ್ಕೆ ಬಂದಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಘಟನೆ ಕುರಿತಂತೆ ರಂಬಾನ್ ಪೆÇಲೀಸ್ ಅಧಿಕಾರಿ ಹೇಳಿಕೆ ನೀಡಿದ್ದು, ನಾಗರಿಕನ ಸಾವು ಹಾಗೂ ವ್ಯಕ್ತಿ ಗಾಯಗೊಂಡಿರುವದನ್ನು ದೃಢಪಡಿಸಿದ್ದಾರೆ. ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಹಿಟ್ಟಿನ ಗಿರಣಿಗೆ ಸಿಲುಕಿ ಮಹಿಳೆ ಸಾವು

ಕಾರವಾರ, ಆ. 5: ಹಿಟ್ಟಿನ ಗಿರಣಿಯ ಮೆಷಿನ್ ಒಳಗೆ ತಲೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್‍ನಲ್ಲಿ ನಡೆದಿದೆ. ಮಾಲಿನಿ ನಾಯ್ಕ (30) ಮೃತ ದುರ್ದೈವಿ. ಇಂದು ಬೆಳಿಗ್ಗೆ ಈ ಘಟನೆ ಸಂಭವಿಸಿದ್ದು, ಇವರು ಮಿರ್ಜಾನ್‍ನಲ್ಲಿ ಹಿಟ್ಟಿನ ಮೆಷಿನ್‍ನಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಮಾಲಿನಿ ನಾಯ್ಕ ಅವರು ಎಂದಿನಂತೆ ಇಂದು ಬೆಳಿಗ್ಗೆ ತನ್ನ ಮನೆಯಲ್ಲಿ ಹಿಟ್ಟಿನ ಗಿರಣಿಯಲ್ಲಿ ಹಿಟ್ಟು ಮಾಡಲು ಪುಡಿಯನ್ನು ಮೆಷಿನ್ ಒಳಗೆ ಹಾಕುತ್ತಿದ್ದರು. ಈ ವೇಳೆ ಮೆಷಿನ್‍ನಲ್ಲಿದ್ದ ಬ್ಲೇಡುಗಳಿಗೆ ಮಾಲಿನಿ ಅವರ ತಲೆಕೂದಲು ಸಿಲುಕಿಕೊಂಡಿದೆ. ತಕ್ಷಣ ಬಿಡಿಸಿಕೊಳ್ಳಲು ಸಾಧ್ಯವಾಗದೆ ಮಾಲಿನಿಯ ಅವರ ತಲೆಯು ಅದರೊಳಗೆ ಸೇರಿ ಜಜ್ಜಿಹೋಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ.

ರನ್ನರ್ ಅಪ್‍ಗೆ ಪಿ.ವಿ. ಸಿಂಧು ತೃಪ್ತಿ

ಚೀನಾ, ಆ. 5: ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್ ಫೈನಲ್ಸ್ ಪ್ರವೇಶಿಸಿದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಫೈನಲ್ಸ್‍ನಲ್ಲಿ ಸ್ಪ್ಯಾನಿಷ್‍ನ ಕೆರೊಲಿನಾ ಮರಿನ್ ವಿರುದ್ಧ ಸೆಣೆಸಿದ್ದ ಪಿ.ವಿ. ಸಿಂಧು 19-21, 10-21 ಸೆಟ್‍ಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದು, ಸತತ ಎರಡನೇ ಬಾರಿಗೆ ಫೈನಲ್ಸ್‍ನಲ್ಲಿ ಎಡವಿದ್ದಾರೆ. ಈ ಆವೃತ್ತಿಗೂ ಮುನ್ನ ಫೈನಲ್ಸ್ ಪಂದ್ಯಗಳಲ್ಲಿ ಸೋತಿದ್ದರು. ಕೆರೊಲಿನಾ ಮರಿನ್ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‍ಶಿಪ್ ಪಂದ್ಯವನ್ನು ಗೆಲ್ಲುವ ಮೂಲಕ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೂರು ವಿಶ್ವದರ್ಜೆಯ ಚಾಂಪಿಯನ್‍ಶಿಪ್‍ಗಳನ್ನು ಹೊಂದಿರುವ ಮೊದಲ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.