ಚೆಟ್ಟಳ್ಳಿ, ಆ. 5: ನಂಜರಾಯಪಟ್ಟಣ ಮೀಸಲು ಅರಣ್ಯದೊಳಗೆ ಕೊಳೆತ ಸ್ಥಿತಿಯಲ್ಲಿ ಕಾಡಾನೆ ಕಳೇಬರ ಪತ್ತೆಯಾಗಿದೆ.
ಇಂದು ಬೆಳಿಗ್ಗೆ ಅರಣ್ಯ ಸಿಬ್ಬಂದಿಗಳು ಅರಣ್ಯದೊಳಗೆ ಗಸ್ತು ತಿರುಗುತ್ತಿದ್ದಾಗ ಕಾಡುಪ್ರಾಣಿಯ ಕೊಳೆÉತ ವಾಸನೆ ಬರುತ್ತಿದ್ದು, ಹುಡುಕಾಡಿದಾಗ 55 ವರ್ಷದ ಒಂಟಿ ದಂತದ ಕಾಡಾನೆಯೊಂದು ಸತ್ತು ಸುಮಾರು ಒಂದು ವಾರವಾಗಿದೆ. ಅರಣ್ಯಇಲಾಖೆಯ ಮೇಲಾಧಿಕಾರಿ ಗಳಿಗೆ ಮಾಹಿತಿ ರವಾನಿಸಲಾಯಿತು. ಉಪವಲಯ ಅರಣ್ಯಾಧಿಕಾರಿ ವಿಲಾಸ್‍ಗೌಡ ಹಾಗೂ ವೈದ್ಯಾಧಿಕಾರಿ ಡಾ. ಮೂಜೀಬ್ ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿ, ದಂತವನ್ನು ಕತ್ತರಿಸಿ ಇಲಾಖೆಗೆ ಒಪ್ಪಿಸಲಾಯಿತು.
ಕಳೆದ ಹತ್ತುದಿನಗಳ ಹಿಂದೆ ಕಾಡಾನೆಗಳ ಕಾದಾಟದಲ್ಲಿ ಗಾಯಗೊಂಡ ಆನೆ ಅರಣ್ಯದೊಳಗೆ ಪತ್ತೆಯಾಗಿದ್ದು ಅದೇ ಕಾಡಾನೆ ಮರಣಹೊಂದಿರುವ ಬಗ್ಗೆ ಅಧಿಕಾರಿಗಳು ಶಂಕಿಸಿದ್ದಾರೆ.
-ಕರುಣ್ ಕಾಳಯ್ಯ