ಸೋಮವಾರಪೇಟೆ, ಆ. 5: ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಸೋಮವಾರಪೇಟೆ ಅರಣ್ಯಾಧಿಕಾರಿಗಳು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಪಟ್ಟಣ ಸಮೀಪದ ಕರ್ಕಳ್ಳಿ ಬಾಣೆಯ ಮರದ ಮಿಲ್‍ನಲ್ಲಿ ಅಕ್ರಮವಾಗಿ 7 ಬೀಟೆ ಮರದ ನಾಟಾಗಳನ್ನು ಇಟ್ಟುಕೊಂಡಿದ್ದ ರವಿ ಎಂಬಾತನನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು, ಮೊಕದ್ದಮೆ ದಾಖಲಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ ಮೇರೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮರವನ್ನು ಪ್ಲೈನಿಂಗ್ ಮಾಡುವ ಯಂತ್ರ ಹಾಗೂ ಬೀಟೆ ನಾಟಾಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ಕಲ್ಕಂದೂರು ಗ್ರಾಮದ ರಂಜು ಎಂಬಾತ ಪಿಕ್ ಅಪ್ (ಕೆ.ಎ.12 ಎ. 7548)ನೊಂದಿಗೆ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಬಲೆಬೀಸಲಾಗಿದೆ.