ಮಡಿಕೇರಿ, ಆ. 5: ಮೂರ್ನಾಡು ಪದವಿ ಕಾಲೇಜಿನ ಸಭಾಂಗಣದಲ್ಲಿ ತಾ. 6 ರಂದು (ಇಂದು) ಅಪರಾಹ್ನ 3.15ಕ್ಕೆ ಇತ್ತೀಚೆಗೆ ನಿಧನರಾದ ಖ್ಯಾತ ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಪಠ್ಯ ಪುಸ್ತಕಗಳ ಲೇಖಕ ಪ್ರೊ. ಬಿ.ಎಸ್. ರಾಮನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯನ್ನು ಏರ್ಪಡಿಸಲಾಗಿದೆ.
ಅಸಂಖ್ಯಾತ ವಾಣಿಜ್ಯ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಪ್ರೊ. ರಾಮನ್ ಅವರ ವಾಣಿಜ್ಯ ಶಾಸ್ತ್ರ ಪುಸ್ತಕ ಇಂದಿಗೂ ಕೂಡ ವಾಣಿಜ್ಯ ವಿದ್ಯಾರ್ಥಿಗಳ ಆಶಾದೀಪವಾಗಿದೆ. ಸುಮಾರು 35 ವರ್ಷಗಳ ಕಾಲ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿದ್ದ ಅವರು 110ಕ್ಕೂ ಹೆಚ್ಚು ವಾಣಿಜ್ಯ ಸಂಬಂಧಿ ಪುಸ್ತಕಗಳನ್ನು ಬರೆದಿದ್ದಾರೆ. ವಾಣಿಜ್ಯ ಶಾಸ್ತ್ರದ ವಿಸ್ಮಯವಾದ ಇವರು ಇತ್ತೀಚೆಗೆ ನಿಧನರಾಗಿದ್ದಾರೆ.
ಶ್ರದ್ಧಾಂಜಲಿ ಸಭೆಗೆ ಸುತ್ತಮುತ್ತಲಿನ ಅಭಿಮಾನಿಗಳು, ವಿದ್ಯಾರ್ಥಿಗಳು, ಶಿಕ್ಷಕ ವರ್ಗದವರು ಪಾಲ್ಗೊಳ್ಳಬಹುದಾಗಿ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅವರು ತಿಳಿಸಿದ್ದಾರೆ.