ಮಡಿಕೇರಿ, ಆ. 4: ಸದಾ ಗಿಜಿಗುಡುವ ಮಡಿಕೇರಿ ಸಂತೆಯ ಮುಂಭಾಗದಲ್ಲಿ ನಗರಸಭೆಯ ನಿರ್ಲಕ್ಷ್ಯದಿಂದ ಅಪಾಯಕಾರಿ ಗುಂಡಿಯಿದ್ದು, ಅನೇಕರು ಇಲ್ಲಿ ಆಕಸ್ಮಿಕ ಬಿದ್ದೆದ್ದು, ನರಳುತ್ತಾ ಮನೆ ಸೇರಿರುವ ಪ್ರಸಂಗಗಳು ಘಟಿಸಿದೆ. ಹೀಗಿದ್ದೂ ಅಲ್ಲಿನ ಜನಪ್ರತಿನಿಧಿಗಳು ಮಾತ್ರ ಸೊಲ್ಲೇ ಎತ್ತುವದಿಲ್ಲವೆಂದು ಮಾರುಕಟ್ಟೆ ವ್ಯಾಪಾರಿಗಳು ಆರೋಪಿಸಿದ್ದಾರೆ.
ಮಹದೇವಪೇಟೆ ಮಾರುಕಟ್ಟೆ ಮುಂಭಾಗದಿಂದ ನೇರವಾಗಿ ಗಣಪತಿ ಬೀದಿಗೆ ಇಳಿಯುವ ಈ ರಸ್ತೆಯ ಇಕ್ಕಡೆಗಳಲ್ಲಿಯೂ ಅಪೂರ್ಣ ಕೆಲಸದೊಂದಿಗೆ ಪುಟ್‍ಪಾತ್‍ಗೆ ಮುಚ್ಚದೆ ಬಿಟ್ಟಿರುವ ಪರಿಣಾಮ ಅವು ಖಾಯಂ ಗುಂಡಿಯಂತೆ ಇದ್ದು, ಇನ್ನಾದರೂ ಸಂಬಂಧಪಟ್ಟವರು ಅಲ್ಲಿ ಸೂಕ್ತ ಕ್ರಮ ಕೈಗೊಂಡು ಜನರಿಗೆ ತೊಂದರೆ ತಪ್ಪಿಸುವಂತೆ ‘ಶಕ್ತಿ’ ಮೂಲಕ ಆಗ್ರಹಿಸಿದ್ದಾರೆ.