ಸಿದ್ದಾಪುರ, ಆ. 4: ವಿದ್ಯುತ್ ಸ್ಪರ್ಶಗೊಂಡು ಹಾಲು ಕರೆಯುವ ಹಸುವೊಂದು ಧಾರುಣವಾಗಿ ಸಾವನ್ನಪ್ಪಿದ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ. ಗುಹ್ಯ ಗ್ರಾಮದ ನಿವಾಸಿ ಮಣಿ ಎಂಬವರಿಗೆ ಸೇರಿದ ಹಸು ಮನೆಯ ಸಮೀಪದ ಗದ್ದೆಯ ಬಳಿ ಮೇಯುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಹಸು ಸ್ಥಳದಲ್ಲೇ ಮೃತಪಟ್ಟಿದೆ.

ಈ ಬಗ್ಗೆ ಮಣಿ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ ಮೇರೆಗೆ ದೂರು ದಾಖಲಾಗಿದೆ. ಮಣಿ ಅವರಿಗೆ ಕೂಡಲೇ ವಿದ್ಯುತ್ ನಿಗಮ ಪರಿಹಾರ ನೀಡಬೇಕೆಂದು ಗುಹ್ಯ ಗ್ರಾಮದ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಒತ್ತಾಯಿಸಿದ್ದಾರೆ. -ವಾಸು