*ಸಿದ್ದಾಪುರ, ಆ. 4: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ತಾ. 18ರಂದು ನಡೆಯಲಿರುವ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಪ್ರಾರಂಭ ಗೊಂಡಿದ್ದು, ಇಂದು 12 ಮಂದಿ ನಾಮ ಪತ್ರ ಸಲ್ಲಿಸಿದರು. ಬಿಜೆಪಿ ಬೆಂಬಲಿತ ಹಾಗೂ ಜನಪರ ಹೋರಾಟ ಸಮಿತಿಯಿಂದ ಈ ಹಿಂದೆ ಆಡಳಿತ ಮಂಡಳಿಯಲ್ಲಿದ್ದ ಸರ್ವರೂ ನಾಮ ಪತ್ರ ಸಲ್ಲಿಸಿದ್ದಾರೆ. ಮೀಸಲು ಕ್ಷೇತ್ರ ಬಿಸಿಎಂ ಅಭ್ಯರ್ಥಿ ಯಾಗಿ ಧನಂಜಯ, ಪರಿಶಿಷ್ಟ ಪಂಗಡದಿಂದ ಸೀತಮ್ಮ ಮತ್ತು ಕಾಶಿ ನಾಮಪತ್ರ ಸಲ್ಲಿಸಿದವ ರಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಬಲ್ಲಾರಂಡ ಮಣಿ ಉತ್ತಪ್ಪ, ಉಪಾಧ್ಯಕ್ಷ ಹೆಚ್.ಎಸ್. ತಿಮ್ಮಪಯ್ಯ, ನಿರ್ದೇಶಕರಾಗಿದ್ದ ನೂಜಿಬೈಲು ನಾಣಯ್ಯ, ಮರದಾಳು ಉಲ್ಲಾಸ, ಬಟ್ಟೀರ ಅಪ್ಪಣ್ಣ, ಪುತ್ತೇರೀರ ಸೀತಮ್ಮ. ಕೊಂಗೇಟಿರ ವಾಣಿ ಕಾಳಪ್ಪ, ಶಾಂತಪ್ಪ ನಾಮಪತ್ರ ಸಲ್ಲಿಸಿದ್ದಾರೆ.