ಕೂಡಿಗೆ, ಆ. 4: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಪ್ರಕಿಯೆ ಸಂಬಂಧ ಇಂದಿನಿಂದ ನಾಮಪತ್ರ ಸಲ್ಲಿಗೆ ಪ್ರಾರಂಭವಾಗಿದೆ. 15 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ವಿಭಾಗದಲ್ಲಿ ಸಾಲಗಾರ ಕ್ಷೇತ್ರ, ಸಾಲಗಾರರಲ್ಲದ ಕ್ಷೇತ್ರ, ಮಹಿಳಾ ಕ್ಷೇತ್ರಗಳು ಸೇರಿದಂತೆ 13 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಚುನಾವಣಾ ಅಧಿಕಾರಿಯಾಗಿ ಜಿಲ್ಲಾ ಸಹಕಾರ ಬ್ಯಾಂಕ್ ಅಧಿಕಾರಿ ಎಸ್.ಎಂ. ರಘ ಕಾರ್ಯ ನಿರ್ವಹಿಸುತ್ತಿದ್ದಾರೆ.