ಗೋಣಿಕೊಪ್ಪಲು, ಆ. 4: ಇಲ್ಲಿನ ಕಾವೇರಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ತಾ. 10 ರಂದು ಪುಚ್ಚಿಮಾಡ ದಿ. ತಿಮ್ಮಯ್ಯ, ದಿ. ಚೋಂದಮ್ಮ ತಿಮ್ಮಯ್ಯ ಹಾಗೂ ದಿ. ಮೀನಾ ಸುಬ್ಬಯ್ಯ ಅವರ ಜ್ಞಾಪಕಾರ್ಥ ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಭಾಷಣದ ವಿಷಯ ಕನ್ನಡದಲ್ಲಿ ‘‘ಆಧುನಿಕ ಯೋಜನೆಗಳು ಕೊಡಗಿನ ಪರಿಸರಕ್ಕೆ ಮಾರಕವೇ?.” ಹಾಗೂ ಆಂಗ್ಲ ಭಾಷೆಯಲ್ಲಿ ‘ಮೈ ರೈಟ್ಸ್ ರೆಸ್ಪಾಂನ್ಸಿಬಲಿಟೀಸ್ ಅಂಡ್ ಡ್ಯೂಟೀಸ್ ಟುವಡ್ರ್ಸ್ ಮೈ ಮದರ್‍ಲ್ಯಾಂಡ್ ವಿತಿನ್ ದಿ. ಫ್ರೇಂವರ್ಕ್ ಆಫ್ ಅವರ್ ಕಾನ್ಸ್ಟಿಟ್ಯೂಷನ್’ ಆಗಿರುತ್ತದೆ. ಒಂದು ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದು. ಕನ್ನಡ ಹಾಗೂ ಆಂಗ್ಲ ಭಾಷಾ ವಿಭಾಗಕ್ಕೆ ಪ್ರತ್ಯೇಕ ಬಹುಮಾನ ಹಾಗೂ ರೋಲಿಂಗ್ ಟ್ರೋಫಿ ನೀಡಲಾಗುವದು. ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುವದು. ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈ ಸಂಧರ್ಭ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ, ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಮಾಜಿ ಆಟಗಾರ ಕೆ.ಬಿ. ರವಿದೇವಯ್ಯ ಹಾಗೂ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಮಲ್ಚಿರ ಆಶಾ ಅವರನ್ನು ಸನ್ಮಾನಿಸಲಾಗುವದು. ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎ.ಸಿ. ಗಣಪತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಭಾಗವಹಿಸಲಿದ್ದಾರೆ ಎಂದು ಕಾವೇರಿ ಕಾಲೇಜು ಪ್ರಾಂಶುಪಾಲೆ ಹಾಗೂ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಎಸ್. ಆರ್. ಉಷಾಲತಾ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448796966 ಹಾಗೂ 9483826120 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.