ಸುಂಟಿಕೊಪ್ಪ, ಆ. 3: ಕಂಬಿಬಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂತನಕಾಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಿಕ್ಷಕಿ ಭಾಗೀರಥಿ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.

ಶಿಕ್ಷಣ ಸಂಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಶಿಕ್ಷಕಿ ಭಾಗೀರಥಿ ಅವರನ್ನು ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಎಸ್.ಕೆ. ಸೌಭಾಗ್ಯ ನೆನಪಿನ ಕಾಣಿಕೆಯನ್ನು ನೀಡಿ ಬೀಳ್ಕೊಟ್ಟರು. ಸುಂಟಿಕೊಪ್ಪ ಕ್ಲಷ್ಟರ್‍ನ ಸಿ.ಅರ್.ಪಿ. ಪುರುಷೋತ್ತಮ, ಅತ್ತೂರು-ನಲ್ಲೂರು ಶಾಲೆಯ ಮುಖ್ಯ ಶಿಕ್ಷಕಿ ನತಾಲೀಸ್. ಭೂತನಕಾಡು ಶಾಲೆಯ ಶಿಕ್ಷಕಿ ಯೋಗೇಶ್ವರಿ, ಶಿಕ್ಷಕಿಯರಾದ ಲೋಕಮ್ಮ ಲೀಲಾವತಿ, ದೈಹಿಕ ಶಿಕ್ಷಕ ಜಲೀಲ್ ಅಹ್ಮದ್ ಇದ್ದರು.