ಗೋಣಿಕೊಪ್ಪಲು, ಆ. 3: ನಾಗರೀಕರ ಹೆಚ್ಚಿನ ಸಹಕಾರ ಲಭ್ಯವಾದಲ್ಲಿ ದೇಶದಲ್ಲಿ ನಮ್ಮ ಪಂಚಾಯಿತಿಯ ಹೆಸರನ್ನು ಉನ್ನತ ಸ್ಥಾನದಲ್ಲಿ ನೋಡುವ ಅವಕಾಶವಿದೆ. ಈ ಕಾರ್ಯಕ್ಕೆ ಸಂಘ ಸಂಸ್ಥೆ ಸೇರಿದಂತೆ ನಾಗರಿಕ ಬಂಧುಗಳು ಸಹಕಾರ ನೀಡುವಂತೆ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್ ತಿಳಿಸಿದರು.
ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾ ಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಸ್ವಚ್ಚ ಸರ್ವೇಕ್ಷಣ ಗ್ರಾಮೀಣ-2018ರ ಸ್ವಚ್ಛತೆ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು ಆಗಸ್ಟ್ 1 ರಿಂದ 30 ರವರೆಗೆ ತಾಲೂಕಿನ ಎಲ್ಲ ಭಾಗದಲ್ಲೂ ಸ್ವಚ್ಛತೆಯ ಬಗ್ಗೆ ಕೇಂದ್ರ ತಂಡವು ಪ್ರತಿ ಪಂಚಾಯಿತಿಗೆ ಖುದ್ದು ಭೇಟಿ ನೀಡುವದರಿಂದ ಪಂಚಾಯಿತಿ ವ್ಯಾಪ್ತಿಯ ಶುಚಿತ್ವದ ಬಗ್ಗೆ ಮಾಹಿತಿ ಕಲೆಹಾಕಲಿದೆ. ಅಂಗನವಾಡಿ, ಶಾಲೆ, ಪಂಚಾಯಿತಿ, ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವದ ಬಗ್ಗೆ ವಿವರ ಪಡೆಯಲಿದೆ. ಆದ್ದರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಚಿತ್ವದ ಬಗ್ಗೆ ನಾಗರಿಕರು ಸೇರಿದಂತೆ ಎಲ್ಲರು ಒಟ್ಟಾಗಿ ಗಮನ ಹರಿಸಿದ್ದಲ್ಲಿ ದೇಶದಲ್ಲೇ ನಮ್ಮ ಪಂಚಾಯಿತಿ ಶುಚಿತ್ವದ ವಿಷಯದಲ್ಲಿ ಗಮನ ಸೆಳೆಯುವ ಮೂಲಕ ಬಹುಮಾನ ಪಡೆಯುವ ಅವಕಾಶವಿದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯರಾದ ಮೂಕಳೇರ ಆಶಾ ಪೂಣಚ್ಚ ಮಾತನಾಡಿ ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಬಗ್ಗೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ. ಶಾಲಾ ಮಕ್ಕಳ ಮೂಲಕ ಇನ್ನಷ್ಟು ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದರು.
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಪ್ರೊ. ಕುಶಾಲಪ್ಪ ಮಾತನಾಡಿ, ಸ್ವಚ್ಛತೆ ಕಾರ್ಯದಲ್ಲಿ ಮನೆ ಮನೆಗಳಿಗೆ ತೆರಳಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಎಲ್ಲ ಸಂದರ್ಭಗಳಲ್ಲಿಯೂ ಲಭ್ಯವಿದ್ದಾರೆ. ನಮ್ಮ ಸಹಕಾರ ಪಡೆಯಬಹುದೆಂದು ತಿಳಿಸಿದರು.
ಸ್ವಚ್ಛ ಭಾರತ ಅಭಿಯಾನದ ಸಂಚಾಲಕ ಅಜ್ಜಿಕುಟ್ಟಿರ ಸೂರಜ್ ಪ್ರಾಸ್ತಾವಿಕ ನುಡಿಯಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ ಸುರೇಶ್, ಸದಸ್ಯರಾದ ಮೂಕಳೇರ ಕಾವೇರಮ್ಮ, ಎಂ.ಪಿ. ಲಕ್ಷ್ಮಣ, ರೂಪ ಸಿ., ಜಯಲಕ್ಷ್ಮಿ, ರಶೀದ್ ಸೇರಿದಂತೆ ರಾಮಕೃಷ್ಣ ಸರಕು ಸಾಗಾಣಿಕೆ ವಾಹನ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಚೊಟ್ಟೆಕಾಳಪಂಡ ಮನುಕುಮಾರ್, ಆಟೋಚಾಲಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪ್ರಾಥಮಿಕ ಪ್ರೌಢಶಾಲೆಯ ಮುಖ್ಯೋಪಾ ಧ್ಯಾಯರು, ಅಂಗನವಾಡಿ ಶಿಕ್ಷಕರು, ಆಶಾ ಕಾರ್ಯಕರ್ತರು, ವಿವಿಧ ಇಲಾಖೆಯ ಅಧಿಕಾರಿಗಳು ಸಂಘ ಸಂಸ್ಥೆಯ ಪ್ರಮುಖರು ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳಾದ ಪಿ.ಪಿ. ಗಣಪತಿ ಚಂದ್ರಶೇಖರ್, ಜಮುನ ಯೋಗೇಶ್, ಸುರೇಶ್ ಎಂ.ಸಿ. ಮುಂತಾದವರು ಹಾಜರಿದ್ದರು. ಪಂಚಾ ಯಿತಿ ಅಭಿವೃದ್ದಿ ಅಧಿಕಾರಿಗಳಾದ ಸುರೇಶ್‍ರವರು ಸ್ವಾಗತಿಸಿ ವಂದಿಸಿದರು.