ಸುಂಟಿಕೊಪ್ಪ, ಆ. 3: ಇಲ್ಲಿಗೆ ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯೆ ಕುಮುದಾ ದರ್ಮಪ್ಪ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿರಂತರ ಮಳೆಯಿಂದ ರಸ್ತೆಗಳು ಮತ್ತು ತಡೆಗೋಡೆಗಳು ಮನೆಗಳು ಸಂಪೂರ್ಣ ಹಾಳಾಗಿದ್ದು ಅಲ್ಲಿನ ನಿವಾಸಿಗಳಿಂದ ವಿವರಣೆ ಪಡೆದು ಅಧಿಕಾರಿಗಳಿಗೆ ಕ್ರಮ ಕೈ ಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಈಗಾಗಲೆ ಮುಖ್ಯ ಮಂತ್ರಿಗಳಿಗೆ ಮತ್ತು ಲೋಕೋಪಯೋಗಿ ಸಚಿವರಲ್ಲಿ ಮನವಿ ಸಲ್ಲಿಸಿರುವದಾಗಿ ಹೇಳಿದರು. ಅಲ್ಲದೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಸರಿ ಪಡಿಸುವದಾಗಿ ಭರವಸೆ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಇಬ್ರಾಹಿಂ ಸೀದಿ,ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪರಮೇಶ್, ಗ್ರಾಮಸ್ಥರಾದ ಧಾದು, ನಾಸೀರ್ ಸೀದಿ, ವಿನೋದ್, ಪಿಕಾಪ್, ಧರ್ಮ, ಪಾಪಣ್ಣ ಇತರÀರು ಹಾಜರಿದ್ದರು.