ಪೊನ್ನಂಪೇಟೆ, ಆ. 3: ಸಾಯಿಶಂಕರ ವಿದ್ಯಾಲಯ, ಪ್ರಶಾಂತಿ ನಿಲಯ ಪೊನ್ನಂಪೇಟೆ ಇಲ್ಲಿನ ಶಾಲಾವಠಾರದ ನಾಟಿ ಬಯಲಿನಲ್ಲಿ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕಿನ ಕೃಷಿ ಅಧಿಕಾರಿಗಳಾದ ರೀನಾ ಪ್ರಗತಿಪರ ಕೃಷಿಕ ಸೋಮೆಯಂಡ ಗಣೇಶ್ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಶಾಲೆಯ ಹಿತಚಿಂತಕರಾದ ಅರುಮಣಮಾಡ ಸತೀಶ್ ರವರು, ಕೊಡವ ಸಾಹಿತ್ಯ ಅಕಾಡೆಮಿಯ ನಿರ್ದೇಶಕರುಗಳಾದ ಅಜ್ಜಮಾಡ ಕುಶಾಲಪ್ಪ ಸಣ್ಣುವಂಡ ಕಿಶೋರ್ ನಾಚಪ್ಪರವರು, ಸಂಸ್ಥೆಯ ಅಧ್ಯಕ್ಷರಾದ ಝರು ಗಣಪತಿ ಸಂಸ್ಥೆಯ ನಿರ್ದೇಶಕರಾದ ಗ್ರೀಟಾ ಅಪ್ಪಣ್ಣರವರು, ಕಾಲೇಜು ವಿಭಾಗದ ಪ್ರಾಂಶುಪಾಲರಾದ ದಶಮಿ ಹಾಗೂ ಮುಖ್ಯೋಪಧ್ಯಾಯರಾದ ಲತಾ ಚಂಗಪ್ಪ ಉಪಸ್ಥಿತರಿದ್ದರು.
ಈ ಸಂಸ್ಥೆಯ ನಾಟಿ ಬಯಲಿನಲ್ಲಿ ಸೋಮೆಯಂಡ ಸತೀಶ್ ಅವರು ಯಂತ್ರದ ಸಹಾಯದಿಂದ ವಿದ್ಯಾರ್ಥಿಗಳ ಜೊತೆ ಭತ್ತದ ಪೈರಿನ ನಾಟಿ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ಯಾಂತ್ರೀಕೃತ ಕೃಷಿಯ ಬಗ್ಗೆ ಪರಿಚಯಿಸಿದರು. ಅಲ್ಲದೆ ಸಂಸ್ಥೆಯ ನಿರ್ದೇಶಕರಾದ ಗ್ರೀಟಾ ಅಪ್ಪಣ್ಣ, ಕಾಲೇಜು ವಿಭಾಗದ ಪ್ರಾಂಶುಪಾಲರಾದ ದಶಮಿ, ಶಾಲಾ ವಿಭಾಗದ ದೈಹಿಕ ಶಿಕ್ಷಕ ಪ್ರಕಾಶ್ ಸೇರಿದಂತೆ ವಿದ್ಯಾರ್ಥಿಗಳು ಖುದ್ದಾಗಿ ನಾಟಿ ಬಯಲಿಗೆ ಇಳಿದು ಹುರುಪಿನಿಂದ ನಾಟಿ ಕಾರ್ಯದಲ್ಲಿ ತೊಡಗಿದರು ಹಾಗೂ ಅಳಿವಿನಂಚಿನಲ್ಲಿರುವ ಕೃಷಿ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳ ಮೂಲಕ ಪೋಷಕರಿಗೂ ಜಾಗೃತಿ ಮೂಡಿಸಿದರು, ಗದ್ದೆ ಉಳುಮೆಯಿಂದ ಅಂತರ್ಜಲ ವೃದ್ದಿಯಾಗಿ ನೀರಿನ ಅಭಾವ ನೀಗಿಸಬಹುದೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳು ಕೃಷಿಯಲ್ಲಿಯೂ ಕಾಳಜಿ ವಹಿಸುವಂತೆ ಅತಿಥಿಗಳು ತಿಳಿಹೇಳಿದರು. ಶಾಲಾ ವಿಭಾಗದ ಶಿಕ್ಷಕಿ ನೀತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.