ಮಡಿಕೇರಿ, ಆ. 3: ಕೊಡಗಿನ ವಿಶಿಷ್ಟತೆಗಳಲ್ಲಿ ಒಂದಾಗಿರುವ ಮಳೆಗಾಲದ ನಡುವೆ ಬರುವ ಕಕ್ಕಡ ತಿಂಗಳು (ಆಟಿ) ಹದಿನೆಂಟರಂದು ಆಚರಿಸಲ್ಪಡುವ ಕಕ್ಕಡ 18 ವಿಶಿಷ್ಟ ಕಾರ್ಯಕ್ರಮ ಇಂದು ಜಿಲ್ಲೆಯಲ್ಲಿ ಆಚರಿಸಲ್ಪಟ್ಟಿತು. ಈ ದಿನ ವಿಶೇಷತೆ ಯಾದ ಮದ್ದ್ ಪಾಯಸ - ಮದ್ದ್ ಪುಟ್ಟ್ ಕಕ್ಕಡ ಕೋಳಿಯ ಸವಿಯೊಂದಿಗೆ ಮನೆ ಮನೆಗಳಲ್ಲಿ ಈ ವಿಶಿಷ್ಟ ಖಾದ್ಯದೊಂದಿಗೆ ಹಬ್ಬ ಆಚರಿಸಲ್ಪಟ್ಟರೆ, ಇನ್ನು ಹಲವೆಡೆ ಸಾರ್ವತ್ರಿಕವಾಗಿ ಇದನ್ನು ಆಚರಿಸ ಲಾಗಿದೆ. ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಮಳೆ - ಗಾಳಿ-ಚಳಿಯ ನಡುವೆ ಕೃಷಿ ಚಟುವಟಿಕೆಯೊಂದಿಗೆ ಈ ವಿಶೇಷತೆ ಯನ್ನು ಪುರಾತನ ಕಾಲದಿಂದಲೂ ಆಚರಿಸಲಾಗುತ್ತಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ಹೆಚ್ಚು ಸದ್ದು - ಗದ್ದಲದ ಸಂಭ್ರಮವಿಲ್ಲದೆ ಕೇವಲ ಮನೆಮನೆಗಳಲ್ಲಿ ಮಾತ್ರ ಜನರು ತಮ್ಮಷ್ಟಕ್ಕೆ ಇದನ್ನು ಪಾಲಿಸಿಕೊಂಡು ಬರುತ್ತಿದ್ದರು.

(ಮೊದಲ ಪುಟದಿಂದ) ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಈ ಕಕ್ಕಡ 18 ಸಂಭ್ರಮಕ್ಕೆ ಹೊಸ ಸ್ವರೂಪ ಕಂಡು ಬರುತ್ತಿದ್ದು, ಸಭೆ - ಸಮಾರಂಭಗಳು, ಗದ್ದೆ ಉಳುಮೆ, ನೆಡುವದು, ಪಂಜಿನ ಮೆರವಣಿಗೆ, ಸಂಗೀತ ರಸ ಸಂಜೆಯಂತಹ ವೈವಿಧ್ಯತೆಯ ಕಾರ್ಯಕ್ರಮಗಳು ಆಚರಿಸಲ್ಪಡುತ್ತಿವೆ.

ಅಲ್ಲದೆ ಈ ಹಿಂದಿನ ಕಾಲದಲ್ಲಿ ಈ ಮಾಸದಲ್ಲಿನ ತೀವ್ರ ಮಳೆ - ಚಳಿಯ ನಡುವೆ ಮೈ ಬಿಸಿಮಾಡಿ ಕೊಳ್ಳುವಂತಹ ಜಿಲ್ಲೆಯಲ್ಲಿ ದೊರೆಯುವ ವಿವಿಧ ಬಗೆಯ ಸ್ವಾದಿಷ್ಟ ಪದಾರ್ಥಗಳಿಂದ ತಯಾರಿಸಲ್ಪಡುವ ವಿಶೇಷ. ಖಾದ್ಯಗಳನ್ನು ಪರಿಚಯಿಸುವ ಪ್ರಯತ್ನವೂ ಆರಂಭವಾಗಿರುವದು ವಿಶೇಷವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ದಿನದ ವಿಶೇಷತೆ ಎಂದರೆ 18 ಬಗೆಯ ಔಷಧಿಯನ್ನು ಒಳಗೊಂಡಂತೆ ಕೊಡಗಿನಲ್ಲಿ ಸಿಗುವ ಸೊಪ್ಪಿನಿಂದ ತಯಾರಿಸಲ್ಪಡುವ ಮದ್ದುಪಾಯಸ - ಮದ್ದು ಪುಟ್ಟು ಹಾಗೂ ನಾಟಿಕೋಳಿಯ ಸ್ವಾದಿಷ್ಟತೆ ಎಂಬದು ಗಮನಾರ್ಹ. ಈ ಮದ್ದು ಸೊಪ್ಪಿಗೆ ವೈಜ್ಞಾನಿಕವಾಗಿ ಎusಣiಛಿiಚಿ Wಥಿಟಿಚಿಚಿಜeಟಿsis ಎಂದೂ ಹೇಳಲಾಗುತ್ತದೆ.

ಆಗಸ್ಟ್ 3ರ ಈ ದಿನದಂದು ಕಕ್ಕಡ ಪದಿನೆಟ್ಟ್ ಹಲವೆಡೆಗಳಲ್ಲಿ ಸಾರ್ವತ್ರಿಕವಾಗಿಯೂ ಆಚರಿಸಲ್ಪಟ್ಟಿವೆ. ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ವೀರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ವಿವಿಧ ಸ್ಪರ್ಧೆ ಹಾಗೂ ತಿಂಡಿ ತಿನಿಸುಗಳ ಸ್ಪರ್ಧೆಯೊಂದಿಗೆ ಈ ಕಾರ್ಯಕ್ರಮ ನಡೆದರೆ, ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯಿಂದ ಮಡಿಕೇರಿಯ ಹೊರವಲಯದಲ್ಲಿ ಬರುವ ಕ್ಯಾಪಿಟಲ್ ವಿಲೇಜ್‍ನಲ್ಲಿ ಗದ್ದೆಯಲ್ಲಿ ನಾಟಿ ಮಾಡುವದು, ಈ ಹಿಂದಿನ ಗತವೈಭವ ನೆನಪಿಸುವ ಜನಪದ ಹಾಡು ಸೇರಿದಂತೆ ವಿಶೇಷ ಖಾದ್ಯಗಳೊಂದಿಗೆ ಸಂಭ್ರಮಾಚರಣೆ ನಡೆಯಿತು.

ಪೊನ್ನಂಪೇಟೆಯಲ್ಲಿ ಅಲ್ಲಿನ ಕಿಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದ ವತಿಯಿಂದ ಒಡ್ಡೋಲಗ ಸಹಿತವಾಗಿ ಪೊನ್ನಂಪೇಟೆ ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ, ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಕೊಡವ ಆರ್ಕೆಸ್ಟ್ರಾ ಹಾಗೂ ಈ ದಿನದ ವಿಶೇಷ ಊಟೋಪಚಾರದೊಂದಿಗೆ ಸಾರ್ವತ್ರಿಕವಾಗಿ ಕಕ್ಕಡ 18 ಕಾರ್ಯಕ್ರಮ ಆಚರಿಸಲ್ಪಟ್ಟಿತು.

ಅಖಿಲ ಕೊಡವ ಸಮಾಜದಲ್ಲಿ

(ವೀರಾಜಪೇಟೆ ವರದಿ) ನಮ್ಮ ಅಂದಿನ ಕಾಲದಲ್ಲಿ ಕೊಡಗಿನ ಜನಜೀವನ ಶೈಲಿ, ಬಾಂಧವ್ಯ ಆಚರಣೆ, ಪದ್ಧತಿ ಪರಂಪರೆ ವಿಶಿಷ್ಟವಾಗಿದ್ದು ಸ್ವರ್ಣ ಯುಗವಾಗಿತ್ತು, ಆದರೆ ಇಂದು ನಾವು ಅದನ್ನೆಲ್ಲಾ ಕಳೆದುಕೊಂಡು ಬಂದಿದ್ದು ಯಾವ ಯುಗದಲ್ಲಿ ನಿಂತಿದ್ದೇವೆ ಎಂದು ಚಿಂತಿಸಬೇಕಾಗಿದೆ ಎಂದು ವೀರಾಜಪೇಟೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹೇಳಿದರು.

ವೀರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ವತಿಯಿಂದ ಆಯೋಜಿಸಿದ್ದ “ಕಕ್ಕಡ ಪದಿನೆಟ್” ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮೊಣ್ಣಪ್ಪ

ಅವರು ಅಂದಿನ ಕಾಲದಲ್ಲಿ ಕಾಫಿ ತೋಟ ಇರಲಿಲ್ಲ, ಭತ್ತದ ಗದ್ದೆ ಜೀವನ ಆಧಾರವಾಗಿತ್ತು, ಗುಂಪು ಮನೆ, ಅವಿಭಕ್ತ ಕುಟುಂಬ ಇತ್ತು. ಎಲ್ಲರೂ ದುಡಿದು ವ್ಯವಸಾಯ ಮಾಡಿ ಬದುÀÀಕುನಡೆಸುತ್ತಿದ್ದರು. ಒಟ್ಟಾರೆ ನಮ್ಮದು ವ್ಯವಸಾಯ ಆಧಾರಿತ ಜನಾಂಗವಾಗಿತ್ತು. ಆದರೆ ಇಂದು ವ್ಯಾಪಕವಾಗಿ ಹಳ್ಳಿಯಿಂದ ನಗರಕ್ಕೆ ಬಂದು ನೆಲೆಸುತ್ತಿದ್ದು ನಾಡಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಆದ್ದರಿಂದಲೇ ಇಂದು ನಾವು ಈ ರೀತಿಯ ಸಮಾರಂಭ ಆಚರಿಸಲು ಕಾರಣ. ಅಂದು ಈ ಆಚರಣೆ ಎಲ್ಲಾ ಕಡೆ ಸಾಮಾನ್ಯವಾಗಿರುತ್ತಿದ್ದರಿಂದ ಇಂದಿನಂತೆ ಬಹಿರಂಗ ಆಚರಣೆ ಇರಲಿಲ್ಲ. ಆದರೆ ಇಂದು ಈ ಆಚರಣೆಯ ಮೂಲಕ ಯುವ ಜನಾಂಗಕ್ಕೆ ತಿಳುವಳಿಕೆ ನೀಡುವ ಆಗತ್ಯ ಇದೆ. ಆದರೆ ಎಷ್ಟು ಜನ ಯುವ ಜನತೆ ಇದರಲ್ಲಿ ಭಾಗವಹಿಸುತ್ತಾರೆ, ಎಷ್ಟು ಜನ ಇದರ ಬಗ್ಗೆ ಅರಿತು ಕೊಳ್ಳುತ್ತಾರೆ ಎಂಬದು ಗೊತ್ತಿಲ್ಲ. ಈ ಆಚರಣೆ ಕ್ರಮೇಣ ಕಾಣೆಯಾಗುವ ಆತಂಕ ನಮ್ಮಲ್ಲಿ ಇಂದು ಕಾಡುವ ಪ್ರಶ್ನೆಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪೊಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆ ರಾಣು ಮಂದಣ್ಣ ಮಾತನಾಡಿ, ಹಿಂದಿನ ಕಾಲದ ಕಕ್ಕಡ ಆಚರಣೆಯ ಪರಿಕಲ್ಪನೆ ಮಾಡಿಕೊಂಡರೆ, ಆಗಿನ ಆಚರಣೆಗೂ ಹಿಂದಿನ ಆಚರಣೆಗೂ ವ್ಯತ್ಯಾಸವನ್ನು ಕಾಣಬಹುದಾಗಿದೆ. ಆ ಕಾಲದಲ್ಲಿ ಈ ಸಂದರ್ಭದಲ್ಲಿ ರೋಗ ರುಜಿನಗಳು , ನಷ್ಟ ಕಷ್ಟಗಳು ಹೆಚ್ಚಾಗಿತ್ತು. ಭಾರೀ ಮಳೆಯ ಕಾರಣ ಸಂಪರ್ಕ ಕಡಿದು ಹೋಗುತ್ತಿತ್ತು. ಆಗ ಆಸ್ವತ್ರೆಗಳು ಮರಿಚೀಕೆÉಯಾಗಿದ್ದು ನಾಟಿ ಔಷಧಗಳಿಗೆ ಮೊರೆ ಹೋಗುತ್ತಿದ್ದರು. ಆಗ ಮಳೆಗಾಲಕ್ಕೆ ಪೂರಕವಾದ ಧವಸ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಬಳಸುತ್ತಿದ್ದರು. ಕಕ್ಕಡದಲ್ಲಿ ಏಡಿ, ಅಣಬೆ, ಬಿದಿರಿನ ಕಳಿಲೆ, ಇತ್ಯಾದಿಗಳು ಆಹಾರದ ರುಚಿ ಹೆಚ್ಚಿಸುತ್ತಿದ್ದವು. ಆ ನಡುವೆ ವಿಶೇಷವಾದ ಕಕ್ಕಡ ಪದಿನೆಟ್ ಆಚರಿಸಲಾಗುತ್ತಿತ್ತು, ವಿಶಿಷ್ಟ ಔಷಧಿಯ ಗುಣ ಉಳ್ಳ ಸೊಪ್ಪಿನ ರಸದ ಮದ್ದು ಸೊಪ್ಪು ಬಳಸುತ್ತಿದ್ದರು. ಕಾಲದ ಬದಲಾವಣೆಯಾದಂತೆ ಇಂದು ಜಂಕ್ ಫುಡ್‍ಗಳಿಗೆ ಮಾರು ಹೋಗಿದ್ದು, ಹಿಂದಿನ ಉತ್ತಮ ಆಹಾರ ಪದ್ಧತಿಯನ್ನು ಕಾಣಲು ಸಾಧ್ಯವಾಗದೆ ಹೋಗಿದೆ ಎಂದರು.

ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ ದಿನದ ಮಹತ್ವ ವಿವರಿಸಿದರು. . ಸಮಾರಂಭದಲ್ಲಿ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ, ಸಮಾಜದ ಕಾರ್ಯದರ್ಶಿ ಅಮ್ಮುಣಿಚಂಡ ರಾಜಾನಂಜಪ್ಪ , ಖಜಾಂಚಿ ಮಂಡೇಪಂಡ ಸುಗುಣ, ಜಂಟಿ ಕಾರ್ಯದರ್ಶಿ ನಂದೇಟಿರ ರಾಜ ಮಾದಪ್ಪ , ತೀತಿರ ಊರ್ಮಿಳಾ ಮತ್ತಿತರರು ಉಪಸ್ಥಿತರಿದ್ದರು.

ನಂತರ ನಡೆದ ಅಪ್ಪಚ್ಚ ಕವಿಯ ಕಾವೇರಿ ನಾಟಕದ ಆಯ್ದ ಭಾಗದ ವಾಚನ ಸ್ವರ್ಧೆಯಲ್ಲಿ, ಅಡ್ಡಂಡ ಅನಿತಾ ಕಾರ್ಯಪ್ಪ ಪ್ರಥಮ, ಚಿಯಕಪೂವಂಡ ಚಿತ್ರಾ ದ್ವಿತೀಯ ಮತ್ತು ನೆಲ್ಲಮಕ್ಕಡ ಶಾರದ ತೃತೀಯ ಸ್ಥಾನ ಪಡೆದರು. ಸಮಾಜದ ಜಂಟಿ ಕಾರ್ಯದರ್ಶಿ ನಂದೇಟಿರ ರಾಜ ಮಾದಪ್ಪ ಪ್ರಯೋಜಿತ ಕೊಡವ ಪುಟ್ಟ್‍ಗಳ ಹೆಸರು ಹೇಳಿದ ಮಂಡೇಪಂಡ ಸವಿತಾ ಹಾಗೂ ಹೆಚ್ಚು ಕೊಡವ ತಿಂಡಿ ತಿನಿಸುಗಳ ಹೆಸರು ಹೇಳಿದ ಸ್ಪರ್ಧೆಯಲ್ಲಿ ಅಪ್ಪು ಮಣಿಯಂಡ ಡೈಸಿ ಪ್ರಥಮ ಸ್ಥಾನ ಪಡೆದರು. ಈ ಸಂದರ್ಭ ಕೊಡವ ತಿನಿಸುಗಳಾದ ಪಾಪುಟ್ಟ್, ಕೋಳಿಕರಿ, ಕಡಂಬುಟ್ ಪಂದಿಕರಿ, ತೆಂಗೆ ಪಜ್ಜಿ, ಕನಿಲೆ ಸಾರು, ಮಾವಿನ ಹಣ್ಣಿನ ಸಾರು, ಮದ್ದು ಪಾಯಸ ಮತ್ತು ಮದ್ದ್ ಪುಟ್ಟ್ ಇತ್ಯಾದಿ ತಿನಿಸುಗಳನ್ನು ಸವಿಯಲು ವ್ಯವಸ್ಥೆಗೊಳಿಸಲಾಗಿತ್ತು.

ಸಿಎನ್‍ಸಿಯಿಂದ ನಾಟಿ ಮೂಲಕ ಆಚರಣೆ

ಕೊಡವ ಕುಲದ ಸಾಂಪ್ರದಾಯಿಕ ಪರಂಪರೆಯ ಪ್ರತೀಕವಾಗಿರುವ ಕಕ್ಕಡ ಪದ್‍ನೆಟ್ಟ್ ನಮ್ಮೆಯನ್ನು ಸಿ.ಎನ್.ಸಿ ಯು 23ನೇ ವರ್ಷದ ಸಾರ್ವತ್ರಿಕ “ಕಕ್ಕಡ ಪದ್‍ನೆಟ್ಟ್” ಅನ್ನು ಕ್ಯಾಪಿಟಲ್ ವಿಲೇಜಿನಲ್ಲಿ ಆಚರಿಸಿತು. ಈ ಹಿನ್ನಲೆಯಲ್ಲಿ ಸಿ.ಎನ್.ಸಿ ಸಂಘಟನೆ ಭತ್ತದ ಗದ್ದೆಯಲ್ಲಿ ನಾಟಿಯನ್ನು ನೆಡುವದರ ಮೂಲಕ ಉದ್ಘಾಟಿಸಿ ನಂತರ ಮದ್ದ್ ಪುಟ್ಟ್ ಮತ್ತು ಮದ್ದ್ ಪಾಯಸ ಹಾಗೂ ನಾಡು ಕೋಳಿಯ ಭಕ್ಷ್ಯವನ್ನು ಪ್ರಸಾದದಂತೆ ಎಲ್ಲರೂ ಸೇರಿ ಸ್ವೀಕರಿಸಿದರು.

ಕಕ್ಕಡ ನಮ್ಮೆಯಲ್ಲಿ ಕೊಡಗಿಗೆ ಕೇಂದ್ರಾಡಳಿತ ಪ್ರದೇಶ, ಸಂವಿಧಾನದ 244 ರ/ವಿ 6 ಮತ್ತು 8ನೇ ಶೆಡ್ಯೂಲ್ ಪ್ರಕಾರ ಕೊಡವ ಲ್ಯಾಂಡ್ ಸ್ವಾಯತ್ತತೆ ಹಕ್ಕೊತ್ತಾಯ ಕೊಡವ ಸೂಕ್ಷ್ಮಾತಿ ಸೂಕ್ಷ್ಮಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲಕ್ಕೆ ಸಂವಿಧಾನದ 342ನೇ ವಿಧಿ ಪ್ರಕಾರ ರಾಜ್ಯಾಂಗ ಖಾತರಿ &amdiv; ಕೊಡವ ತಕ್ಕನ್ನು ಸಂವಿಧಾನದ 8 ನೇ ಶೆಡ್ಯೂಲ್‍ಗೆ ಸೇರಿಸಬೇಕೆನ್ನುವ ಹಕ್ಕೊತ್ತಾಯದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ರವಾನಿಸಲಾಯಿತು.

ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಶ್ರೀ ಚಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಅರೆಯಡ ಗಿರೀಶ್, ಕೊಂಗೇಟಿರ ಲೋಕೇಶ್, ಪುಲ್ಲೆರ ಕಾಳಪ್ಪ, ಸ್ವಾತಿ ಕಾಳಪ್ಪ, ಮಣವಟ್ಟಿರ ಜಗದೀಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಲಿಯಂಡ ಮೀನ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಪ್ಪಚ್ಚಿರ ರೀನ, ಅರಮಣಮಾಡ ರಂಜನ್, ಕುಲ್ಲೇಟಿರ ಬೇಬ ಅರುಣ, ಮಂದಪಂಡ ಮನೋಜ್, ಅಳಮಂಡ ಜೈ, ಪಟ್ಟಮಾಡ ಕುಶ, ಅಪ್ಪಾರಂಡ ಪ್ರಸಾದ್, ಮದ್ರಿರ ಕರುಂಬಯ್ಯ, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಐತೀಚಂಡ ಭೀಮಣಿ, ಜಮ್ಮಡ ಮೋಹನ್, ಪುಳ್ಳಂಗಡ ನಟೇಶ್, ಕಾಂಡೆರ ಸುರೇಶ್, ಪಾರ್ವಂಗಡ ನವೀನ್, ಅಪ್ಪೆಂಗಡ ಮಾಲೆ, ಕಿರಿಯಮಾಡ ಶರಿನ್, ಬೊಟ್ಟಂಗಡ ಸವಿತ, ಅರೆಯಡ ಸವಿತ, ಅಜ್ಜೆಟಿರ ರಾಣಿ, ಮಣವಟ್ಟಿರ ನಂದ, ಬಾಚಮಂಡ ಬೆಲ್ಲು, ಚಂಡಿರ ರಆಜ, ಐಲಪ್ಪಂಡ ಮಿಟ್ಟು ಮುಂತಾದವರು ಭಾಗವಹಿಸಿದ್ದರು.

ಆಟಿ ಆಚರಣೆ

ಮರಗೋಡು : ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾ ಯಿತು. ಶಾಲೆಯ ಎಲ್ಲಾ ಮಕ್ಕಳಿಗೂ ಆಟಿ ಪಾಯಸ ಉಣ ಬಡಿಸಲಾ ಯಿತು. ಎಲ್ಲಾ ವಿದ್ಯಾರ್ಥಿಗಳಿಗೂ ನೋಟ್ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು. ಅಕಾಡೆಮಿ ಅಧ್ಯಕ್ಷ ಕಟ್ಟೆಮನೆ ರಾಕೇಶ್, ಕಾರ್ಯದರ್ಶಿ ಇಟ್ಟಣಿಕೆ ನವನಿತ್, ಖಜಾಂಜಿ ಬಡುವಂಡ್ರ ದುಷ್ಯಂತ್, ಸದಸ್ಯರಾದ ಸುಜಯ್ ಬಡುವಂಡ್ರ, ಮಂದ್ರೀರ ಸಚಿತವ, ಶಾಲೆಯ ಶಿಕ್ಷಕ ವೃಂದದವರು ಸಂದರ್ಭ ಹಾಜರಿದ್ದರು.