ಮಡಿಕೇರಿ, ಆ. 2: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆ, ವೀರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿಗಳ ವಾರ್ಡುವಾರು ಮೀಸಲಾತಿ ನಿಗದಿಪಡಿಸಿ ಸರಕಾರ ಆದೇಶ ಹೊರಡಿಸಿದೆ.

ಮಡಿಕೇರಿಯ ವಾರ್ಡ್ ನಂ. 1ರ (ಬ್ಲಾಕ್ ನಂ. 14 ಮತ್ತು 9 ಭಾಗಶಃ ವಿದ್ಯಾನಗರ, ಗಾಳಿಬೀಡು ರಸ್ತೆ, ಐ.ಟಿ.ಐ. ಹಿಂಭಾಗ, ಭಗವತಿನಗರ ಭಾಗಶಃ) ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಮಡಿಕೇರಿ ವಾಡ್ ನಂ. 2ರ ಬ್ಲಾಕ್ ನಂ. 9 ಮತ್ತು 8 ಭಾಗಶಃ ಕಾವೇರಿ ಬಡಾವಣೆ, ಭಗವತಿ ನಗರ ಭಾಗಶಃ, ಕಾನ್ವೆಂಟ್ ರಸ್ತೆಯ ಮೀಸಲಾತಿಯನ್ನು ಹಿಂದುಳಿದ ವರ್ಗದ (ಎ) ಮಹಿಳೆಗೆ ಮೀಸಲಾಗಿದೆ.

ವಾರ್ಡ್ ನಂ. 3ರ ಬ್ಲಾಕ್ ನಂ. 24 ಭಾಗಶಃ ತ್ಯಾಗರಾಜ ಕಾಲೋನಿ, ಎ.ವಿ. ಶಾಲೆ ಹಿಂಭಾಗದ ಮೀಸಲಾತಿಯನ್ನು ಹಿಂದುಳಿದ ವರ್ಗ (ಬಿ) ಮಹಿಳೆ ಮೀಸಲಾಗಿದೆ.

ಮಡಿಕೇರಿಯ ವಾರ್ಡ್ ನಂ. 4ರ ಬ್ಲಾಕ್ ಸಂಖ್ಯೆ 24ರ ಭಾಗಶಃ ಅಜಾದ್‍ನಗರ, ಉಕ್ಕುಡ, ರಾಜರಾಜೇಶ್ವರಿ ನಗರ, ಸೋಮವಾರಪೇಟೆ ರಸ್ತೆಯ ಮೀಸಲಾತಿಯನ್ನು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಮಡಿಕೇರಿಯ ವಾರ್ಡ್ ಸಂಖ್ಯೆ 5ರ ಬ್ಲಾಕ್ ಸಂಖ್ಯೆ 22, 21 ಹಾಗೂ ಭಾಗಶಃ 23, ದೇವಸ್ಥಾನ ರಸ್ತೆ, ದೇಚೂರು ಬಾಣೆ ಮೊಟ್ಟೆ, ಚೈನ್ ಗೇಟ್ ರಸ್ತೆ ಯ ಮೀಸಲಾತಿಯು ಹಿಂದುಳಿದ ವರ್ಗ (ಎ)ಗೆ ಮೀಸಲಾಗಿದೆ.

ಮಡಿಕೇರಿಯ ವಾರ್ಡ್ ಸಂಖ್ಯೆ 6ರ ಬ್ಲಾಕ್ ನಂ. 23 ಭಾಗಶಃ ಕನ್ನಂಡಬಾಣೆ, ಚೈನ್‍ಗೇಟ್, ಸಂಪಿಗೆಕಟ್ಟೆ ರಸ್ತೆಯ ಮೀಸಲಾತಿಯು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಮಡಿಕೇರಿಯ ವಾರ್ಡ್ ಸಂಖ್ಯೆ 7ರ ಬ್ಲಾಕ್ ನಂ. 2, ಗಣಪತಿ ಬೀದಿ, ಮಹದೇವಪೇಟೆಯ ಮೀಸಲಾತಿ ಸಾಮಾನ್ಯ ಮೀಸಲಾಗಿದೆ.

ವಾರ್ಡ್ ನಂ. 8ರ ಬ್ಲಾಕ್ ನಂ. 1 8 ಭಾಗಶಃ ಮಹದೇವಪೇಟೆ ಮುಖ್ಯ ರಸ್ತೆ, ಮಲ್ಲಿಕಾರ್ಜುನನಗರ, ಮುತ್ತಪ್ಪ ದೇವಸ್ಥಾನ ರಸ್ತೆಯು ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿದೆ.

ಮಡಿಕೇರಿ ವಾರ್ಡ್ ಸಂಖ್ಯೆ 9ರ ಭಾಗಶಃ ಅಂಬೇಡ್ಕರ್ ಬಡಾವಣೆ, ರಾಣಿಪೇಟೆಯು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.

ವಾರ್ಡ್ ನಂ. 10ರ ಬ್ಲಾಕ್ ನಂ. 7, 4 ಭಾಗಶಃ ಹಿಲ್ ರಸ್ತೆ, ಕನಕದಾಸ ರಸ್ತೆ, ರಾಣಿಪೇಟೆ ರಸ್ತೆ, ಪ್ರಕೃತಿ ಬಡಾವಣೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ವಾರ್ಡ್ ನಂ. 11ರ ಬ್ಲಾಕ್ ನಂ. 5, 4 ಭಾಗಶಃ ಗಣಪತಿಬೀದಿ, ಮಹದೇವಪೇಟೆಯು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ವಾರ್ಡ್ ನಂ. 12ರಲ್ಲಿ ಬ್ಲಾಕ್ ನಂ. 6 ಗಣಪತಿಬೀದಿ, ದಾಸವಾಳದಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ವಾರ್ಡ್ ಸಂಖ್ಯೆ 13ರ ಬ್ಲಾಕ್ ನಂ. 18 ಪುಟಾಣಿ ನಗರವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ವಾರ್ಡ್ ಸಂಖ್ಯೆ 14ರ ಬ್ಲಾಕ್ ನಂ. 17, 18 ಭಾಗಶಃ ಗುಂಡೂರಾವ್ ಬಡಾವಣೆ, ಜಯನಗರ, ಜಿ.ಟಿ. ರಸ್ತೆಗಳು ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿದೆ.

ವಾರ್ಡ್ ನಂ. 15ರ ಬ್ಲಾಕ್ ನಂ. 13 ಮತ್ತು 20 ಭಾಗಶಃ ರೇಸ್ ಕೋರ್ಸ್ ರಸ್ತೆ, ಗೌಳಿಬೀಡು ಭಾಗಶಃ ದೇಚೂರು, ಬ್ರಾಹ್ಮಣರ ಬೀದಿಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ವಾರ್ಡ್ ನಂ. 16ರ ಬ್ಲಾಕ್ ನಂ. 11, ಗೌಳಿಬೀದಿ ರಸ್ತೆ, ಕೊಹಿನೂರು ರಸ್ತೆ, ಸಿ.ಪಿ.ಸಿ. ಲೇಔಟ್, ಸರಕಾರಿ ಮತ್ತು ಖಾಸಗಿ ಬಸ್ ನಿಲ್ದಾಣಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ವಾರ್ಡ್ ನಂ. 17ರ ಬ್ಲಾಕ್ ನಂ. 9 ಕಾಲೇಜು ರಸ್ತೆ, ಕೂರ್ಗ್ ಇಂಟರ್ ನ್ಯಾಷನಲ್ ಹೊಟೇಲ್ ಹತ್ತಿರ, ಕಾನ್ವೆಂಟ್ ರಸ್ತೆಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ವಾರ್ಡ್ ನಂ. 18ರ ಬ್ಲಾಕ್ ನಂ. 14 ಭಾಗಶಃ ಹೊಸಬಡಾವಣೆ, ರೇಸ್ ಕೋರ್ಸ್ ರಸ್ತೆಗಳು ಹಿಂದುಳಿದ ವರ್ಗ (ಎ)ಗೆ ಮೀಸಲಾಗಿದೆ.

ವಾರ್ಡ್ ನಂ. 19ರ ಬ್ಲಾಕ್ ನಂ. 14 ಭಾಗಶಃ ಡೈರಿ ಫಾರಂ, ಸುಬ್ರಮಣ್ಯ ನಗರ, ಡಿ.ಆರ್. ಕ್ವಾಟ್ರಸ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ವಾರ್ಡ್ ಸಂಖ್ಯೆ 20ರ ಬ್ಲಾಕ್ ನಂ. 14 ಭಾಗಶಃ ಸ್ಟೀವರ್ಟ್ ಹಿಲ್, ಜ್ಯೋತಿ ನಗರ, ವೆಂಕಟರಮಣ ಲೇಔಟ್, ಚಾಮುಂಡೇಶ್ವರಿ ನಗರ ಭಾಗಶಃಗಳು ಹಿಂದುಳಿದ ವರ್ಗ (ಎ)ಗೆ ಮೀಸಲಾಗಿದೆ.

ವಾರ್ಡ್ ನಂ. 21ರ ಬ್ಲಾಕ್ ನಂ. 14 ಭಾಗಶಃ ಇಂದಿರಾನಗರ, ಚಾಮುಂಡೇಶ್ವರಿನಗರ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ವಾರ್ಡ್ ನಂ. 22ರ 16 ಮತ್ತು 14 ಭಾಗಶಃ ಮಂಗಳಾದೇವಿನಗರ, ಮೂರ್ನಾಡು ರಸ್ತೆ, ಮಂಗಳೂರು ರಸ್ತೆ, ಇಂದಿರಾ ನಗರ ಭಾಗಶಃ ಹಿಂದುಳಿದ ವರ್ಗ (ಬಿ)ಗೆ ಮೀಸಲಾಗಿದೆ.

ವಾರ್ಡ್ ಸಂಖ್ಯೆ 23ರ ಬ್ಲಾಕ್ ನಂ. 19, 18, 16 ಭಾಗಶಃ ಅಶೋಕಪುರ, ಡಿ.ಸಿ. ಬಂಗ್ಲೆ, ಬಿ.ಡಿ.ಓ. ಕಚೇರಿ ಆವರಣಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

ಸೋಮವಾರಪೇಟೆ: ವಾರ್ಡ್ ಸಂಖ್ಯೆ 1 (ಬಸವೇಶ್ವರ ರಸ್ತೆ) ಹಿಂದುಳಿದ ವರ್ಗ (ಬಿ), ವಾರ್ಡ್ ಸಂಖ್ಯೆ 2 (ಬಾಣವಾರ ರಸ್ತೆ) ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 3 ವೆಂಕಟೇಶ್ವರ ಬ್ಲಾಕ್ ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 4 ರೇಂಜರ್ ಬ್ಲಾಕ್ 1ನೇ ಹಂತ ಸಾಮಾನ್ಯ, ವಾರ್ಡ್ ಸಂಖ್ಯೆ 5 ದೇವಸ್ಥಾನ ರಸ್ತೆ ಸಾಮಾನ್ಯ, ವಾರ್ಡ್ ಸಂಖ್ಯೆ 6 ವಿಶ್ವೇಶ್ವರಯ್ಯ ಬ್ಲಾಕ್ ಸಾಮಾನ್ಯ ಮಹಿಳೆ.

ವಾರ್ಡ್ ಸಂಖ್ಯೆ 7 ರೇಂಜರ್ ಬ್ಲಾಕ್ 2ನೇ ಹಂತ ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 8 ಜನತಾ ಕಾಲೋನಿ ಸಾಮಾನ್ಯ, ವಾರ್ಡ್ ಸಂಖ್ಯೆ 9 ಸಿದ್ದಲಿಂಗೇಶ್ವರ ಬ್ಲಾಕ್ ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ 10 ಮಹದೇಶ್ವರ ಬ್ಲಾಕ್ ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 11 ಸಿ.ಕೆ. ಸುಬ್ಬಯ್ಯ ರಸ್ತೆ ಹಿಂದುಳಿದ ವರ್ಗ (ಎ).

ವೀರಾಜಪೇಟೆ: ವಾರ್ಡ್ ಸಂಖ್ಯೆ 1 ಚರ್ಚ್ ರಸ್ಯೆ ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ 2 ದೇವಾಂಗ ಬೀದಿ ಸಾಮಾನ್ಯ, ವಾರ್ಡ್ ಸಂಖ್ಯೆ 4 ತೆಲುಗರ ಬೀದಿ ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ 5 ಮೊಗರಗಲ್ಲಿ ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ 6 ಹರಿಕೇರಿ ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ 7 ನೆಹರು ನಗರ-1 ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 8 ನೆಹರುನಗರ-2 ಹಿಂದುಳಿದ ವರ್ಗ (ಬಿ), ವಾರ್ಡ್ ಸಂಖ್ಯೆ 9 ಸುಭಾಷ್‍ನಗರ ಸಾಮಾನ್ಯ, ವಾರ್ಡ್ ಸಂಖ್ಯೆ 10 ನಿಸರ್ಗ ಲೇಔಟ್ ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ 11 ಪಂಜರ್‍ಪೇಟೆ ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 12 ಮೀನುಪೇಟೆ-1 ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ 13 ಮೀನುಪೇಟೆ-2 ಸಾಮಾನ್ಯ, ವಾರ್ಡ್ ಸಂಖ್ಯೆ 14 ಗೌರಿಕೆರೆ ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ 15 ಗಾಂಧಿನಗರ ಸಾಮಾನ್ಯ, ವಾರ್ಡ್ ಸಂಖ್ಯೆ 16 ಚಿಕ್ಕಪೇಟೆ ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 17 ಮೈಕ್ರೋವೇವ್ ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ 18 ಶಿವಕೇರಿ ಸಾಮಾನ್ಯ ಮಹಿಳೆ.

ಕುಶಾಲನಗರ: ವಾರ್ಡ್ ನಂ. 1ರ ರಸೂಲ್ ಬಡಾವಣೆ, ವಿವೇಕಾನಂದ ಬಡಾವಣೆ, ತ್ಯಾಗರಾಜ ರಸ್ತೆ ಬಲಬದಿ, ಕೆಂಪಮ್ಮ ಬಡಾವಣೆ, ಆದಿಶಂಕರಾಚಾರ್ಯ ಬಡಾವಣೆ ಭಾಗಶಃ ಹಿಂದುಳಿದ ವರ್ಗ (ಎ)ಗೆ ಮೀಸಲಾಗಿರುತ್ತದೆ.

ವಾರ್ಡ್ ನಂ. 2ರ ಕಾಳಮ್ಮ ಕಾಲೋನಿ, ಆದರ್ಶ ದ್ರಾವಿಡ ಕಾಲೋನಿ, ನೇತಾಜಿ ಬಡಾವಣೆ ಭಾಗಶಃ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುತ್ತದೆ.

ವಾರ್ಡ್ ನಂ. 3 ಸಿಂಗಾರಮ್ಮ ಬಡಾವಣೆ, ಬದ್ರುನ್ನೀಸಾ ಬಡಾವಣೆ, ಶೈಲಜಾ ಬಡಾವಣೆ, ಬಿ.ಎಂ. ರಸ್ತೆ, ವಸಂತಕುಮಾರ್ ಬಡಾವಣೆ, ಬ್ರೇಡ್ಲಿ ಲೇಔಟ್, ನೇತಾಜಿ ಬಡಾವಣೆ, ಕೆಪಿಟಿಸಿಎಲ್ ವಸತಿ ಗೃಹ ಚಿಕ್ಕಣ್ಣ ಬಡಾವಣೆ, ಯೋಗೇಶ್ ಬಡಾವಣೆ, ಆದರ್ಶ ದ್ರಾವಿಡ ಕಾಲೋನಿ ಭಾಗಶಃ ಸಾಮಾನ್ಯ ಮೀಸಲಾತಿಯನ್ನು ಹೊಂದಿದೆ.

ವಾರ್ಡ್ ನಂ. 4ರ ದಂಡಿನಪೇಟೆ, ಹವಾಭಿ ಬಡಾವಣೆ, ಶಾಂತಿಮಾರ್ಗ, ಬಿ.ಎಂ. ರಸ್ತೆ ಎಡಬದಿ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ವಾರ್ಡ್ ನಂ. 5ರ ಬಾಪೂಜಿ ಬಡಾವಣೆ, ಟೌನ್ ಕಾಲೋನಿ, ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ವಾರ್ಡ್ ನಂ. 6ರ ಅವದಾನಿ ಬಡಾವಣೆ, ಬಸಪ್ಪ ಬಡಾವಣೆ, ಸಾಯಿಲೇಔಟ್, ಸೋಮವಾರಪೇಟೆ ರಸ್ತೆ ಬಲಬದಿ, ಸಾರ್ವಜನಿಕ ಆಸ್ಪತ್ರೆ ವಸತಿ ಗೃಹ, ಸೋಮೇಶ್ವರ ಬಡಾವಣೆ ಭಾಗಶಃ ಹಿಂದುಳಿದ ವರ್ಗ (ಎ)ಗೆ ಮೀಸಲಾಗಿರುತ್ತದೆ.

ವಾರ್ಡ್ ನಂ. 7 ಬಲಮುರಿ ದೇವಸ್ಥಾನದ ಸುತ್ತಲು, ಶಿವರಾಮಕಾರಂತ ಬಡಾವಣೆ, ಮಾರುತಿ ಬಡಾವಣೆ, ವೆಂಕಟೇಶ್ವರ ಬಡಾವಣೆ, ಓಂಕಾರ ಬಡಾವಣೆ, ಜನತಾ ಕಾಲೋನಿ ಬಲಬದಿ ಸಾಮಾನ್ಯ ಮೀಸಲಾತಿ ಹೊಂದಿದೆ. ವಾರ್ಡ್ ನಂ. 8ರ ಬೈಪಾಸ್ ರಸ್ತೆ ಎಡಬದಿ, ಡಾ. ಎಸ್. ರಾಧಾಕೃಷ್ಣ ಬಡಾವಣೆ, ಗೌಡ ಸಮಾಜ ರಸ್ತೆ ಬಲಬದಿ, ಕೈಗಾರಿಕಾ ಬಡಾವಣೆ, ಸೋಮೇಶ್ವರ ಬಡಾವಣೆ, ಭಾಗಶಃ ಸಾಮಾನ್ಯ ಮಹಿಳೆ ಮೀಸಲಾಗಿದೆ.

ವಾರ್ಡ್ ನಂ. 9ರ ರಥಬೀದಿ ಎಡಬದಿ ಮತ್ತು ಬಲಬದಿ, ಬೈಪಾಸ್ ರಸ್ತೆ ಬಲಬದಿ, ಪೊಲೀಸ್ ವಸತಿ ಗೃಹ, ಪಟ್ಟಣ ಪಂಚಾಯಿತಿ ಕಚೇರಿ, ಕಾವೇರಿ ಬಡಾವಣೆ ಭಾಗಶಃ ಸಾಮಾನ್ಯ ಮೀಸಲಾತಿ ಹೊಂದಿದೆ. ವಾರ್ಡ್ ನಂ. 10ರ ಅಯ್ಯಪ್ಪ ದೇವಸ್ಥಾನ ರಸ್ತೆ ಎಡಭಾಗ, ದಂಡಿನಪೇಟೆ ಮುಖ್ಯ ರಸ್ತೆ, ಬಿ.ಎಂ. ರಸ್ತೆ, ಎಡಬದಿ ಸಾಮಾನ್ಯ ಮೀಸಲಾತಿ ಹೊಂದಿದೆ.

ವಾರ್ಡ್ ನಂ. 11ರ ಇಂದಿರಾ ಬಡಾವಣೆ, ಕಬರಸ್ಥಾನ್ ರಸ್ತೆ ಬಲಭಾಗ, ಬಿ.ಎಂ. ರಸ್ತೆ, ಬಿದ್ದಪ್ಪ ಬಡಾವಣೆ ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿದೆ. ವಾರ್ಡ್ ನಂ. 12ರ ಬೈಚನಹಳ್ಳಿ, ಕಾವೇರಿ ಬಡಾವಣೆ ಭಾಗಶಃ ರೈತಭವನ, ಬಿ.ಎಂ. ರಸ್ತೆ ಬಲಭಾಗ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ವಾರ್ಡ್ ನಂ. 13ರ ಐ.ಬಿ. ರಸ್ತೆ ಬಲಭಾಗ, ಗೌಡ ಸಮಾಜ ರಸ್ತೆ ಎಡಭಾಗ, ಚೊಡೇಗೌಡ ಬಡಾವಣೆ, ಹೌಸಿಂಗ್ ಬೋರ್ಡ್, ಸಿದ್ದಯ್ಯ ಪುರಾಣಿಕ ಬಡಾವಣೆ, ಥೋಮಸ್ ಬಡಾವಣೆ, ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿರುತ್ತದೆ. ವಾರ್ಡ್ ನಂ. 14ರ ಎಚ್.ಆರ್.ಪಿ. ಕಾಲೋನಿ ಕ್ವಾಟ್ರಸ್, ನೆಹೂರು ಬಡಾವಣೆ ಭಾಗಶಃ, ನೀರು ಸರಬರಾಜು ಮಂಡಳಿ ವಸತಿ ಗೃಹ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ವಾರ್ಡ್ ನಂ. 15ರ ಗಂಧದಕೋಟೆ ರಸ್ತೆ ಬಲಬದಿ, ಬಿ.ಎಂ. ರಸ್ತೆ ಬಲಬದಿ, ಗುಂಡೂರಾವ್ ಬಡಾವಣೆ, ಆರ್.ಕೆ. ಲೇಔಟ್, ಆರ್.ಸಿ. ಲೇಔಟ್, ನಂಜುಡೇಶ್ವರ ಬಡಾವಣೆ, ಕರಿಯಪ್ಪ ಬಡಾವಣೆ, ಮಂಜುನಾಥ ಬಡಾವಣೆ, ಚೈತ್ರ ಬಡಾವಣೆ, ಪಿ.ಪಿ. ಸತ್ಯನಾರಾಯಣ ಬಡಾವಣೆ, ಹೊಸ ಹೌಸಿಂಗ್ ಬೋರ್ಡ್ ಕಾಲೋನಿ, ಗೊಂದಿಬಸವನಹಳ್ಳಿ ಎಡಬದಿ, ಮಂಜೇಗೌಡ ಬಡಾವಣೆ, ನೆಹರೂ ಬಡಾವಣೆ ಭಾಗಶಃ ಹಿಂದುಳಿದ ವರ್ಗ (ಬಿ)ಗೆ ಮೀಸಲಾಗಿದೆ.

ವಾರ್ಡ್ ನಂ. 16ರ ಯೋಗಾನಂದ ಬಡಾವಣೆ, ಭವಾನಿ ಬಡಾವಣೆ, ನಿಂಗೇಗೌಡ ಬಡಾವಣೆ, ನಿಜಾಮುದ್ದೀನ್ ಬಡಾವಣೆ, ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆ, ಬಿ.ಎಂ. ರಸ್ತೆ ಎಡಭಾಗ ಸಾಮಾನ್ಯ ಮಹಿಳೆ ಮೀಸಲಾಗಿದೆ.