ಮಡಿಕೇರಿ, ಆ. 2: ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದ ಹೋಬಳಿಗಳಲ್ಲಿ 2018ರ ಆಗಸ್ಟ್ ಮಾಹೆಯಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ತಾ. 3 ರಂದು (ಇಂದು) ಮಧ್ಯಾಹ್ನ 12 ಗಂಟೆಗೆ ಸುಂಟಿಕೊಪ್ಪ, ಮಧ್ಯಾಹ್ನ 1 ಗಂಟೆಗೆ ಕುಶಾಲನಗರ, ತಾ. 4 ರಂದು ಮಧ್ಯಾಹ್ನ 12.30 ಗಂಟೆಗೆ ಶಾಂತಳ್ಳಿ, ಮಧ್ಯಾಹ್ನ 1 ಗಂಟೆಗೆ ಸೋಮವಾರಪೇಟೆ, ತಾ. 6 ರಂದು ಮಧ್ಯಾಹ್ನ 12 ಗಂಟೆಗೆ ಶನಿವಾರಸಂತೆ, ಮಧ್ಯಾಹ್ನ 12.30 ಗಂಟೆಗೆ ಕೊಡ್ಲಿಪೇಟೆ, ತಾ. 7 ರಂದು ಮಧ್ಯಾಹ್ನ 12.30 ಗಂಟೆಗೆ ನಾಪೋಕ್ಲು, ಮಧ್ಯಾಹ್ನ 1 ಗಂಟೆಗೆ ಭಾಗಮಂಡಲ, ತಾ. 8 ರಂದು ಬೆಳಿಗ್ಗೆ 10.30 ಗಂಟೆಗೆ ಬಾಳೆಲೆ, ಬೆಳಿಗ್ಗೆ 11 ಗಂಟೆಗೆ ವೀರಾಜಪೇಟೆಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ ಎಂದು ಮಡಿಕೇರಿ ಉಪವಿಭಾಗದ ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ ತಿಳಿಸಿದ್ದಾರೆ.