ಮಡಿಕೇರಿ, ಆ. 2 : ಪ್ರಸಕ್ತ(2018-19) ಶೈಕ್ಷಣಿಕ ಸಾಲಿಗೆ ಪ್ರಥಮ ಪಿ.ಯು.ಸಿ. ತರಗತಿಗೆ ತಾ. 4 ರವರೆಗೆ ವಾರ್ಷಿಕ ಹಾಗೂ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಂಡ ಶುಲ್ಕದೊಂದಿಗೆ (ವಿಶೇಷ ದಂಡ ಶುಲ್ಕ ರೂ.2,890 ಗಳನ್ನು ಪಾವತಿಸಿ ದಾಖಲಾತಿ ಪಡೆಯಲು) ದಾಖಲಾತಿ ದಿನಾಂಕವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಸ್ತರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.
ಸೂಚಿತ ದಿನಾಂಕಗಳಲ್ಲಿ ದಾಖಲಾಗುವ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ ಶೇ.75 ರಷ್ಟು ಹಾಜರಾತಿಯನ್ನು ಪಡೆಯುವ ಬಗ್ಗೆ ವಿದ್ಯಾರ್ಥಿಗಳಿಂದ ಮುಚ್ಚಳಿಕೆಯನ್ನು ಕಡ್ಡಾಯವಾಗಿ ಪಡೆದು ದಾಖಲಾತಿಯನ್ನು ನೀಡುವುದು. ಈ ವಿದ್ಯಾರ್ಥಿಗಳಿಗೆ ರಜಾ ದಿನಗಳಲ್ಲಿ ಹಾಗೂ ಭಾನುವಾರಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಿ ಇಲ್ಲಿಯವರೆಗೆ ನಷ್ಟವಾಗಿರುವ ಪಾಠಗಳನ್ನು ಸರಿದೂಗಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಸಿ.ಸಿಖಾ ಅವರು ತಿಳಿಸಿದ್ದಾರೆ.