ಗೋಣಿಕೊಪ್ಪ ವರದಿ, ಆ. 2: : ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ತಾ. 3 ರಿಂದ 8 ವರೆಗೆ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಎನ್‍ಎಸ್‍ಎಸ್ ಯೋಜನಾಧಿಕಾರಿ ಮುಕ್ಕಾಟೀರ ಕೆ. ಸುಬ್ರಮಣಿ ತಿಳಿಸಿದ್ದಾರೆ.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ವಿರೇಂದ್ರ ಕುಮಾರ್ ಅವರಿಂದ ಕಾಫಿ ಮತ್ತು ಮೆಣಸಿನ ಬಗ್ಗೆ ಮತ್ತು ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಸಹಪ್ರಾಧ್ಯಾಪಕ ಎಂ.ಎನ್. ರಮೇಶ್ ಅವರಿಂದ ವಿಚಾರ ಸಂಕಿರಣ,. ತಾ. 4 ರಂದು ಜೇನು ಕುಟುಂಬದ ನಿರ್ವಹಣೆ ಬಗ್ಗೆ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಆರ್.ಎಂ. ಕೆಂಚರೆಡ್ಡಿ, ಜೈವಿಕ ಇಂಧನದ ಮಹತ್ವ ಡಾ. ಟಿ.ಎಸ್. ಗಣೇಶ್ ಪ್ರಸಾದ್ ಮಾಹಿತಿ ನೀಡಲಿದ್ದಾರೆ.

ತಾ. 5 ರಂದು ಸಾಕುಪ್ರಾಣಿಗಳಿಗೆ ಉಚಿತ ಲಸಿಕೆ ಕಾರ್ಯಕ್ರಮ, ತಾ.6 ರಂದು ದಂತ ಮಹಾವಿದ್ಯಾಲಯ ಇವರಿಂದ ದಂತ ತಪಾಸಣೆ ಮತ್ತು ಯುವ ವಿಜ್ಞಾನಿ ಡಾ. ಕಾವೇರಮ್ಮ ದೇವಯ್ಯ ಇವರಿಂದ ಆರ್ಕೀಡ್ ಬಗ್ಗೆ ಮಾಹಿತಿ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ತಾ. 7 ರಂದು ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಸಹ ಪ್ರಾಧ್ಯಾಪಕ ಈಶ್ವರ್ ಕೆ.ಎ. ಇವರಿಂದ ಆರೋಗ್ಯ ಕಾಪಾಡುವಲ್ಲಿ ಕ್ರೀಡೆಯ ಪಾತ್ರ ವಿಚಾರ ಸಂಕೀರ್ಣ, ಜಿಲ್ಲಾ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ, ಅರಣ್ಯ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಬಿ.ಎನ್. ಸತೀಶ್ ಅವರಿಂದ ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆ, ಡಾ.ರಾಮಕೃಷ್ಣ ಹೆಗ್ಗಡೆ ಮತ್ತು ಕೆ.ಎಂ. ನಾಣಯ್ಯ ಅವರಿಂದ ಕೃಷಿ ಅರಣ್ಯ ಮತ್ತು ಮರದ ಅಳತೆಯ ಬಗ್ಗೆ ವಿಚಾರ ಸಂಕೀರ್ಣ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿ.ಪಂ. ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ನೆರವೇರಿಸಲಿದ್ದಾರೆ. ಈ ಸಂದರ್ಭ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಚೆಪ್ಪುಡೀರ ಕುಶಾಲಪ್ಪ, ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್, ಸದಸ್ಯರಾದ ಮುಕ್ಕಾಟೀರ ಸಂದೀಪ್, ಸಿ.ಕೆ. ಉದಯ, ಸಿ.ಎನ್. ರಂಜು ಕರುಂಬಯ್ಯ, ಬಿ. ಜಾನ್ಸಿರಾಮು, ಪಿ.ಬಿ. ಚಂದೆ, ಪಿ. ದೇವಿ, ಸಿದ್ದ, ಅಯ್ಯಪ್ಪ, ಹರೀಶ್ ಕುಮಾರ್, ಹೆಚ್.ಪಿ. ಗೌರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವಿತಾ ಎಂ.ಎಲ್. ಭಾಗವಹಿಸಲಿದ್ದಾರೆ.