ಮಡಿಕೇರಿ, ಆ. 2: ಕರ್ನಾಟಕ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರಾಗಿ ಶರತ್ ಚಂದ್ರ ಅವರನ್ನು ಸರಕಾರ ನೇಮಿಸಿದ್ದು, ಪ್ರಸಕ್ತ ಇವರು ದಾವಣಗೆರೆ ಐಜಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇವರು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸಕ್ತ ದಕ್ಷಿಣ ವಲಯ ಐಜಿ ಆಗಿರುವ ಸೌಮೇಂದ್ರ ಮುಖರ್ಜಿ ಅವರನ್ನು ಕರ್ನಾಟಕ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿ ಸರಕಾರ ಬೆಂಗಳೂರಿಗೆ ವರ್ಗಾವಣೆಗೊಳಿಸಿದೆ. ಮುಂದಿನವಾರ ಶರತ್‍ಚಂದ್ರ ಅವರು ಅಧಿಕಾರ ವಹಿಸಿಕೊಳ್ಳಲಿದ್ದು, ಸೌಮೇಂದ್ರ ಮುಖರ್ಜಿ ಅವರಿಗೆ ಬೀಳ್ಕೊಡುಗೆ ಹಮ್ಮಿಕೊಂಡಿರುವದಾಗಿ ಮೈಸೂರು ಕಚೇರಿ ಮೂಲಗಳಿಂದ ಗೊತ್ತಾಗಿದೆ.